ಬೋಣಿ ಆಗದ ಹೃದಯಾನ

ವಿಕಿಸೋರ್ಸ್ದಿಂದ

ಚಿತ್ರ: ಅಣ್ಣ ಬಾಂಡ್
ಸಂಗೀತ : ಹರಿಕೃಷ್ನ
ಗಾಯನ : ಟಿಪ್ಪು
ಸಾಹಿತ್ಯ : ಯೋಗರಾಜ್ ಭಟ್



ಬೋಣಿ ಆಗದ ಹೃದಯಾನ ಹೂವಿನಂಗಡಿ ಮಾಡ್ಕೊಂಡು ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತ
ಅಪ್ಪಿ ತಪ್ಪಿ ನನ್ನನ್ನು ಇವ್ಳು ಅಪ್ಪಿಕೊಂಡಾಗ ಒಳ್ಳೆವ್ನಾಗೆ ಉಳ್ಕೊಳ್ಳೊ ಕ್ಯಾಮೆ ಬೇಕಿತ್ತ
ಓಡಿ ಹೋಗೋ ಹೃದಕ್ಕೊಂದು ಬ್ರೇಕು ಬೇಕಿತ್ತ
ಇವ್ಳಾ ನೋಡೋದಕ್ಕೆ ಒಂದು ಎಕ್ಸ್‌ ಟ್ರಾ ಕಣ್ಣು ಬೇಕಿತ್ತ
ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇ ಬೇಕಿತ್ತ
ಬೋಣಿ ಆಗದ ಹೃದಯಾನ ಹೂವಿನಂಗಡಿ ಮಾಡ್ಕೊಂಡು ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತ


ತಂಗಾಳಿನ ತಬ್ಕೊಂಡು ನೂರು ಮುತ್ತು ಕೊಟ್ಕೊಂಡು ಮೈಕೈ ನೋವು ಮಾಡಿಕೊಂಡ ನಾನು ಲೂಸ
ಹಿಂಗೆ ಇದ್ದ್ರೆ ಯೂಸಾಗಲ್ಲ ನಾಲ್ಕು ಪೈಸ
ಪ್ರೀತಿಯೊಂದು ತಣ್ಣೀರು, ಜಾಸ್ತಿ ಆದ್ರೆ ಬಿಸಿನೀರು, ಕುಡಿದು ನೋಡ್ಲ ಸ್ನಾನ ಮಾಡ್ಲ ಯಾರಾನ ಹೇಳಿ
ವಯಸ್ಸಿನ್ನಲ್ಲಿ ಕಂಫ್ಯೂಷನ್ನು ತುಂಬ ಮಾಮೂಲಿ
ಒಂಟಿ ಪಿಟೀಲು ಅಳ್ತಾ ಇದ್ರೆ ಎಂಥ ಸಂಗೀತ
ಬೇಡ ಅಂದ್ರು ಬೀಳೊ ಕನಸಿಗೊಂದು ಕ್ಯಾಮರ ಬೇಕಿತ್ತ
ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೆಬೇಕಿತ್ತ
ಬೋಣಿ ಆಗದ ಹೃದಯಾನ ಹೂವಿನಂಗಡಿ ಮಾಡ್ಕೊಂಡು ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತ


ಗಂಡು ನವಿಲಿಗೆ ಮಾತ್ರನೇ, ಪುಕ್ಕ ಕೊಟ್ಟ ಭಗವಂತ, ಕುಣಿಯೋ ಕೆಲಸ ಗಂಡಸರಿಗೆ ಹೇಳಿ ಮಾಡ್ಸಿದ್ದು
ಹೆಣ್ಣು ಮಕ್ಕಳು ಕುಣಿಸೋದಕ್ಕೆ ವರ್ಲ್ಡ್ ಫೇಮಸ್ಸು
ಫೀಲಿಂಗಲ್ಲಿ ಒಮ್ಮೊಮ್ಮೆ, ವೈನ್ ಶಾಪಿನ ಮುಂದೇನೆ, ನಡ್ಕೊಂಡ್ ಹೋದ್ರು ಹಿಡ್ಕೊತಾರೆ ನೈಟು ಪೋಲೀಸು
ಯಾವಾನಿಗೆ ಬೇಕು ಸ್ವಾಮಿ ಪ್ರೀತಿ ತಪಸ್ಸು
ಎಲ್ಲ ಇದ್ದ್ರು ಕೂಡ ನಮ್ಮದು ಖಾಲಿ ಏಕಾಂತ
ಇನ್ನು ಬಿಟ್ಟ್ರೆ ಶುರುವಾಗುತ್ತೆ ನಮ್ಮ್ಮ ಪೋಲಿ ವೇದಾಂತ
ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೆಬೇಕಿತ್ತ
ಸೂರ್ಯ ಮುಳುಗೋ ಟೈಂ ಅಲ್ಲಿ ಇವಳು ಕುಂತು ಹೋದಂತ ಬೆಂಚು ಮುಟ್ಟಿ ನೋಡುವ ಕ್ಯಾಮೆ ಬೇಕಿತ್ತ