ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮ್ಯಾಕ್ಸ್ವೆಲ್, ಜೇಮ್ಸ್ ಕ್ಲರ್ಕ್
ಮ್ಯಾಕ್ಸ್ವೆಲ್, ಜೇಮ್ಸ್ ಕ್ಲರ್ಕ್
1831-79. ಸ್ಕಾಟ್ಲೆಂಡಿನ ಪ್ರಸಿಧ್ಧ ಸೈದ್ಧಾಂತಿಕ ಭೌತವಿe್ಞÁನಿ. ಅನೇಕ ಮೂಲಭೂತ ಸ್ವರೂಪದ ಭೌತವಿಚಾರಗಳನ್ನು ಮಂಡಿಸಿ ಭೌತವಿe್ಞÁನ ಪ್ರಗತಿಗೆ ಕಾರಣರಾದ ಪ್ರತಿಭಾನ್ವಿತ ವಿe್ಞÁನಿಗಳ ಪಂಕ್ತಿಯಲ್ಲಿ ನ್ಯೂಟನ್ ತರುವಾಯದ ಸ್ಥಾನ ಪಡೆದಿದ್ದಾನೆ. ಜನ ಎಡಿನ್ ಬರೋದಲ್ಲಿ 1831 ನವಂಬರ್ 13 ರಂದು. ಇವನ ತಂದೆ ಜಮೀನ್ದಾರನಾದ ವಕೀಲ, ಗ್ರಾಮೀಣ ಪರಿಸರದಲ್ಲಿ ನೆಳೆದ ನ್ಯಾಕ್ಸ್ವೆಲ್ ಎಡಿನ್ಬರೋ ಅಕಡೆಮಿಯಲ್ಲಿ ಶಾಲೆ ಸೇರಿದಾಗ ಇವನ ಹಳ್ಳಿಯು ಉಡುಪು ಮತ್ತು ನಡತೆಯಿಂದಾಗಿ ಸಹಪಾಠಿಗಳು ಇವನನ್ನು ಚುಡಾಯಿಸಿ ಅಡ್ಡ ಹೆಸರಿನಿಂದ ಕರೆದು ಲೇವಡಿ ಮಾಡುತ್ತಿದ್ದುದಿತ್ತು. ಆಜನ್ಮ ಮಹಾಗಣಿತಮತಿಯಾದ ಈತ ದೀರ್ಘವೃತ್ತವನ್ನು (ಎಲಿಪ್) ಎಳೆಯುವ ವಿಧಾನವನ್ನು ಹದಿನಾಲ್ಕರ ಹರೆಯದಲ್ಲಿ ಸೂಚಿಸಿದ. ಈ ಶೋಧನೆ ಈತನಿಗೆ ಅಕಡೆಮಿಯ ಪದಕ ತಂದುಕೊಟ್ಟಿತು. ಮರುವರ್ಷವೇ (ಪ್ರಾಯ ಹದಿನೈದು) ಈತ ರಾಯಲ್ ಸೊಸೈಟಿಗೆ ಲೇಖನಗಳನ್ನು ಒಪ್ಪಿಸಿದ. ಹದಿನಾರರಲ್ಲಿ ಎಡಿನ್ಬರೋ ವಿಶ್ವವಿದ್ಯಾಲಯ ಸೇರಿದ. ಮುಂದೆ ಟ್ರಿನಿಟಿ ಕಾಲೇಜಿಗೆ ದಾಖಲಾದ. 1854 ರಲ್ಲಿ ಗಣಿತ ಪದವಿ ಪಡೆದ.
