ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೇಡಿಯೊ ಖಗೋಳವಿಜ್ಞಾನ

ವಿಕಿಸೋರ್ಸ್ದಿಂದ

ರೇಡಿಯೊ ಖಗೋಳವಿಜ್ಞಾನ - ಖಗೋಳಕಾಯಗಳು ಪ್ರಸರಿಸುವ ರೇಡಿಯೊ ತರಂಗಗಳನ್ನು ಅಭ್ಯಸಿಸುವ ವಿe್ಞÁನವಿಭಾಗ. ಯಾವುದೇ ಕಾಯ ತನ್ನ ಉಷ್ಣತೆಗೆ ಅನುಗುಣವಾಗಿ ವಿದ್ಯುತ್ಕಾಂತ ತರಂಗಗಳನ್ನು ಉತ್ಸರ್ಜಿಸುವಾಗ ನಿರ್ದಿಷ್ಟ ತರಂಗಗಳಲ್ಲಿ ಹೆಚ್ಚಿನ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಸೂರ್ಯನನ್ನು ಕೃಷ್ಣಕಾಯ (ಬ್ಲ್ಯಾಕ್‍ಬಾಡಿ) ಎಂದು ಪರಿಗಣಿಸಿದರೆ ಅದರ ಉತ್ಸರ್ಜನೆ ಎಲ್ಲ ತರಂಗಗಳಲ್ಲಿದ್ದರೂ 5700 ಕೆಲ್ವಿನ್‍ಗೆ ಅನುಗುಣವಾಗಿ ದೃಕ್‍ತರಂಗಗಳಲ್ಲಿ ಅದು ಗರಿಷ್ಠ. ಅತಿ ಹ್ರಸ್ವ ಅಲೆಯುದ್ದದ ಎಕ್ಸ್‍ಕಿರಣಗಳಿಂದ ಹಿಡಿದು ಅತಿ ದೀರ್ಘ ಅಲೆಯುದ್ದದ ರೇಡಿಯೊತರಂಗಗಳನ್ನೂ ಅದು ಉತ್ಸರ್ಜಿಸುತ್ತದೆ. ಇದೇ ರೀತಿ ಇತರ ಕಾಯಗಳು ಕೂಡ ಎಲ್ಲ ತರಂಗಗಳನ್ನೂ ಉತ್ಸರ್ಜಿಸುತ್ತವೆ. ಆದರೆ ಭೂವಾಯುಮಂಡಲ ಬೆಳಕು ಮತ್ತು ರೇಡಿಯೊ ಹೊರತಾಗಿ ಉಳಿದೆಲ್ಲವನ್ನೂ ತಡೆಹಿಡಿಯುತ್ತದೆ. ಆದ್ದರಿಂದ ಬೆಳಕಿನಂತೆ ರೇಡಿಯೊತ ರಂಗಗಳನ್ನು ಕೂಡ ಭೂಮಿಯ ಮೇಲಿಂದಲೇ ಅಭ್ಯಸಿಸುವುದು ಸಾಧ್ಯವಾಗುತ್ತದೆ. ಪ್ರಸ್ತುತ ಲೇಖನದಲ್ಲಿ ರೇಡಿಯೊ ಖಗೋಳವಿe್ಞÁನ ವನ್ನು ಆರು ವಿಭಾಗಗಳಾಗಿ ವಿಂಗಡಿಸಿದೆ: 1. ಉಗಮ, 2. ರೇಡಿಯೊ ಉತ್ಸರ್ಜನೆ ತರಂಗಗಳ 3. ರೇಡಿಯೊ ದೂರದರ್ಶಕಗಳು, 4. ಸೌರವ್ಯೂಹದ ಕಾಯಗಳ ರೇಡಿಯೊ ಅಧ್ಯಯನ, 5. ರೇಡಿಯೊ ಖಗೋಳವಿಜ್ಞಾನದ ಕೊಡುಗೆ, 6. ಭಾರತದಲ್ಲಿ ರೇಡಿಯೊ ಖಗೋಳವಿe್ಞÁನ

1. ಉಗಮ: ಖಗೋಳವಿe್ಞÁನಿಗಳಿಗೆ ರೇಡಿಯೊ ಕಿಟಕಿ ದೊರಕಿದ್ದು ಕಾರ್ಲ್ ಗುಥೆ ಜಾನ್ಸ್ಕಿ(1905-50) ಎಂಬಾತನ ಪ್ರಯೋಗಗಳಿಂದ. ಈತ ಅಮೆರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಪದವಿ ಗಳಿಸಿ ಬೆಲ್ ಲ್ಯಾಬೊರೇಟರಿ ಸಂಸ್ಥೆಯಲ್ಲಿ ಉದ್ಯೋಗ ಪಡೆದ. ಗೃಹ ರೇಡಿಯೊಗಳಲ್ಲಿಯ ಶ್ರವಣಸ್ಫುಟತೆ ಬಗ್ಗೆ ತಪಾಸಣೆ ಮಾಡುವ ಪ್ರಾಯೋಗಿಕ ಹೊಣೆಯನ್ನು ಇವನಿಗೆ ವಿಧಿಸಲಾಗಿತ್ತು. ಇದಕ್ಕಾಗಿ 20-5 ಮೆಗಾಹಟ್ರ್ಸ್ ಅಂದರೆ (14.5 ಮೀಟರ್) ರೇಡಿಯೊ ತರಂಗಗಳನ್ನು ಗ್ರಹಿಸುವ ಆಂಟೆನ ತಯಾರಿಸಿದ. ಇದನ್ನು ಬೇಕೆಂದಂತೆ ತಿರುಗಿಸ ಬಹುದಾಗಿತ್ತು, ಇದು ವಿಶ್ವದ ವಿವಿಧ ಮೂಲೆಗಳಿಂದ ಬರುವ ರೇಡಿಯೊ ತರಂಗಗಳನ್ನು ಗ್ರಹಿಸುತ್ತಿತ್ತು. ಈ ಕ್ಷೀಣ ಸಂಜ್ಞೆಗಳನ್ನು ಅಭ್ಯಸಿಸಿದ ಜಾನ್ಸ್ಕಿ ಅವುಗಳ ಆಕರಗಳನ್ನು ಪಟ್ಟಿ ಮಾಡಿದ: 1. ಸಮೀಪದ ಸಿಡಿಲು, 2. ದೂರದ ಸಿಡಿಲು, 3. ಕ್ಷೀಣವಾದ ಅವ್ಯಕ್ತ ಆಕರ.

