ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟ್ಯಾಬಿಬುಯ

ವಿಕಿಸೋರ್ಸ್ದಿಂದ

ಟ್ಯಾಬಿಬುಯ ಬಿಗ್ನೋನಿಯೇಸಿ ಕುಟುಂಬಕ್ಕೆ ಸೇರಿದ ಸುಂದರವಾದ ಅಲಂಕಾರವೃಕ್ಷ. ಇದರ ತವರು ಮೆಕ್ಸಿಕೋ. ಪ್ರಪಂಚದ ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲಿ ಉದ್ಯಾನಗಳಲ್ಲಿ ಬೆಳೆಸುವರು. ಈ ಜಾತಿಯಲ್ಲಿ ಬಿಳಿ, ಕೆಂಪು, ಹಳದಿ, ಕಂದು ಇತ್ಯಾದಿ ಬಣ್ಣದ ಹೂವುಗಳುಳ್ಳ ಸುಮಾರು 6 ಪ್ರಭೇದಗಳಿವೆ. ಎಲ್ಲವೂ ಸಾಧಾರಣವಾಗಿ ಮರಗಳು ; 6-10m. ಎತ್ತರ ಬೆಳೆಯುವುವು. ಹೂ ಬಿಡುವ ಮುನ್ನ ಎಲೆಗಳಲ್ಲಿ ಉದುರಿಹೋಗುವುದು ಇವುಗಳ ವಿಶೇಷ ಲಕ್ಷಣ. ಇಂಥ ಕಾಲದಲ್ಲಿ ಇವು ಅತ್ಯಂತ ಸುಂದರವಾಗಿ ಆಕರ್ಷಕವಾಗಿ ಕಾಣುತ್ತವೆ. ಎಲೆಗಳು ಸರಳರೀತಿಯವು ಅಭಿಮುಖದ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಯ ಅಂಚು ಅಖಂಡರೀತಿಯದು. ಹೂಗಳು ರೆಂಬೆಗಳ ತುದಿಗಳಲ್ಲಿ ರೆಸೀóಮ್ ಮಾದರಿಯ ಹೂಗೊಂಚಲುಗಳಲ್ಲಿ ಅರಳುತ್ತವೆ. ಹೂಬಿಡುವ ಕಾಲ ಡಿಸೆಂಬರಿನಿಂದ ಮೇ ತಿಂಗಳ ವರೆಗೆ. ದಳಸಮೂಹ ಕೊಳವೆಯಾಕಾರದ್ದು. ಫಲ ಸಂಪುಟ ಮಾದರಿಯದು. ಇದರ ಉದ್ದ ಸುಮಾರು 15 ಛಿm. ಬೀಜಗಳಿಗೆ ರೆಕ್ಕೆಗಳಿವೆ. ಟ್ಯಾಬಿಬುಯದ ಮುಖ್ಯ ಪ್ರಭೇದಗಳು ಸ್ಪೆಕ್ಟಾಬಿಲಿಸ್, ರೋಸಿóಯ ಅರ್ಜೆಂಟಿಯ, ಗೈಯಕನ್, ಕ್ರೈಸ್ಯಾಂತ, ಮತ್ತು ಲ್ಯೂಕೊಕ್ಸೈಲಗಳು. ಇವನ್ನು ಬೀಜಗಳಿಂದ ವೃದ್ಧಿಮಾಡಬಹದು. ಒಟ್ಲುಪಾತಿಗಳಲ್ಲಿ ಬಿತ್ತಿ ಸಸಿಗಳನ್ನು ಬೆಳಸಿ ಅವಕ್ಕೆ 10-12 ತಿಂಗಳ ವಯಸ್ಸಾದ ಅನಂತರ ಅಪೇಕ್ಷಿತ ಸ್ಥಳಗಳಿಗೆ ವರ್ಗಾಯಿಸಲಾಗುತ್ತದೆ. (ಎಂ.ಎಚ್.ಎಂ.; ಎಸ್‍ಐ.ಎಚ್.)