ಪದವಿ ಪಡೆದ ಅನಂತರ ಈತ ನಡೆಸಿದ ಮೊದಲ ಸಂಶೋಧನೆ ಬಣ್ಣಗಳ ಗ್ರಹಿಕೆಗೆ ಸಂಬಂಧಿಸಿದ್ದು. ಕೆಂಪು, ಹಸುರು, ನೀಲಿ ಬಣ್ಣಗಳಿದ್ದರೆ ಅವುಗಳ ಮಿಶ್ರಣದಿಂದ ಯಾವುದೇ ಇತರ ಬಣ್ಣ ಪಡೆಯಬಹುದೆಂಬುದನ್ನು ಶೋಧಿಸಿದ. ಈ ಸಂಶೋಧನೆಯ ಹಿರಿಮೆ ಗಮನಿಸಿದ ರಾಯಲ್ ಸೊಸೈಟಿ ಈತನಿಗೆ ಪದಕ ಪ್ರಧಾನಿಸಿ ಗೌರವಿಸಿತು. ಶನಿಗ್ರಹವನ್ನು ಆವರಿಸಿರುವ ಬಳೆಗಳು ಅಂದಿನ ವಿಶೇಷ ಆಕರ್ಷಣೆಗಳು, ಮಿಗಿಲಾಗಿ ಸವಾಲುಗಳು ಕೂಡ. ಅವು ಕಣ್ಣಿಗೆ ಕಾಣುವ ರೀತಿಯ ಧೃಡತಟ್ಟೆಗಳು ಎಂದು ವಿe್ಞÁನಿಗಳು ಭಾವಿಸಿದ್ದರು. ಮ್ಯಾಕ್ಸ್ ವೆಲ್ ಅವನ್ನು ನೋಡದೆಯೂ ಕೇವಲ ಗಣಿತಗಣನೆಗಳ ಆಧಾರದಿಂದ ಅವು ಚಲಿಸುತ್ತಿರುವ ಅಸಂಖ್ಯ ವಿವಿಕ್ತಕಣಗಳ ಸಮೂಹ ಎಂದು ಸಾಧಿಸಿದ-ಮಂಗಳ ಹಾಗೂ ಗುರು ಕಕ್ಷೆಗಳ ನಡುವೆ ಇರುವ ಕ್ಷುದ್ರಗ್ರಹಗಳ ಹೊನಲಿನ ತೆರದಲ್ಲಿ. ತನ್ನ ಸಂಶೋಧನೆಯನ್ನು ಶನಿಗ್ರಹದ ಉಂಗುರಗಳ ಚಲನೆಯ ಸ್ಥಿರತೆ ಎಂಬ ಲೇಖನದಲ್ಲಿ ಪ್ರಕಟಿಸಿದ (1856). ಇದಕ್ಕೆ ಕೇಂಬ್ರಿಜಿನಲ್ಲಿ ಆಡಮ್ಸ್ ಬಹುಮಾನ ದೊರೆಯಿತು. ಇದರಿಂದ ಪ್ರಭಾವಿತನಾದ ಮ್ಯಾಕ್ಸ್ವೆಲ್ ಅನಿಲಗಳ ಚಲನಸಿದ್ಧಾಂತದತ್ತ ಗಮನ ಹರಿಸಿದ. ಅನಿಲಗಳಲ್ಲಿರುವ ಚಲಿಸುವ ಅಣುಗಳು ಎಲ್ಲ ದಿಕ್ಕುಗಳಲ್ಲೂ ಎಲ್ಲ ಜವಗಳಲ್ಲೂ ಧಾವಿಸುತ್ತವೆ ಎಂದು ಸಾದಿಸಿದ. ಬೇರೆ ಬೇರೆ ಅಣುಗಳಲ್ಲಿ ವೇಗಗಳು ಹೇಗೆ ಹಂಚಿಹೋಗುತ್ತವೆ ಎಂಬುದನ್ನು ನಿರೂಪಿಸಿದ. ಅನಿಲಗಳ ಸರಾಸರಿ ಮುಕ್ತ ಪಥವನ್ನು (ಮೀನ್ ಫ್ರೀ ಪಾತ) ಶೋದಿಸಿದ. ಅನಿಲಗಳ ಶ್ಯಾನತ್ವದ (ವಿಸ್ಕಾಸಿಟಿ) ಬಗ್ಗೆ ಪ್ರಯೋಗ ನಡೆಸಿ ತನ್ನ ತೀರ್ಮಾನಗಳು ಸರಿಯೇ ಎಂಬುದನ್ನು ಪರಿಶೀಲಿಸಿದ. ಈ ವಿಷಯಗಳನ್ನೊಳಗೊಂಡ ಇವನ ಲೇಖನ 1860 ರಲ್ಲಿ ಪ್ರzಕಟವಾಯಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮುಂದೆ ಬರೆದ ಅನೇಕ ಲೇಖನಗಳನ್ನೊಳಗೊಂಡ ಉಷ್ಣ ಸಿದ್ಧಾಂತ ಎಂಬ ಗ್ರಂಥ 1877 ರಲ್ಲಿ ಪ್ರಕಟವಾಯಿತು.
