ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಮಿಂಗ್ಸ್‌ ಎಡ್ವರ್ಡ್ ಎಸ್ಟ್‌ಲಿನ್

ವಿಕಿಸೋರ್ಸ್ದಿಂದ
   ಮೂಲದೊಡನೆ ಪರಿಶೀಲಿಸಿ

ಕಮಿಂಗ್ಸ್‌ ಎಡ್ವರ್ಡ್ ಎಸ್ಟ್‌ಲಿನ್ : 1894-1902. ಅಮೆರಿಕದ ಕವಿ ಮತ್ತು ಚಿತ್ರಕಾರ. ಜನನ ಕೇಂಬ್ರಿಜ್ನ ಮೆಸಚೂಸೆಟ್ಸ್‌ನಲ್ಲಿ. ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಪದವೀಧರನಾದ ಮೇಲೆ (1915) ಒಂದನೆಯ ಮಹಾ ಯುದ್ಧ ಕಾಲದಲ್ಲಿ ಫ್ರೆಂಚ್ ಸೈನ್ಯವಿಭಾಗದ ಆಸ್ಪತ್ರೆ ಗಾಡಿಯ (ಆಂಬ್ಯುಲೆನ್ಸ್‌) ಚಾಲಕನಾಗಿ ಸೇವೆಸಲ್ಲಿಸಿದ. ಅನಂತರ ಮೆಸಚೂಸೆಟ್ಸ್‌ನ ಕ್ಯಾಂಪ್ ಡೇವೆನ್ಸ್‌ ಎಂಬಲ್ಲಿ ಸಾಮಾನ್ಯ ಸೈನಿಕನಾಗಿ ಕೆಲಸ ಮಾಡಿದ. ಫ್ರಾನ್ಸಿನಲ್ಲಿದ್ದಾಗ ಈತ ಸೈನಿಕ ಬಂಧನ ಶಿಬಿರದಲ್ಲಿ ಮೂರು ತಿಂಗಳ ಕಾಲವಿದ್ದು ತನಗಾದ ಅನುಭವಗಳನ್ನು ದಿ ಎನಾರ್ಮಸ್ ರೂಮ್ (1922) ಎಂಬ ಪುಸ್ತಕದಲ್ಲಿ ಬರೆದ. 1920 ಮತ್ತು 1930ರ ದಶಕಗಳಲ್ಲಿ ಈತ ಪ್ಯಾರಿಸ್ ಮತ್ತು ಗ್ರೀನಿಚ್ಗಳಲ್ಲಿ ಬಹುಮಟ್ಟಿನ ಖ್ಯಾತಿಗಳಿಸಿದ. ಅಮೆರಿಕದ ಆಧುನಿಕ ಕವಿಗಳಲ್ಲಿ ಅತಿ ನಿಷ್ಠಾವಂತ ಪ್ರಯೋಗಕಾರ ನೆನಸಿಕೊಂಡವನೀತ. ಐಹಿಕ ಭೋಗಪ್ರವೃತ್ತಿಯ ಕಟುವಿಮರ್ಶೆಯನ್ನೂ ಕವನಗಳಲ್ಲಿ ಈತನದೇ ಆದ ಅಕ್ಷರಜೋಡಣೆಯ ವಿನ್ಯಾಸವನ್ನೂ ಕಾಣಬಹುದು. ಈತ ನಿಸರ್ಗಪ್ರೇಮಿ. ಪ್ರೇಮ ಮತ್ತು ಯೌವ್ವನಗಳ ವಿಚಾರವಾಗಿ ತನ್ನ ಕವನಗಳಲ್ಲಿ ಹೆಚ್ಚಿನ ವಿವರಗಳನ್ನು ಇತ್ತಿದ್ದಾನೆ. ದಬ್ಬಾಳಿಕೆಯನ್ನು ಕಟುವಾಗಿ ಟೀಕಿಸಿ ಖಂಡಿಸಿದ್ದಾನೆ. ಈತ ಹುಟ್ಟು ಭಾವಗೀತೆಕಾರ. ಇವನ ಟೂಲಿಫ್ಸ್‌ ಅಂಡ್ ಚಿಮ್ನೀಸ್ 1923ರಲ್ಲಿ ಪ್ರಕಟವಾಯಿತು. ಅಮೆರಿಕದ ಸಾಹಿತ್ಯಕ್ಷೇತ್ರದಲ್ಲಿ ವಿಶಿಷ್ಟ ಸೇವೆಸಲ್ಲಿಸಿದ ಕಾರಣ ಈತನಿಗೆ ಡಯಲ್ ಬಹುಮಾನ ದೊರಕಿತು (1925). ನಕ್ಷಾನಿರೂಪಣೆಯ ವೈಚಿತ್ರ್ಯದಲ್ಲಿ ತನ್ನದೇ ಆದ ಒಂದು ವಿಶಿಷ್ಟತೆಯನ್ನು ಈತ ಕೋರಿದ್ದಾನೆ. ಇವನ ರಚನೆಗಳಲ್ಲಿ ಮುಖ್ಯವಾದುವೆಂದರೆ :XLI ಪೋಯಮ್ಸ್ (೧೯೨೫)', & (೧೯೨೫) ಈಸ್ 5 (1926), ಹಿಮ್ (1928), ಅIಔPW (1931), ವೀವ (1931), ಈಮಿ (1933), ನೋ ಥ್ಯಾಂಕ್ಸ್‌ (1935), 1/20 (1937), ಫಿಫ್ಟಿ ಪೊಯೆಮ್ಸ್‌ (1940), I x I (1944) ಮತ್ತು ್ಕ : ನಾಮೆಕ್ಕ್ಲೇಚರ್ಸ್‌ (1953), ಈತನ ಕವನ ಸಂಕಲನಕ್ಕೆ (1954) ಒಂದು ರಾಷ್ಟ್ರೀಯ ಪುಸ್ತಕ ಬಹುಮಾನ ಪ್ರಶಸ್ತಿ ಬಂದಿದೆ (1955).

ಇವನ ಹಿಮ್ ಎಂಬುದು 21 ದೃಶ್ಯಗಳನ್ನೊಳಗೊಂಡ, ಕಾಲ್ಪನಿಕ ಆಕೃತಿಗಳ ದೃಶ್ಯಪರಂಪರೆ. ಸಿಕ್ಸ್‌ ನಾನ್ ಲೆಕ್ಟರ್ಸ್‌ (1953)-ಒಂದು ವಿಮರ್ಶಕ ಕೃತಿ.

CIOPW ಎಂಬುದು ಚಾರ್ಕೋಲ್, ಇಂಕ್, ಆಯಿಲ್, ಪೆನ್ಸಿಲ್ ಮತ್ತು ವಾಟರ್ಕಲರ್ ಎಂಬ ಇಂಗ್ಲಿಷ್ ಪದಗಳ ಮೊದಲ ಅಕ್ಷರಗಳಿಂದ ಆದುದು. ಈ ಗ್ರಂಥ ಕಮಿಂಗ್ಸ್‌ನ ರೇಖಾ ಹಾಗೂ ವರ್ಣಚಿತ್ರಗಳ ಸಂಕಲನವಾಗಿದೆ. (ಎಂ.ಕೆ.ಎನ್.;ಕೆ.ಬಿ.ಪಿ.)