ಮೂರನೆಯದು ಏನಿರಬಹುದು ಎಂದು ತಿಳಿಯಲು ಆತ ವರ್ಷದುದ್ದಕ್ಕೂ ನಡೆಸಿದ ಪ್ರಯೋಗ ರೇಡಿಯೊ ಖಗೋಳವಿe್ಞÁನದ ಉಗಮಕ್ಕೆ ಕಾರಣವಾಯಿತು. ಆಕರ ಸೂರ್ಯ ಇರಬಹುದೇ ಎಂದು ಆತ ಊಹಿಸಿದ್ದಕ್ಕೆ ಕಾರಣವೂ ಇತ್ತು. ಅದು ದಿನಕ್ಕೊಮ್ಮೆ ಗರಿಷ್ಠ ಮಟ್ಟ ಮುಟ್ಟಿ ಮತ್ತೆ ಕ್ಷೀಣಿಸುತ್ತಿತ್ತು. ಆದರೆ ಎರಡು ಮೂರು ತಿಂಗಳಲ್ಲಿ ಆತ ಬೇರೊಂದು ಸಂಗತಿ ಗಮನಿಸಿದ: ಈ ಆಕರದ ಗರಿಷ್ಠ ಸಂಜ್ಞೆ ದಿನದಿನಕ್ಕೆ 4 ಮಿನಿಟ್ ಮುಂದಾಗಿಯೇ ಬರತೊಡಗಿತ್ತು. ಹಾಗಾಗಿ 3 ತಿಂಗಳ ಅನಂತರ ರಾತ್ರಿಯ ಆಕಾಶದ ನಿರ್ದಿಷ್ಟ ದಿಶೆಯಿಂದ (ಸೂರ್ಯನಿಂದ ಅಲ್ಲ) ಸಂಜ್ಞೆ ಬರುತ್ತಿದ್ದುದು ತಿಳಿಯಿತು - ಧನುರಾಶಿಯಿಂದ. ಆಕಾಶಗಂಗೆಯ ಕೇಂದ್ರವೇ ಧನುವೆಂದು ನಂಬಿಕೆ. ಈ ರೋಮಾಂಚಕಾರಿ ಆವಿಷ್ಕಾರವನ್ನು ಜಾನ್ಸ್ಕಿ 1933ರಲ್ಲಿ ನೇಚರ್ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಖಗೋಳವಿe್ಞÁನಿಗಳಲ್ಲಿ ಹೊಸ ಚಟುವಟಿಕೆ ಆರಂಭವಾಯಿತು. ಸ್ವತ: ಜಾನ್ಸ್ಕಿ ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಉದ್ದೇಶದಿಂದ 30 ಮೀ ವ್ಯಾಸದ ಗಂಗಳ (ಡಿಷ್) ಆಂಟೆನ ತಯಾರಿಸುವ ಯೋಜನೆ ಹಾಕಿದನಾದರೂ ಬೆಲ್ ಲ್ಯಾಬೊರೇಟರಿಗೆ ಈ ಬಗ್ಗೆ ಆಸಕ್ತಿ ಇರಲಿಲ್ಲ. ಅಟ್ಲಾಂಟಿಕ್ ಸಾಗರದ ಆಚೀಚೆ ದೂರವಾಣಿ ವ್ಯವಸ್ಥೆಯ ಬಗ್ಗೆ ಮಾತ್ರ ಅವರಿಗೆ ಕಾಳಜಿ ಇದ್ದುದರಿಂದ ಜಾನ್ಸ್ಕಿಯ ಯೋಜನೆ ಈಡೇರಲಿಲ್ಲ.

ಈ ದಿಶೆಯಲ್ಲಿ ಬೇರೆ ಕೆಲವರು ಕಾರ್ಯೋನ್ಮುಖರಾದರು. ಇವರಲ್ಲಿ ಮುಖ್ಯರಾದವರು ಗ್ರೋಚೆ ರೆಬೆರ್ (1911-2002) ಮತ್ತು ಜಾನ್ ಕ್ರೌಸ್. ರೆಬೆರ್ ಹವ್ಯಾಸಿ ರೇಡಿಯೊ ಉಪಕರಣ ಇರಿಸಿಕೊಂಡಿದ್ದ (ಹ್ಯಾಮ್ ಎಂದು ಇದರ ಹೆಸರು - ನೋಡಿ). ಜಾನ್ಸ್ಕಿ ಪ್ರಕಟಿಸಿದ ಸುದ್ದಿಯಿಂದ ಉತ್ತೇಜಿತನಾದ ಈತ ಇತರ ಖಗೋಳಕಾಯಗಳು ರೇಡಿಯೊತರಂಗಗಳನ್ನು ಉತ್ಸರ್ಜಿಸುತ್ತಿರುವುವೇ ಎಂದು ಅಧ್ಯಯನ ಮಾಡಲು ಬೆಲ್ ಲ್ಯಾಬೊರೇಟರಿ ಹಾಗೂ ಇತರ ಅನೇಕ ವೇಧಶಾಲೆಗಳಿಗೆ ಅರ್ಜಿ ಸಲ್ಲಿಸಿದ. ಯಾರಿಂದಲೂ ಉತ್ತರ ಬರಲಿಲ್ಲ. ಸ್ವಂತ ಖರ್ಚಿನಲ್ಲಿ ತನ್ನ ಮನೆಯ ಹಿತ್ತಿಲಿನಲ್ಲಿ ಸುಮಾರು 3 ಮೀ ವ್ಯಾಸದ ರೇಡಿಯೊ ಗಂಗಳ ನಿರ್ಮಿಸಿದ: ಇದರ ನಾಭಿಯಲ್ಲಿ (ಫೋಕಸ್) ಅಭಿಗ್ರಾಹಕವನ್ನು (ರಿಸೀವರ್) ಇರಿಸಲು ಸಾಧ್ಯವಾಗುವಂತೆ ಮರದ ಚೌಕಟ್ಟನ್ನೂ ಅಳವಡಿಸಿದ. ಇದು ಅತಿ ಕ್ಷೀಣ ಸಂದೇಶಗಳನ್ನು ಕೂಡ ವರ್ಧಿಸಿ ಬಿಂಬಿಸುತ್ತಿತ್ತು. ಅಭಿಗ್ರಾಹಕದಿಂದ ಬರುವ ಸಂದೇಶಗಳು ಸಂe್ಞÁಮುದ್ರಕದಲ್ಲಿ (ಚಾರ್ಟ್‍ರೆಕಾರ್ಡರ್) ದಾಖಲಾಗುತ್ತಿದ್ದುವು.

ರೆಬೆರ್ 1937ರಲ್ಲಿ ವೀಕ್ಷಣೆ ಆರಂಭಿಸಿದ. 3300 ಮೆಗಾಹಟ್ರ್ಸ್‍ನಲ್ಲಿ ಯಾವುದೇ ಖಗೋಳಕಾಯ ಪತ್ತೆಯಾಗಲಿಲ್ಲ. 900 ಮೆಗಾಹಟ್ರ್ಸ್ ಕೂಡ ವಿಫಲವಾಯಿತು. ಆದರೆ 160 ಮೆಗಾಹಟ್ರ್ಸ್‍ನಲ್ಲಿ (ಅಂದರೆ 1.9 ಮೀ ಅಲೆಯುದ್ದ) ಧನುರಾಶಿಯ ಆಕರವನ್ನು ಪತ್ತೆಮಾಡುವುದು ಸಾಧ್ಯವಾಯಿತು. ಮುಂದೆ ಆತ ಸಿಗ್ನಸ್(ರಾಜಹಂಸ) ಮತ್ತು ಕ್ಯಾಸಿಯೋಪಿಯ(ಕುಂತಿ) ಪುಂಜಗಳಲ್ಲಿಯೂ ಒಂದೊಂದು ರೇಡಿಯೊ ಆಕರವನ್ನು ಗುರುತಿಸಿದ. 1938-43 ಅವಧಿಯಲ್ಲಿ ಪ್ರತಿರಾತ್ರಿಯೂ ಖಗೋಳವನ್ನು ವೀಕ್ಷಿಸಿ ರೇಡಿಯೊ ಆಕರಗಳನ್ನು ಗುರುತಿಸಿ ಪಟ್ಟಿ ಮಾಡಿದ. ಎರಡನೆಯ ಮಹಾಯುದ್ಧ (1939-45) ಮುಗಿಯುತ್ತಿದ್ದಂತೆ ಅನೇಕ ವೇಧಶಾಲೆಗಳು ಈ ಸಾಹಸಕ್ಕೆ ಕೈಹಾಕಿದುವು, ಜೊತೆಯಲ್ಲೇ ಹೊಸ ಹೊಸ ರೇಡಿಯೊ ದೂರದರ್ಶಕಗಳು ನಿರ್ಮಾಣವಾಗ ತೊಡಗಿದುವು ಕೂಡ. (ರೆಬೆರ್‍ನ ದೂರದರ್ಶಕವೀಗ ಅಮೆರಿಕದ ಗ್ರೀನ್‍ಬ್ಯಾಂಕ್ ರಾಷ್ಟ್ರೀಯ ರೇಡಿಯೊ ಖಗೋಳವಿe್ಞÁನ ವೇಧಶಾಲೆ ಯಲ್ಲಿದೆ.) ರೆಬೆರ್ ತನ್ನ ಅಧ್ಯಯನವನ್ನು ವಿಸ್ತರಿಸಿ ಹೊಸತೊಂದು ವಿಷಯ ಪತ್ತೆಹಚ್ಚಿದ: ಈ ಆಕರಗಳು ಕೃಷ್ಣಕಾಯಗಳಂತೆ ರೇಡಿಯೊ ತರಂಗಗಳನ್ನು ಉತ್ಸರ್ಜಿಸುವುದಾದಲ್ಲಿ ಅಲೆಯುದ್ದದ ಆಧಿಕ್ಯದೊಡನೆ ಶಕ್ತಿ ಕ್ಷೀಣಿಸಬೇಕಿತ್ತು. ಆದರೆ ಇಲ್ಲಿ ಹಾಗೆ ಆಗುತ್ತಿರಲಿಲ್ಲ. ಈ ವೈಶಿಷ್ಟ್ಯ ಭೌತವಿe್ಞÁನಿಗಳ ಅಧ್ಯಯನಕ್ಕೆ ವಸ್ತುವಾಯಿತು.

2. ರೇಡಿಯೊತರಂಗಗಳ ಉತ್ಸರ್ಜನೆ: ಯಾವುದೇ ವಿದ್ಯುದಾವಿಷ್ಟ ಕಣ ತನ್ನ ಚಲನದಿಶೆ ಅಥವಾ ವೇಗವನ್ನು ಬದಲಾಯಿಸಿದಾಗ ವಿದ್ಯುತ್ಕಾಂತ ತರಂಗಗಳ ಉತ್ಸರ್ಜನೆಯಾಗುತ್ತದೆ. ಕಣದ ಶಕ್ತಿಯಲ್ಲಿ ಉಂಟಾಗುವ ಬದಲಾವಣೆಗೆ ಅನುಗುಣವಾಗಿ ಆ ಉತ್ಸರ್ಜಿತ ತರಂಗದ ಅಲೆಯುದ್ದ ನಿರ್ಧಾರವಾಗುತ್ತದೆ. ರೇಡಿಯೊತರಂಗಗಳ ಉತ್ಸರ್ಜನೆಗೆ ಅಗತ್ಯವಾದ ಈ ಬಗೆಯ ಶಕ್ತಿ ವ್ಯತ್ಯಯಗಳನ್ನು ಉಂಟುಮಾಡುವ ವಿದ್ಯಮಾನಗಳನ್ನು ಸ್ಥೂಲವಾಗಿ ಉಷ್ಣೀಯ (ಥರ್ಮಲ್) ಮತ್ತು ಅನುಷ್ಣೀಯ (ನಾನ್‍ಥರ್ಮಲ್) ಎಂದು ವರ್ಗೀಕರಿಸಬಹುದು. ಯಾವುದೇ ವಸ್ತು ತನ್ನ ಉಷ್ಣತೆಯ ಕಾರಣವಾಗಿ (ಪ್ಲಾಂಕ್‍ನ ಕೃಷ್ಣಕಾಯ ಸೂತ್ರಾನುಸಾರ) ಉತ್ಸರ್ಜಿಸುವ ಅಯಾನುಗಳ ಮುಕ್ತ-ಮುಕ್ತ ಉತ್ಸರ್ಜನೆ ಮತ್ತು ರೋಹಿತರೇಖೆಗಳ ಉತ್ಸರ್ಜನೆ ಉಷ್ಣೀಯ ಎನಿಸಿಕೊಳ್ಳುತ್ತವೆ. ಹೀಗಲ್ಲದೆ ಉಷ್ಣತೆಗೆ ಸಂಬಂಧಿಸದ ಸಿಂಕ್ರೊಟ್ರಾನ್ ವಿಕಿರಣ, ಜೈರೊಸಿಂಕ್ರೊಟ್ರಾನ್ ಮತ್ತು ಮೇಸರ್ ಬಗೆಯ ಉತ್ಸರ್ಜನೆಗಳು ಅನುಷ್ಣೀಯ ವರ್ಗಕ್ಕೆ ಸೇರುತ್ತವೆ.

ಚಿತ್ರ-ಸ್ವಂದ-ನಕ್ಷೆ

ಬೆಳಕಿನಂತೆ ರೇಡಿಯೊತರಂಗಗಳೂ ವಿದ್ಯುತ್ಕಾಂತ ತರಂಗಗಳು. ಆದ್ದರಿಂದ ಇವು ಸಹ ಛಿ ಎಂದರೆ 3x1010ಸೆಂಮೀ/ಸೆ ವೇಗದಲ್ಲಿಯೇ ಚಲಿಸುತ್ತವೆ. ಇವುಗಳ ಅಲೆಯುದ್ದ 1 ಮಿಮೀನಿಂದ ಅನೇಕ ಕಿಮೀಗಳ ವರೆಗೂ ಇರುವುದು. ಬೆಳಕಿನಂತೆ ಇವೂ ದ್ವಿಸ್ವಭಾವಿಕಗಳು (ಡ್ಯೂಯಲ್ ನೇಚರ್). ಆದ್ದರಿಂದ ಎಂಬ ಸೂತ್ರ ಇಲ್ಲಿಯೂ ಅನ್ವಯವಾಗುತ್ತದೆ. (ಟ=ಅಲೆಯುದ್ದ, u=ಆವೃತ್ತಿ, h=ಪ್ಲಾಂಕ್ ಸ್ಥಿರಾಂಕ, ಇ=ಶಕ್ತಿ). ಅಲೆಯುದ್ದಕ್ಕೆ ಅನುಗುಣವಾಗಿ ರೇಡಿಯೊ ತರಂಗಗಳನ್ನು ಪಟ್ಟೆಗಳಾಗಿ (ಬ್ಯಾಂಡ್ಸ್) ವರ್ಗೀಕರಿಸಿದ್ದಾರೆ:

ಪಟ್ಟೆ ಅಲೆಯುದ್ದ ಆವೃತ್ತಿ P 90 ಸೆಂಮೀ 327 ಒಊz ಐ 20 ಸೆಂಮೀ 1.4 ಉಊz ಅ 6 ಸೆಂಮೀ 5.0 ಉಊz ಘಿ 3.6 ಸೆಂಮೀ 8.5 ಉಊz U 2 ಸೆಂಮೀ 15 ಉಊz ಏ 1.3 ಸೆಂಮೀ 23 ಉಊz ಕಿ 7 ಮಿಮೀ 45 ಉಊz

ಸಾಧಾರಣವಾಗಿ ಈ ಪಟ್ಟೆಗಳಲ್ಲಿಯ ತರಂಗಗಳನ್ನು ಅಭ್ಯಸಿಸಲು ರೇಡಿಯೊದೂರದರ್ಶಕಗಳನ್ನು ನಿರ್ಮಿಸಲಾಗುವುದು. ಪ್ಲಾಂಕ್‍ಸೂತ್ರವನ್ನು ರೇಡಿಯೊತರಂಗಗಳಿಗೆ ಅನ್ವಯಿಸಿ ಸರಳೀಕರಿಸ ಬಹುದು. ಆಗ ಶಕ್ತಿ ಮತ್ತು ಉಷ್ಣತೆಗೆ ನೇರ ಅನುಪಾತ ಇರುವುದು ತಿಳಿಯುತ್ತದೆ:

ಹೀಗೆ ಶಕ್ತಿಯನ್ನು ಅಳೆದು ಪಡೆಯುವ ಉಷ್ಣತೆಯನ್ನೇ ನೇರವಾಗಿ ಗಣನೆಗಳಿಗೆ ಬಳಸುತ್ತಾರೆ. ಶಕ್ತಿ ಮಾಪನದ ಏಕಮಾನಕ್ಕೆ ಜಾನ್ಸ್ಕಿ ಎಂದು ಹೆಸರು. 1 ಜಾನ್ಸ್ಕಿ =10-26 ವ್ಯಾಟ್/ಮೀ2/ಸೆ/ಹಟ್ರ್ಸ್.

3. ರೇಡಿಯೊ ದೂರದರ್ಶಕಗಳು: ದೃಕ್‍ದೂರದರ್ಶಕಗಳಿಗೂ ರೇಡಿಯೊ ದೂರದರ್ಶಕಗಳಿಗೂ ಸಾಮ್ಯ ಕಂಡುಬರುವುದು ಸಹಜ. ಎರಡೂ ಪತ್ತೆಮಾಡುವುದು ವಿದ್ಯುತ್ಕಾಂತ ತರಂಗಗಳನ್ನೇ, ಆದರೆ ಈ ತರಂಗಗಳ ಅಲೆಯುದ್ದಗಳು ಬೇರೆ ಬೇರೆ ಅಷ್ಟೆ. ಈ ಕಾರಣ ಅವುಗಳ ಸಾಮಥ್ರ್ಯಗಳಲ್ಲಿಯೂ ವ್ಯತ್ಯಾಸ ಕಂಡುಬರುತ್ತದೆ. ರೇಡಿಯೊತರಂಗಗಳ ಗಂಗಳದಲ್ಲಿ ಮಿಮೀ ಗಾತ್ರದ ರಂಧ್ರಗಳಿದ್ದರೂ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ. ಗಾಜಿನ ಗಂಗಳ ಅಗತ್ಯವಿಲ್ಲ. ಪರವಲಯದ ಆಕಾರದ ಗಂಗಳಗಳು ಎರಡೂ ಬಗೆಯ ಅಲೆಗಳನ್ನು ನಾಭಿಗಳಲ್ಲಿ ಕೇಂದ್ರೀಕರಿಸುವುವು. ಈ ಸಂಜ್ಞೆ (ಸಿಗ್ನಲ್) ಎಲೆಕ್ಟ್ರಾನ್ ಪ್ರವಾಹದಂತಿರುವುದರಿಂದ ಇದನ್ನು ಎಲೆಕ್ಟ್ರಾನಿಕ್ ಪ್ರವರ್ಧಕಗಳಿಂದ (ಆ್ಯಂಪ್ಲಿಫೈಯರ್) ವರ್ಧಿಸಬಹುದು. ದೃಕ್‍ದೂರದರ್ಶಕಗಳನ್ನು ವ್ಯಾಸದ ಅಳತೆಯಿಂದ ಸೂಚಿಸುವುದು ವಾಡಿಕೆ. (ಕಾವಲೂರಿನ 2.3 ಮೀ ದೂರದರ್ಶಕ, ಹಿಮಾಲಯದ 2 ಮೀ ವ್ಯಾಸದ ಚಂದ್ರ ದೂರದರ್ಶಕ ಹೀಗೆ.) ಆದರೆ ರೇಡಿಯೊ ದೂರದರ್ಶಕಗಳನ್ನು ಅವುಗಳ ರಚನೆಗೆ ಅನುಗುಣ ವಾದ ರೇಡಿಯೊತರಂಗಗಳ ಅಲೆಯುದ್ದದಿಂದ ಹೆಸರಿಸಲಾಗುವುದು (ಉದಾಹರಣೆಗೆ ಪುಣೆಯ ಜಿಎಮ್‍ಆರ್‍ಟಿ ಜಯಂಟ್ ಮೀಟರ್ ರೇಡಿಯೊ ಟೆಲಿಸ್ಕೋಪ್, ಮಾರಿಷನ್ ಮಿಲಿಮೀಟರ್ ರೇಡಿಯೊ ಟೆಲಿಸ್ಕೋಪ್). 100 ಮೀ ವ್ಯಾಸದ ಗಂಗಳ ಕೂಡ 1 ಮೀ ವ್ಯಾಸದ ದೃಕ್‍ದೂರದರ್ಶಕದ ವಿಘಟನಸಾಮಥ್ರ್ಯಕ್ಕೆ (ರಿಸಾಲ್ವಿಂಗ್ ಪವರ್) ಸಾಟಿಯಾಗಲಾರದು.

ರೇಡಿಯೊ ದೂರದರ್ಶಕಗಳ ಮುಖ್ಯ ಅಂಗಗಳು ಎರಡು: 1. ದೊಡ್ಡ ಗಾತ್ರದ ರೇಡಿಯೊ ಆಂಟೆನ, 2. ರೇಡಿಯೊ ಅಭಿಗ್ರಾಹಕ. ಇವು ಅಧಿಕಾಧಿಕ ಸೂಕ್ಷ್ಮ ಸಂವೇದನಶೀಲವಾದಷ್ಟೂ ವಿಶ್ವದ ವಿವಿಧ ರೇಡಿಯೊ ಆಕರಗಳಿಂದ ಬರುವ ಕ್ಷೀಣಾತಿಕ್ಷೀಣ ಸಂಜ್ಞೆಗಳನ್ನೂ ಅಭಿಗ್ರಹಿಸಿ ಲಂಬಿಸಿ ಸಂಶೋಧಕರಿಗೆ ಒದಗಿಸುತ್ತವೆ. ದೂರದರ್ಶಕಗಳ ಗಾತ್ರ ದೊಡ್ಡದಾದ್ದ ರಿಂದ ತೂಕವೂ ಹೆಚ್ಚು. ಈ ಕಾರಣ ಇವುಗಳ ನಿರ್ವಹಣೆ ಮತ್ತು ದುರಸ್ತಿ ಕಡುಕಷ್ಟ. ಗಂಗಳದ ಆಕಾರದಲ್ಲಿ ಸಣ್ಣ ಸಣ್ಣ ಏರುಪೇರಾದರೂ ರೇಡಿಯೊಸಂಜ್ಞೆಗಳಲ್ಲಿ ದೋಷ ಹಣುಕುತ್ತದೆ. ಉಷ್ಣತೆಯ ಏರಿಳಿತದಿಂದಲೂ ಆಕಾರ ಕೆಡಬಹುದು; ಈ ತೊಂದರೆಗಳನ್ನು ಆಗಿಂದಾಗ್ಗೆ ನಿವಾರಿಸಿಕೊಳ್ಳಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಹೀಗೆ ಯಾಂತ್ರಿಕ ದೋಷಗಳನ್ನು ಅಭ್ಯಸಿಸಿ ಸರಿಪಡಿಸಲು ಹೋಮೋಲಜಿ ಎಂಬ ಹೊಸ ಶಾಖೆಯೇ ಬೆಳೆದು ನಿಂತಿದೆ. ಮಿಲಿಮೀಟರ್ ಅಲೆಯುದ್ದದಲ್ಲಿ ಅಧ್ಯಯನ ನಡೆಸಲು 10-20 ಮೀ ವ್ಯಾಸದ ಆಂಟೆನವೂ ಸೆಂಟಿಮೀಟರ್‍ನಲ್ಲಿಯದಕ್ಕೆ 100 ಮೀ ವ್ಯಾಸದ ಆಂಟೆನವೂ ಬೇಕು. ಸಾಧಾರಣವಾಗಿ ಅವಿಚ್ಛಿನ್ನ ವಿಕಿರಣವನ್ನಷ್ಟೇ ಅಳಯುವುದು ಸಾಧ್ಯವಾದರೂ ಸಣ್ಣ ಬದಲಾವಣೆಗಳಿಂದ ರೋಹಿತರೇಖೆಗಳನ್ನೂ ಅಳೆಯಬಹುದು. ಹಿಂದೆ ಒಂದೇ ಗಂಗಳ ಬಳಸಿ, ಅಭಿಗ್ರಾಹಕವನ್ನು ಬೇರೆಬೇರೆ ತರಂಗಗಳಿಗೆ ಶ್ರುತಿಕರಿಸಿ (ಟ್ಯೂನಿಂಗ್) ರೋಹಿತರೇಖೆಗಳನ್ನು ಅಭ್ಯಸಿಸುತ್ತಿದ್ದರು. ಇದರಿಂದ ಅಧಿಕ ಕಾಲ ವ್ಯರ್ಥವಾಗುತ್ತಿತ್ತು. ಈಗಿನ ದೂರದರ್ಶಕಗಳು ಒಟ್ಟಿಗೆ ಬೇರೆಬೇರೆ ಅಲೆಯುದ್ದಗಳ ತರಂಗಗಳನ್ನು ಗ್ರಹಿಸಿ ಒಟ್ಟಿಗೇ ಗಣಕಕ್ಕೆ ಊಡುವುದರಿಂದ ಕೆಲವೊಂದು ವಿಶಿಷ್ಟ ರೋಹಿತರೇಖೆಗಳ ಅಧ್ಯಯನ ಸುಲಭವಾಗಿದೆ. ದೃಕ್‍ದೂರದರ್ಶಕಗಳಲ್ಲಿ ನೀಲಿ, ಹಳದಿ, ಕೆಂಪು ಸೋಸುಕಗಳನ್ನಿಟ್ಟು ಅವುಗಳ ಮೂಲಕ ಆಕಾಶಕಾಯಗಳ ಬೆಳಕನ್ನು ಅಳೆಯುವಂತೆ ಇಲ್ಲಿಯೂ ಎಲೆಕ್ಟ್ರಾನಿಕ್ ಸೋಸುಕಗಳು ಬೇರೆಬೇರೆ ತರಂಗಗಳನ್ನು ಬೇರ್ಪಡಿಸಿ, ಆಯಾ ಗ್ರಾಹಕಗಳಿಗೆ ತಲಪಿಸುತ್ತವೆ.

ಚಿತ್ರ-ರೇಡಿಯೊ-ದೂರದರ್ಶಕ

ಹಿಂದೆ ತಿಳಿಸಿದ ಹಾಗೆ ರೇಡಿಯೊ ದೂರದರ್ಶಕಗಳ ವಿಘಟನ ಸಾಮಥ್ರ್ಯ ಕಡಿಮೆ. ಅತಿ ಹೆಚ್ಚು ದಕ್ಷತೆಯ ದೂರದರ್ಶಕಕ್ಕೆ ನಮ್ಮ ಕಣ್ಣಿನಷ್ಟೇ ಸಾಮಥ್ರ್ಯ ಇರುವುದು. ಆದ್ದರಿಂದ ದೃಕ್‍ದೂರದರ್ಶಕಗಳ ಸಾಮಥ್ರ್ಯ ಪಡೆಯಲು ಇವನ್ನೇ ಊಹಾತೀತ ಗಾತ್ರಕ್ಕೆ ಹಿಗ್ಗಿಸ ಬೇಕಾಗುತ್ತದೆ. ಈ ತೊಡಕನ್ನು ನಿವಾರಿಸಲು ವಿe್ಞÁನಿಗಳು ಸಣ್ಣ ಗಾತ್ರದ ದೂರದರ್ಶಕಗಳನ್ನು ವಿಶಾಲ ಬಯಲಲ್ಲಿ ಹರಡಿ, ಅವುಗಳ ಒಟ್ಟು ವಿಸ್ತಾರದ ಸಾಮಥ್ರ್ಯ ಪಡೆಯುವ ತಂತ್ರ ಅನುಸರಿಸುತ್ತಾರೆ.

ಎರಡು ಗಂಗಳಗಳ ಉದಾಹರಣೆಯಿಂದ ಈ ತತ್ತ್ವವನ್ನು ವಿಶದೀಕರಿಸಬಹುದು. ಅತಿದೂರದ ಆಕರದಿಂದ ಬರುವ ರೇಡಿಯೊ ತರಂಗ (ಎರಡು ಗಂಗಳಗಳ ನಡುವಿನ ಅಂತರದ ಕಾರಣ) ಬೇರೆಬೇರೆ ಪ್ರಾವಸ್ಥೆಗಳಲ್ಲಿ (ಫೇಸ್) ಅವನ್ನು ತಲಪುತ್ತದೆ. ಭೂಮಿ ಆವರ್ತಿಸಿದ ಹಾಗೆ ಈ ಪ್ರಾವಸ್ಥಾಂತರ ಕೂಡ ವ್ಯತ್ಯಯಗೊಳ್ಳುತ್ತದೆ. ಉಭಯ ಗಂಗಳಗಳ ಸಂಜ್ಞೆಗಳನ್ನು ಒಟ್ಟುಗೂಡಿಸಿ ಈ ಪ್ರಾವಸ್ಥಾಂತರಕ್ಕೆ ಅಗತ್ಯವಾದ ತಿದ್ದುಪಡಿ ಹಾಕಿದರೆ ಆಕರದ ನೈಜ ಸಂಜ್ಞೆ ದೊರೆಯುತ್ತದೆ. ಆಕರವೊಂದು ಬಿಂದುವಾಗಿರದೇ ವಿಸ್ತøತಕಾಯವಾಗಿದ್ದರೆ ವ್ಯತಿಕರಣ ಮಾಪನದಿಂದ (ಇಂಟರ್‍ಫಿರೊಮೆಟ್ರಿ) ಅದರ ಕೋನೀಯ ಗಾತ್ರವನ್ನೂ ತಿಳಿಯಬಹುದು. ಎಂದೇ ಈ ವಿಧಾನ ದೂರ ಬ್ರಹ್ಮಾಂಡಗಳ ಅಧ್ಯಯನದಲ್ಲಿ ಹೆಚ್ಚು ಬಳಕೆಯಾಗುತ್ತದೆ. ಹೀಗೆ ಎರಡು (ಅಥವಾ ಇನ್ನೂ ಹೆಚ್ಚು) ಗಂಗಳಗಳ ನೆರವಿನಿಂದ ಈ ಸಮೂಹದ ಪಾದರೇಖೆಯ ನ್ನು ಹೆಚ್ಚಿಸಬಹುದು. ಈ ತೆರನಾಗಿ ಇಂದು ಅನೇಕ ರೇಡಿಯೊ ದೂರದರ್ಶಕಗಳ ಸಮೂಹವೇ ಸಜ್ಜಾಗಿದೆ. ಅತಿದೀರ್ಘ ಪಾದರೇಖಾ ವ್ಯತಿಕರಣ ಮಾಪನ (ವೆರಿ ಲಾಂಗ್ ಬೇಸ್‍ಲೈನ್ ಇಂಟ ರ್‍ಫಿರೊಮೆಟ್ರಿ) ಎಂಬುದು ಭೂಮಿಯ ವ್ಯಾಸದುದ್ದಕ್ಕೂ ಹರಡಿರುವ ಗಂಗಳಗಳಿಂ ದಾಗಿದೆ. ಸಮಸ್ತ ಗಂಗಳಗ ಳಿಂದ ಬರುವ ಸಂಜ್ಞೆಯನ್ನು ಏಕಕಾಲಕ್ಕೆ ಹೊಂದಿಸಲು ಪರಮಾಣುಗಡಿಯಾರದ ಉಪಜ್ಞೆಗೆ (ಇನ್‍ವೆನ್ಶನ್) ಕಾಯಬೇಕಾಗಿತ್ತಷ್ಟೆ. ಈಗ ಇವೂ ಕಾರ್ಯಾರಂಭ ಮಾಡಿವೆ. ಅಮೆರಿಕ ಖಂಡದುದ್ದಕ್ಕೂ ಸಜ್ಜಾಗಿರುವ 25 ಮೀ ವ್ಯಾಸದ ಹತ್ತು ಗಂಗಳಗಳಿಗೆ ಅತಿದೀರ್ಘಪಾದರೇಖಾವ್ಯೂಹ ಎಂಬ ಹೆಸರಿದೆ. ಇದರ ಪರಿಣಾಮಕಾರೀ ವ್ಯಾಸ ಸು. 8000 ಕಿಮೀ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿಯ ತ್ವರಿತ ಬೆಳೆವಣಿಗೆ ರೇಡಿಯೊ ಖಗೋಳವಿe್ಞÁನ ಮುನ್ನಡೆಯಲು ಮುಖ್ಯ ಕಾರಣ ಎನ್ನಬಹುದು.

