ಜನಪದ ಸಾಹಿತ್ಯ
Wikisource ಇಂದ
ಪರಿವಿಡಿ |
[ಬದಲಾಯಿಸಿ] ಜನಪದ ಸಾಹಿತ್ಯ
[ಬದಲಾಯಿಸಿ] ಜನಪದ ಗೀತೆಗಳು
[ಬದಲಾಯಿಸಿ] ಗಾದೆಗಳು
- ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ
- ಅಜ್ಞಾತವಾಸದಲ್ಲಿಯೂ ಅಜ್ಞಾನಿಗಳ ಕಾಟ ತಪ್ಪಲಿಲ್ಲ
- ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ
- ಆಗೋದೆಲ್ಲಾ ಒಳ್ಳೇದಕ್ಕೆ
- ಆಡಿಬಂದ ಕತ್ತೆ ಅಡಿಕೆ ತಂದ ಕತ್ತೆಯನ್ನು ಓಡ್ಯಾಡಿಸಿ ಒದ್ದಿತಂತೆ
- ಆನೆ ಮೇಲೆ ಹೋಗುವವನ ಸುಣ್ಣ ಕೇಳಿದ ಹಾಗೆ
- ಇರುಳು ನೋಡಿ ಮರುಳುಗೊಂಡ
- ಉಗುಳಿ ಉಗುಳಿ ರೋಗ ಬೊಗಳಿ ಬೊಗಳಿ ರಾಗ
- ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು
- ಕಳ್ಳನ ನಂಬಿದರೂ ಕುಳ್ಳನ್ನ ನಂಬಬೇಡ
- ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು
- ಕೈ ಕೆಸರಾದರೆ ಬಾಯಿ ಮೊಸರು
- ಗಂಗೆಗೆ ಹೋದರೂ ತಂಬಿಗೆ ಮ್ಯಾಲೆ ಜ್ಞಾನ
- ಗಂಡ ಹೆಂಡಿರ ಜಗಳ ಉಂಡು ಮಲಗುವತನಕ
- ಪಾಲಿಗೆ ಬಂದದ್ದು ಪಂಚಾಮೃತ
- ಬೀದೀಲಿ ಹೋಗೋ ಮಾರೀನ ಮನೆಗೆ ಕರೆದಂತೆ
- ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
- ಮಾಡಿದ್ದುಣ್ಣೋ ಮಹರಾಯ
- ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ ಕಣ್ಣು ಕುರಿ ಮ್ಯಾಲೆ
- ಯಾರದ್ದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ
- ಸಾವಿರ ಸುಳ್ಳು ಹೇಳಿ ಮದುವೆ ಮಾಡು
- ಹಾಸಿಗೆ ಇದ್ದಷ್ಟು ಕಾಲು ಚಾಚು
[ಬದಲಾಯಿಸಿ] ಒಗಟುಗಳು
- ಒಂದು ತೇಲುತ್ತದೆ, ಒಂದು ಮುಳುಗುತ್ತದೆ, ಒಂದು ಕರಗುತ್ತದೆ. ಇವು ಯಾವು?
[ಬದಲಾಯಿಸಿ] ಕನ್ನಡ ವಿಕಿಸೋರ್ಸ್
ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |