ಗಜಾನನ ಸ್ತುತಿ - ಗಜವದನ ಬೇಡುವೆ

Wikisource ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗಜವದನ ಬೇಡುವೆ |೨|
ಗಜವದನ ಬೇಡುವೆ ಗೌರಿ ತನಯ |೩|
ತ್ರಿಜಗ ವಂದಿತನೆ ಸುರ ನರ ಪೊರೆವನೆ
ಗಜವದನ ಬೇಡುವೆ!

ಪಾಶಾಂಕುಶಧರ ಪರಮ ಪವಿತ್ರ |೨|
ಮೂಷಕ ವಾಹನ ಮುನಿ ಜನ ಪ್ರೇಮ |೩|
ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುರ ನರ ಪೊರೆವನೆ
ಗಜವದನ ಬೇಡುವೆ!

ಮೋದದಿ ನಿನ್ನಯ ಪಾದವ ತೋರೊ ಸಾಧುವಂದಿತನೆ ಆದರದಿಂದಲಿ |೨|
ಸರಸಿಜನಾಭ ಶ್ರೀ |೨|
ಸರಸಿಜನಾಭ ಶ್ರೀ ಪುರಂದರ ವಿಠ್ಠಲನ |೩|
ನಿರತ ನೆನೆಯುವಂತೆ ವರ ದಯ ಮಾಡೊ |೩|

ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುರ ನರ ಪೊರೆವನೆ
ಗಜವದನ ಬೇಡುವೆ
ಬೇಡುವೆ! |೨|

[ಬದಲಾಯಿಸಿ] ಕನ್ನಡ ವಿಕಿಸೋರ್ಸ್

ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |

ವೈಯಕ್ತಿಕ ಉಪಕರಣಗಳು