ಅಮೃತಧಾರೆ - ಗಿಳಿಯು ಪಂಜರದೊಳಿಲ್ಲ
Wikisource ಇಂದ
ಚಿತ್ರ: ಅಮೃತಧಾರೆ
ಸಾಹಿತ್ಯ: ಪುರಂದರದಾಸರು
ಸಂಗೀತ: ಮನೋಮೂರ್ತಿ
ಗಾಯನ: ಸಿ. ಅಶ್ವಥ್
ಪುರಂದರದಾಸರ ಈ ಕೃತಿಯ ಮೂಲ ಹಾಗೂ ಸಂಪೂರ್ಣ ರಚನೆ ಇಲ್ಲಿದೆ.
ಗಿಳಿಯು ಪಂಜರದೊಳಿಲ್ಲ ರಾಮ ರಾಮ! |೨|
ಬರಿದೆ ಪಂಜರವಾಯಿತಲ್ಲ ರಾಮ ರಾಮ! |೨|
ಕಿಳಿಯು ಪಂಜರದೊಳಿಲ್ಲ ರಾಮ ರಾಮ! |೨|
ಅತ್ತ ಕೇಳೆ ಎನ್ನ ಮಾತು ಚಿಕ್ಕದೊಂದು ಗಿಳಿಯ ಸಾಕಿ
ಅತ್ತ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ |೨|
ರಾಮ! ರಾಮಾ
ಗಿಳಿಯು ಪಂಜರ ದೊಳಿಲ್ಲ ರಾಮ ರಾಮ ಅ ಅ ಅ ಅ ಅ ಆ
ಒಂಬತ್ತು ಬಾಗಿಲ ಮನೆಯಲ್ಲಿ ತುಂಬಿದ ಸಂದಣಿ ಇರಲು
ಕಂಬ ಮುರಿದು ಡಿಂಬಬದ್ದು ಅಂಬರಕ್ಕೆ ಹಾರಿತಯ್ಯೋ |೨|
ರಾಮ! ರಾಮಾ
ಗಿಳಿಯು ಪಂಜರ ದೊಳಿಲ್ಲಾ ಅ ಅ ಅ ಅ ಅ ಅ ಅ ಆ