ವಿದ್ಯುತ್ಕಾಂತಸಿದ್ದಾಂತ (ಎಲೆಕ್ಟ್ರೋಮ್ಯಾಗ್ನೆಟಿಕ್ ತಿಯೋರಿ) ವಿe್ಞÁನಕ್ಷೇತ್ರಕ್ಕೆ ಇವನ ಅಮೂಲ್ಯ ಕೊಡುಗೆ. ಇದಕ್ಕೆ ಸಂಬಂಧಿಸಿದ ಇವನ ಅಭ್ಯಾಸಗಳು ಕೇಂಬ್ರಿಜ್ನಲ್ಲೇ ಆರಂಭವಾಗಿದ್ದವು. ಫ್ಯಾರಡೆಯ ಬಲರೇಖೆಗಳು ಎಂಬ ಲೇಖನ ಎರಡು ಭಾಗಗಳಲ್ಲಿ 1855 ಮತ್ತು 1856 ರಲ್ಲಿಯೂ ಭೌತ ಬಲರೇಖೆಗಳು ಎಂಬ ಎರಡನೆಯ ಲೇಖನ 1861 ರಲ್ಲಿಯೂ ಪ್ರಕಟವಾದುವು. ಇದರ ವಿವರಗಳನ್ನೊಳಗೊಂಡ ವಿದ್ಯುತ್ಕಾಂತ ಕ್ಷೇತ್ರದ ಕ್ರಿಯಾತ್ಮಕ ಸಿದ್ದಾಂತ ಎಂಬ ಲೇಖನವನ್ನು ಈತ 1864 ರಲ್ಲಿ ರಾಯಲ್ ಸೊಸೈಟಿಗೆ ಒಪ್ಪಿಸಿದ. ಈ ವಿಷಯಗಳ ಅತ್ಯುತ್ತಮ ರೀತಿಯ ವಿವರಣೆ ಈತ ಬರೆದ ವಿದ್ಯುತ್ ಮತ್ತು ಕಾಂತ ಪ್ರಬಂಧದಲ್ಲಿದೆ.
ಬೆಳಕು ಮತ್ತು ವಿದ್ಯುತ್ ಕ್ಷೇತ್ರಗಳ ನಡುವೆ ಏನಾದರೂ ಸಂಬಂಧವಿದೆಯೇ ಎಂದು ತಿಳಿಯಲು ಮೈಕಲ್ ಫ್ಯಾರಡೆ ಪ್ರಯೋಗ ನಡೆಸಿ ದೊರೆತ ವಿವರಗಳನ್ನು ಉಪಮೆಗಳ ಸಹಾಯದಿಂದ ನಿರೂಪಿಸಿದ್ದ. ಇವುಗಳಿಗೆ ಯುಕ್ತ ಗಣಿತಪರಿಬಾಷೆ ತೊಡಿಸಿ ಭದ್ರವಾಗಿ ನಿಲ್ಲಿಸಿದಾತ ಮ್ಯಕ್ವೆಲ್. ಬೆಳಕಿನ ವಿದ್ಯುತ್ಕಾಂತ ಸಿದ್ದಾಂತದಲ್ಲಿ ಫ್ರಾರಡೆಗೆ ತಾನು ಸಲ್ಲಿಸತಕ್ಕ ಋಣವನ್ನು ಮ್ಯಾಕ್ಸ್ವೆಲ್ ಸ್ಮರಿಸಿದ್ದಾನೆ. ಆಕಾಶವೆಲ್ಲವೂ ವಿದ್ಯುತ್ತಿನಿಂದ ಧ್ರವೀಕರಣವಾಗಬಲ್ಲ ಈತರಿನಿಂದ ತುಂಬಿದೆ ಎಂದು ಭಾವಿಸಿದ ಮ್ಯಾಕ್ಸ್ವೆಲ್ ವಿಚಲನೆಗೊಳ್ಳುವ ವಿದ್ಯುತ್ಕ್ಷೇತ ಈತರಿನಲ್ಲಿ ವಿಸ್ಥಾಪಿತ ವಿದ್ಯುತ್ಪ್ರವಾಹವನ್ನು (ಡಿಸ್ಪ್ಲೇಸ್ಡ್ ಎಲೆಕ್ಟ್ರಿಕ್ ಕರೆಂಟ್) ಉಂಟುಮಾಡುವುದೆಂದು ತರ್ಕಿಸಿದ. ಅಂದರೆ ವಾಹಕಗಳಲ್ಲಿಯೇ ಅಲ್ಲದೆ ಅವಾಹಕಗಳಲ್ಲಿ ಹಾಗೂ ಶೂನ್ಯಾಕಾಶದಲ್ಲಿ ಕೂಡ ವಿದ್ಯುತ್ ಪ್ರವಾಹವಿರುವುದು ಸಾಧ್ಯ ಎಂದು ಇದರರ್ಥ. ಈ ಭಾವನೆಯಿಂದ ವಿದ್ಯುತ್ಕಾಂತ ಸಿದ್ಧಾಂತ ಸಾಧ್ಯವಾಯಿತು. ಆಂದೋಲಿತ ವಿದ್ಯುತ್ ಕ್ಷೇತ್ರದೊಂದಿಗೆ ಕಾಂತಕ್ಷೇತ್ರವೂ ಆಂದೋಲಿತವಾಗುತ್ತದೆ ಎಂದು ಮ್ಯಾಕ್ಸ್ವೆಲ್ ಸಾಧಿಸಿದ. ವಿದ್ಯುದಾವೇಶದ ಆಂದೋಲನದಿಂದ ವಿದ್ಯುತ್ಕಾಂತ ತರಂಗ ಹೊರಹೊಮ್ಮಿ ಪ್ರಸಾರವಾಗುತ್ತದೆ. ಕಾಂತಕ್ಷೇತ್ರ ಮತ್ತು ವಿದ್ಯುತ್ಕ್ಷೇತ್ರಗಳ ದಿಕ್ಕುಗಳು ಮತ್ತು ವಿದ್ಯುತ್ಕಾಂತ ತರಂಗಗಳು ಪ್ರಸಾರವಾಗುವ ದಿಕ್ಕು ಪರಸ್ಪರ ಲಂಬವಾಗಿವೆ ಎಂದು ಸೈದ್ಧಾಂತಿಕವಾಗಿ ನಿರೂಪಿಸಿದ. ಈ ತರಂಗಗಳ ವೇಗ ಸೆಕೆಂಡಿಗೆ ಮೂರು ಲಕ್ಷ ಕಿಲೋಮೀಟರ್ ಎಂದು ಗಣಿಸಿದ. ಬೆಳಕಿನ ಬೇಗವೂ ಇಷ್ಟೆ ಎಂದು ಪ್ರಯೋಗಗಳಿಂದ ತಿಳಿಯಿತು. ಬೆಳಕು ವಿದ್ಯುತ್ಕಾಂತ ತರಂಗವಾದರೆ ಮಾತ್ರ ಇದು ಸಾಧ್ಯ ಎಂದು ಮ್ಯಾಕ್ಸ್ವೆಲ್ ಊಹಿಸಿದ. ಇದು ನಿಜವೆಂದು ರುಜುವಾತಾಯಿತು. ಜರ್ಮನ್ ವಿe್ಞÁನಿ ಹಟ್ರ್ಸ್ 1888 ರಲ್ಲಿ ಪ್ರಾಯೋಗಿಕವಾಗಿ ವಿದ್ಯುತ್ಕಾಂತ ತರಂಗಗಳನ್ನು ಉತ್ಪನ್ನಮಾಡಿ ಅವುಗಳ ವೇಗ ಸರಿಸುಮಾರು ಬೆಳಕಿನ ವೇಗದಷ್ಟೇ ಇದೆ ಎಂದುತೋರಿಸಿದ. ಇದರಿಂದ ಮ್ಯಾಕ್ಸ್ವೆಲ್ನ ಸಿದ್ಧಾಂತ ಸಮರ್ಥನೆಗಳು ದೊರೆತವು. ಮ್ಯಾಕ್ಸ್ವೆಲ್ಲನ ನಾಲ್ಕು ಪುಟ್ಟ ಸಮೀಖರಣಗಳಲ್ಲಿ ವಿದ್ಯುತ್ಕಾಂತ ತರಂಗಗಳನ್ನ ಮಹಾಸಾಮ್ರಾಜ್ಯದ-ಅಂದರೆ ರೇಡಿಯೋ ತರಂಗ, ಉಷ್ಣ, ಬೆಳಕು, ಅತಿನೇರಿಳೆ ತರಂಗ, ಎಕ್ಸ್ಕಿರಣ, ಗ್ಯಾಮ ಕಿರಣ ಇವೆಲ್ಲದರ-ಗುಣಲಕ್ಷಣಗಳು ಅಡಕವಾಗಿವೆ. ಗಣಿತವಿದರ ಪ್ರಕಾರ ಭೌತ ವಿಜ್ಞಾನವೆಲ್ಲ ಐದಾರು ಅವಕಲಸಮೀಕರಣಗಳ ವಿಸ್ತøತ ವ್ಯಾಖ್ಯಾನ. ಇವುಗಳಲ್ಲಿ ಮ್ಯಾಕ್ಸ್ವೆಲ್ಲನ ಸಮೀಕರಣಗಳಿಗೆ ಅಗ್ರಮಾನ್ಯ ಸ್ಥಾನ. ಇವುಗಳಿಗೆ ನೀಡಿರುವ ನಿಷ್ಕøಷ್ಟತೆಯಿಂದ ಎಲ್ಲ ಕ್ಷೇತ್ರ ಸಿದ್ದಾಂತಗಳಿಗೂ ಇವು ಮಾದರಿಯಾಗಿವೆ. ಮ್ಯಾಕ್ಸ್ವೆಲ್ಲನ ಕೊಡುಗೆ ಇಲ್ಲದಿದ್ದರೆ ಕ್ಷೇತ್ರ ಸಿದ್ದಾಂತ ಇಷ್ಟು ಖಚಿತವಾದ ಸಿದ್ದಾಂತವಾಗದೇ ಅಪ್ರಯೋಜಕವಾಗಿರುತ್ತಿತ್ತು.
ಮ್ಯಾಕ್ಸ್ವೆಲ್ 1860 ರಲ್ಲಿ ಲಂಡನ್ನಿನ ಕಿಂಗ್ಸ್ ಕಾಲೇಜನ್ನು ಪ್ರಾಧ್ಯಾಪಕನಾಗಿ ಸೇರಿದ. 1865 ರಲ್ಲಿ ಆವೃತ್ತಿ ತೊರೆದು ತನ್ನ ಜಮೀನಿನ ಮನೆಯಲ್ಲಿ, ಹಳ್ಳಿಯ ವಾತಾವರಣದಲ್ಲಿ ವಿದ್ಯುತ್ಕಾಂತ ಸಿದ್ಧಾಂತವನ್ನು ಪರಿಪೂರ್ಣಗೊಳಿಸುವುದರಲ್ಲಿ ಹೆಚ್ಚು ಕಾಲ ಕಳೆದ. ಕೇಂಬ್ರಿಜಿಗೆ ನಿಯತಕಾಲಿಕ ಭೇಟಿಗಳನ್ನು ನೀಡುತ್ತಿದ್ದ. ಅಲ್ಲಿ ಗಣಿತವಿe್ಞÁನದ ಪರೀಕ್ಷಕನಾಗಿರುತ್ತಿದ್ದ. ಮುಂದೆ 1871 ರಲ್ಲಿ ಈತ ಕೇಂಬ್ರಿಜಿನ ಪ್ರಾಯೋಗಿಕ ಭೌತವಿe್ಞÁನದ ಮೊದಲ ಪ್ರಾಧ್ಯಾಪಕ ಹುದ್ದೆಯನ್ನು ಅಷ್ಟೇನೂ ಒಲವಿಲ್ಲದೇ ಒಪ್ಪಿಕೊಂಡ. ರಸಾಯನವಿe್ಞÁನಿ ಹೆನ್ರಿ ಕ್ಯಾವೆಂಡಿಷನ e್ಞÁಪಕಾರ್ಥ ಪ್ರಯೋಗಶಾಲೆ ನಿರ್ಮಿಸಲು ನಿರ್ದೇಶಕನಾಗಿ ಶ್ರಮಿಸಿದ್ದ. ಕ್ಯಾವೆಂಡಿಷನ ಸಂಶೋಧನೆಗಳನ್ನು ಸಂಪಾದಿಸಿ ಪ್ರಕಟಿಸಿದ. ಆ ಪ್ರಯೋಗಶಾಲೆಯ ಹಿರಿಮೆಗೆ ಮ್ಯಾಕ್ಸ್ವೆಲ್ನ ಪ್ರತಿಭೆಯೇ ಕಾರಣ. ಈತ 1879 ರ ನವೆಂಬರ್ 5 ರಂದು ಕಾಲವಶನಾದ. (ಸಿ.ಎಚ್.ಆರ್)