ರೇಡಿಯೊ ಖಗೋಳವಿe್ಞÁನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಕೆಲವು ಸಂಸ್ಥೆಗಳು:

1. ಆಸ್ಟ್ರೇಲಿಯದ (ಎಟಿಎನ್‍ಎಫ್ — ಆಸ್ಟ್ರೇಲಿಯನ್ ನ್ಯಾಷನಲ್ ಟೆಲಿಸ್ಕೋಪ್ ಫೆಸಿಲಿಟಿ) ಮೂರು ದೂರದರ್ಶಕಗಳು ಸೇರಿವೆ. 2. ಬರ್ಕ್‍ಲಿ, ಇಲಿನಾಯ್, ಮೇರಿಲೆಂಡ್ ಅಸೋಸಿಯೇಷನ್ - ಇದರಲ್ಲಿ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ರೇಡಿಯೊ ಅಸ್ಟ್ರಾನಮಿ ಲ್ಯಾಬೊರೇಟರಿ, ಇಲಿನಾಯ್‍ನ ಲ್ಯಾಬೊರೇಟರಿ ಫಾರ್ ಅಸ್ಟ್ರಾನಾಮಿಕಲ್ ಇಮೇಜಿಂಗ್, ಮೇರಿಲೆಂಡ್‍ನ ಲ್ಯಾಬೊರೇಟರಿ ಫಾರ್ ಮಿಲಿಮೀಟರ್ ವೇವ್ ರೇಡಿಯೊ ಇಂಟರ್‍ಫಿರೋಮೀಟರ್ ಇವು ಸೇರಿವೆ. 3. ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಒವೆನ್ಸ್‍ವ್ಯಾಲಿ ರೇಡಿಯೊ ಅಬ್ಸರ್ವೇಟರಿ. 4. ಸೆರೊ ಟೊಲೊಲೊ ಇಂಟರ್ ಅಮೆರಿಕನ್ ಅಬ್ಸರ್ವೇಟರಿ - ಚಿಲಿದೇಶದಲ್ಲಿ 2200 ಮೀ ಎತ್ತರದಲ್ಲಿದೆ. 5. ಡೀಪ್‍ಸ್ಪೇಸ್ ನೆಟ್‍ವರ್ಕ್ ರೇಡಿಯೊ ಅಸ್ಟ್ರಾನಮಿ. 6. ಡೊಮಿನಿಯನ್ ಅಸ್ಟ್ರೊಫಿಸಿಕಲ್ ಅಬ್ಸರ್ವೇಟರಿ. 7. ಫೈವ್ ಕಾಲೇಜ್ ರೇಡಿಯೊ ಅಸ್ಟ್ರಾನಮಿ ಅಬ್ಸರ್ವೇಟರಿ (ಎಫ್.ಸಿ.ಆರ್.ಎ.ಒ.) 8. ಕ್ಯೊಲ್ನರ್ ಅಬ್ಸರ್ವೇಟೊರಿಯಮ್ ಫಾರ್ ಸಬ್‍ಮಿಮೀ ಅಸ್ಟ್ರಾನಮಿ. ಕೆಒಎಸ್‍ಎಮ್‍ಎ ಇದು ಜರ್ಮನಿಯ ಕ್ಯೊಲ್ನ್ ವಿಶ್ವವಿದ್ಯಾಲಯದ್ದು, ಸ್ವಿಟ್‍ಜóರ್ಲೆಂಡ್‍ನಲ್ಲಿದೆ. 9. ನ್ಯಾಷನಲ್ ರೇಡಿಯೊ ಅಸ್ಟ್ರಾನಮಿ ಅಬ್ಸರ್ವೇಟರಿ. 10. ಅಬ್ಸರ್ವೇಟೋರಿಯೊ ಅಸ್ಟ್ರಾನಮಿಕೋ ನಾಸನಾಲ್ ಸ್ಪೈನ್. 11. ಒಹಾಯೋ ಸ್ಟೇಟ್ ಯೂನಿವರ್ಸಿಟಿ ಅಬ್ಸರ್ವೇಟರಿ - ಇದಕ್ಕೆ ಬಿಗ್ ಇಯರ್ ಎಂಬ ಅಡ್ಡ ಹೆಸರಿದೆ. ಬಾಹ್ಯಜಗತ್ತಿನ ಜೀವಿಗಳನ್ನು ಹುಡುಕುವ ಸೆಟಿ (ಎಸ್‍ಇಟಿಐ - ಸರ್ಚ್ ಫಾರ್ ಎಕ್ಸ್‍ಟ್ರಾ ಟೆರೆಸ್ಟ್ರಿಯಲ್ ಇಂಟೆಲಿಜೆನ್ಸ್) ಕಾರ್ಯಕ್ರಮ ನಡೆಸುತ್ತಿದೆ. 12. ಯೂನಿವರ್ಸಿಟಿ ಆಫ್ ಇಂಡಿಯಾನಪೊಲಿಸ್. 13. ಯೂನಿವರ್ಸಿಟಿ ಆಫ್ ಮ್ಯಾಂಚೆಸ್ಟರ್‍ನ ಜೋರ್ಡೆಲ್ ಬ್ಯಾಂಕ್ ಅಬ್ಸರ್ವೇಟರಿ . 14. ನ್ಯಾಷನಲ್ ಸೆಂಟರ್ ಫಾರ್ ರೇಡಿಯೊ ಅಸ್ಟ್ರಾನಮಿ, ಪುಣೆ.

4. ಸೌರವ್ಯೂಹದ ಕಾಯಗಳ ರೇಡಿಯೊ ಅಧ್ಯಯನ: ಮೆಕ್ಸಿಕೋದ ಅತಿ ದೊಡ್ಡ ವ್ಯೂಹ ದೂರದರ್ಶಕ ಸುಮಾರು 0.5-4"ಗಳ (ಆರ್ಕ್‍ಸೆಕೆಂಡ್ಸ್) ವಿಘಟನ ಸಾಮಥ್ರ್ಯ ಒದಗಿಸುತ್ತದೆ. ಅದನ್ನು ಸೌರವ್ಯೂಹದ ಕಾಯಗಳ ಅಧ್ಯಯನಕ್ಕೂ ಬಳಸಬಹುದಾಗಿದೆ. ಮೇಲ್ಮೈ ವಿವರಗಳು ಅಲ್ಲದೆ ವಾತಾವರಣದ ಕೆಲವು ಅಂಶಗಳನ್ನೂ ಇದರಿಂದ ತಿಳಿಯಬಹುದು. ನೆಲದ ಉಷ್ಣಗುಣಗಳು, ವಿದ್ಯುತ್‍ಗುಣಗಳು ಅಲ್ಲದೇ ರಾಸಾಯನಿಕ ಗುಣಗಳಿಗೆ ದೈನಂದಿನ ಉಷ್ಣತೆಯ ವೈಪರೀತ್ಯಗಳು ಅನುಗುಣವಾಗಿರುತ್ತವೆ. ಉದಾಹರಣೆಗೆ ನೆಲದ ಮೇಲೆ ಲೋಹಭಾಗ ಅಥವಾ ದೂಳು ಹೆಚ್ಚಿರಬಹುದು, ಬಂಡೆಗಳು ಕಡಿಮೆ ಇರಬಹುದು ಇತ್ಯಾದಿ. ಈ ಎಲ್ಲ ವಿವರಗಳನ್ನೂ ರೇಡಿಯೊ ಅಧ್ಯಯನ ತಿಳಿಸಿ ಕೊಡುತ್ತದೆ.

