ಅನ್ನಪೂರ್ಣ - ಹೃದಯವೀಣೆ ಮಿಡಿಯೆ
Wikisource ಇಂದ
ಚಿತ್ರ: ಅನ್ನಪೂರ್ಣ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು:ಪಿ.ಬಿ.ಶ್ರೀನಿವಾಸ್
ಹೃದಯವೀಣೆ ಮಿಡಿಯೆ ತಾನೆ
ಕಾರಣ ನೀನೆ ಓ ಜಾಣೆ ಕಾರಣ ನೀನೆ ಓ ಜಾಣೇ
||ಪಲ್ಲವಿ||
ಬಿದುರಿನ ಕೊಳಲು ಗಾನದ ಹೊನಲು
ಹರಿಸದೇ ಕೃಷ್ಣನ ಕರ ಸೋಕಲೂ ||2||
ಚಂದ್ರನ ಕಾಣಲು ಮೊರೆಯದೇ ಕಡಲೂ
ತಿಂಗಳ ಬೆಳಕಿನ ರಾತ್ರಿಯೊಳೂ
||ಹೃದಯವೀಣೆ||
ಚೈತ್ರ ಮಾಸದೊಳು ಮಾವು ಚಿಗುರಲು
ಕೋಗಿಲೆ ಹಾಡದೆ ಹರುಷದೊಳು ||2|| ಹೂವು ಅರಳಲೂ ಕಂಪು ಚೆಲ್ಲಲು
ದುಂಬಿ ನಲಿಯದೆ ಗಾನದೋಳೂ
||ಹೃದಯವೀಣೆ||