ಗ್ರಹದ ವಾಯುಮಂಡಲ ದೃಕ್‍ತರಂಗಗಳಿಗೆ ಅಡಚಣೆಯಾದರೂ ರೇಡಿಯೊತರಂಗಗಳಿಗೆ ಈ ತೊಂದರೆ ಇಲ್ಲ. ಈ ಕಾರಣ ದಟ್ಟವಾತಾವರಣ ವಿರುವ ಶುಕ್ರದ ನೆಲವನ್ನು ಅಧ್ಯಯನ ಮಾಡಲು ರೇಡಿಯೊತರಂಗಗಳು ಉಪಯುಕ್ತವಾಗಿವೆ. ಕಾರ್ಬನ್‍ಮಾನಾಕ್ಸೈಡಿನ ರೋಹಿತರೇಖೆಗಳು ಮಿಲಿಮೀಟರ್ ತರಂಗಗಳಲ್ಲಿರುವುದರಿಂದ ಅದರ ಪ್ರಮಾಣದ ಅಳತೆಯ ಅಧ್ಯಯನವೂ ಸಾಧ್ಯವಾಗಿದೆ. ಚಂದ್ರನ ನೆಲದಲ್ಲಿ ಯಾವುದೇ ಸಾವಯವ ವಸ್ತುಗಳಿಲ್ಲ. ಆದ್ದರಿಂದ ಸೌರ ಶಾಖವನ್ನು ಅದು ಇಡೀ ಗೋಳಕ್ಕೆ ಹರಡುವ ಪ್ರಕ್ರಿಯೆ ಭೂಮಿಯದಕ್ಕಿಂತ ಭಿನ್ನವಾಗಿದೆ. ಇದನ್ನು ರೇಡಿಯೊ ದೂರದರ್ಶಕಗಳು ತಿಳಿಸಿಕೊಟ್ಟಿವೆ. ಮಾರಿಯೊ ಎಂದು ಹೆಸರಿಸಲಾಗಿರುವ ಸ್ವಲ್ಪ ಆಳವಾದ ಭಾಗಗಳಲ್ಲಿಯ ಉಷ್ಣತೆ ಉಳಿದವುಗಳಿಗಿಂತ ಸುಮಾರು 50 ಹೆಚ್ಚು ಇರುತ್ತದೆ ಎಂದು ತಿಳಿದಿದೆ. ಇದೇ ಬಗೆಯ ಅಧ್ಯಯನ ಬುಧದ ಮೇಲ್ಮೈ ಉಷ್ಣತೆ ಒಂದೇ ಸಮವಾಗಿಲ್ಲ ಎಂದು ತೋರಿಸಿಕೊಟ್ಟಿದೆ. ಮಂಗಳದ ದೈನಂದಿನ ಏರುತಗ್ಗು ಭೂಮಿಯದರಂತೆಯೇ ಇದೆ.

ಅನಿಲದೈತ್ಯಗಳಲ್ಲಿ ವಾತಾವರಣದ ರೋಹಿತರೇಖೆಗಳ ಅಧ್ಯಯನ ಸಾಧ್ಯವಾಗಿದೆ. ಅಮೊನಿಯದ ರೇಖೆಯೊಂದು 1.3 ಸೆಂಮೀ ಅಲೆಯುದ್ದದಲ್ಲಿರುವುದು ಅನುಕೂಲ. 10 ಸೆಂಮೀಗಿಂತ ಹೆಚ್ಚಿನ ಅಲೆಯುದ್ದಗಳಲ್ಲಿ ನೀರು, ಹೈಡ್ರೊಜನ್‍ಸಲ್ಫೈಡ್ ಮುಂತಾದವುಗಳ ಅಧ್ಯಯನ ಸಾಧ್ಯವಾಗಿದೆ. ಗುರು ಮತ್ತು ಶನಿಗ್ರಹಗಳ ಮೇಲೆ ಪಟ್ಟೆ ಪಟ್ಟೆಯಾಗಿ ಕಾಣುವ ವಾತಾವರಣದ ಸ್ತರಗಳ ರಾಸಾಯನಿಕ ಸಂಯೋಜನೆ; ಯುರೇನಸ್ ಮತ್ತು ನೆಪ್ಚೂನ್‍ಗಳಲ್ಲಿ ದಕ್ಷಿಣಧ್ರುವದ ಬಳಿ ಹೆಚ್ಚಿನ ಪ್ರಕಾಶ - ಈ ಎಲ್ಲ ಅಧ್ಯಯನಗಳನ್ನು ನಡೆಸಲಾಗುತ್ತಿದೆ.

ಗುರುವಿನ ಉಷ್ಣೀಯ ಉತ್ಸರ್ಜನೆಯನ್ನೂ ಸಿಂಕ್ರೊಟ್ರಾನ್ ಉತ್ಸರ್ಜನೆಯನ್ನೂ ಬೇರೆಬೇರೆಯಾಗಿ ಅಳತೆ ಮಾಡಲಾಗಿದೆ. ಗುರುವಿನ ಕಾಂತಕ್ಷೇತ್ರದ ವ್ಯಾಪ್ತಿಯನ್ನು ಧೇಬೆ ಎನ್ನುವ ಉಪಗ್ರಹದವರೆಗೂ ವಿಸ್ತರಿಸಿರುವುದು ತಿಳಿದುಬಂದಿದೆ. ಅದರ ಇನ್ನೊಂದು ಉಪಗ್ರಹ ಇಯೋ. ಗುರುವಿನ ಅನುಷ್ಣೀಯ ಉತ್ಸರ್ಜನೆಯನ್ನು ಮಾರ್ಪಾಡುಗೊಳಿ ಸುತ್ತಿದೆ ಎಂಬುದು ಕೂಡ ತಿಳಿದಿದೆ. ಈ ಉತ್ಸರ್ಜನೆಯನ್ನು ಹವ್ಯಾಸಿ ರೇಡಿಯೊ ದೂರದರ್ಶಕಗಳಿಂದಲೂ ತಿಳಿಯಬಹುದು.

5. ರೇಡಿಯೊ ಖಗೋಳವಿe್ಞÁನದ ಕೊಡುಗೆ: ಸೌರವ್ಯೂಹದ ಕಾಯಗಳ ರೇಡಿಯೊ ಅಧ್ಯಯನ ಗಮನಿಸಿದೆವು. ಸೂರ್ಯನಿಂದ ಉತ್ಸರ್ಜಿತ ವಾಗುತ್ತಿರುವ ರೇಡಿಯೊ ಅಲೆಗಳು 1940ರಲ್ಲಿ ನಮ್ಮ ಅರಿವಿಗೆ ಬಂದುವು. ಸೌರಕಲೆಗಳಿಗೂ ಉತ್ಕರ್ಷಗಳಿಗೂ (ಫ್ಲೇರ್ಸ್) ನೇರ ಸಂಬಂಧ ವಿದೆಯೆಂದೂ ತಿಳಿಯಿತು.

ಈಗ್ಗೆ 50 ವರ್ಷಗಳ ಹಿಂದೆ (ಅಂದರೆ 1950ರ ದಶಕ) ನ್ಯೂಟ್ರಾನ್ ನಕ್ಷತ್ರ ಎಂಬುದು ಕೇವಲ ಪರಿಕಲ್ಪನೆಯಾಗಿತ್ತು. ವಾಸ್ತವವಾಗಿ ಹೀಗೊಂದು ನಕ್ಷತ್ರ ಇರಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವೇ ಸಿಕ್ಕಿರಲಿಲ್ಲ. 1967ರಲ್ಲಿ ಸೂಸನ್ ಜೋಸೆಲಿನ್ ಬೆಲ್ (1943) ಎಂಬ ವಿದ್ಯಾರ್ಥಿನಿ ರೇಡಿಯೊ ದೂರದರ್ಶಕದಿಂದ ಬಂದ ಸಂಜ್ಞೆಗಳನ್ನು ಪರಿಶೀಲಿಸಿದಾಗ ನಿಯತಕಾಲಿಕವಾಗಿ ಒಂದು ಸ್ಪಂದದಷ್ಟು (ಪಲ್ಸ್) ಕ್ಷಣಿಕ ಹೆಚ್ಚಳ ಅರಿವಿಗೆ ಬಂದಿತು. ಇದು ಬಾಹ್ಯಾಕಾಶದ ಯಾವುದೋ ಜೀವಿಗಳು ನಮ್ಮತ್ತ ಪ್ರೇಷಿಸುತ್ತಿರುವ ಸಂದೇಶವಾಗಿರಬಹುದು ಎಂಬ ಸಲಹೆಯೂ ಬಂದಿತ್ತು. ಇದೇ ಪಲ್ಸಾರ್ ಅಥವಾ ನ್ಯೂಟ್ರಾನ್ ನಕ್ಷತ್ರ. ಸೂರ್ಯನಿಗಿಂತ ಸುಮಾರು ಹತ್ತು ಪಟ್ಟು ಹೆಚ್ಚು ರಾಶಿಯ ನಕ್ಷತ್ರದ ಅವಸಾನದ ಹಂತ ಇದು. ಈ ಆವಿಷ್ಕಾರ ವಿe್ಞÁನಿ ಆಂಟನಿ ಹೆವಿಷ್‍ಗೆ (1924) ನೊಬೆಲ್ ಪ್ರಶಸ್ತಿ ತಂದುಕೊಟ್ಟಿತು (1974).

ನಮ್ಮ ಬ್ರಹ್ಮಾಂಡವಾದ ಆಕಾಶಗಂಗೆಯ ಕೇಂದ್ರಬಿಂದುವನ್ನು ಜಾನ್ಸ್ಕಿಯ ಮೊತ್ತಮೊದಲ ಪ್ರಯೋಗವೇ ತೋರಿಸಿಕೊಟ್ಟಿತು. ಮುಂದಿನ ದಿನಗಳಲ್ಲಿ ಈ ಬ್ರಹ್ಮಾಂಡದ ಆಕಾರವನ್ನು ಸ್ಪಷ್ಟಪಡಿಸಿದ್ದೂ ರೇಡಿಯೊ ದೂರದರ್ಶಕಗಳೇ. 21 ಸೆಂಮೀ ವೀಕ್ಷಣೆಗಳು ಹೈಡ್ರೊಜನ್ ಹೇಗೆ ವಿಸ್ತರಿಸಿದೆ ಎಂಬುದನ್ನು ತೋರಿಸಿದುವು. ನಮ್ಮ ದೃಷ್ಟಿರೇಖೆಯಲ್ಲಿ ಬ್ರಹ್ಮಾಂಡದ ಸುರುಳಿಗೆ ಎರಡುಮೂರು ತೋಳುಗಳು ಇರಬಹುದು ಎಂಬ ಸಾಧ್ಯತೆಯನ್ನು 21 ಸೆಂಮೀನ ಎರಡು-ಮೂರು ವಿಭಿನ್ನ ಡಾಪ್ಲರ್ ಪಲ್ಲಟಗಳು ಸೂಚಿಸಿದುವು. ಅತಿದೀರ್ಘ ವ್ಯೂಹದಿಂದ ನಡೆಸಿದ ವೀಕ್ಷಣೆಗಳು ಕೇಂದ್ರಭಾಗದಲ್ಲಿ ಒಂದು ಕೃಷ್ಣವಿವರ (ಬ್ಲ್ಯಾಕ್ ಹೋಲ್) ಇರಬಹುದೆಂಬುದರ ಸುಳಿವು ಕೂಡ ನೀಡಿದುವು. ಸುಮಾರು 130 ಜ್ಯೋತಿವರ್ಷಗಳಷ್ಟು ದೂರದವರೆಗೂ ಈ ಜೆಟ್ ವ್ಯಾಪಿಸಿದೆ.

ಅಂತರನಾಕ್ಷತ್ರಿಕ ಮಾಧ್ಯಮ ಎಂದರೆ ನಕ್ಷತ್ರಗಳ ನಡುವೆ ಹರಡಿರುವ ದೂಳು ಮತ್ತು ಅನಿಲ. ಇವು ನಿಮ್ನ ಉಷ್ಣತೆಯಲ್ಲಿರಬಹುದಾದ್ದರಿಂದ ಇವುಗಳಿಂದ ಉಷ್ಣೀಯ ಮತ್ತು ಅನುಷ್ಣೀಯ ಉತ್ಸರ್ಜನೆ ಸಾಧ್ಯ. ರೇಡಿಯೊ ದೂರದರ್ಶಕಗಳ ನೆರವಿನಿಂದ 130ಕ್ಕೂ ಹೆಚ್ಚು ಅಣುಗಳನ್ನು ಹೀಗೆ ಪತ್ತೆಮಾಡಲಾಗಿದೆ. ಅನಿಲ ಎಂಬುದರಲ್ಲಿ ಹೆಚ್ಚಾಗಿ ತಟಸ್ಥ ಹೈಡ್ರೊಜನ್, ಅಯಾನೀಕೃತ ಹೈಡ್ರೊಜನ್ ಇರುವುವು. ಇವನ್ನು ಊ I ಮತ್ತು ಊ II ಪ್ರದೇಶಗಳು ಎಂದು ಗುರುತಿಸಿದೆ. ಇವಲ್ಲದೆ ಅಣುರೂಪದ ಹೈಡ್ರೊಜನ್ ಇರುವ ಆಣವಿಕ ಮೇಘವನ್ನೂ ಬೇರೆಯಾಗಿ ಗುರುತಿಸಬಹುದು.

ಇಡೀ ಬ್ರಹ್ಮಾಂಡ ಹೇಗೆ ಆವರ್ತಿಸುತ್ತಿದೆ ಎಂದು ತಿಳಿಯುವಲ್ಲಿ ಡಾಪ್ಲರ್ ಪಲ್ಲಟಗಳ ಅಧ್ಯಯನದಿಂದ ಮುಖ್ಯ ಸುಳುಹು ದೊರೆಯಿತು. ಕೆಪ್ಲರ್‍ನ ನಿಯಮಗಳಿಗನುಸಾರವಾಗಿ ಇರಬೇಕಾದ ವರ್ತುಳೀಯ ವೇಗ ಬ್ರಹ್ಮಾಂಡದಲ್ಲಿ ಕಂಡುಬರುವುದಿಲ್ಲ. ಈ ವೈರುಧ್ಯಕ್ಕೆ ಕಾರಣ ಏನಿರಬಹುದು ಎಂಬ ಜಿe್ಞÁಸೆ ತೋರಿಸಿಕೊಟ್ಟದ್ದು ಬೀರದ ಸಣ್ಣಕಾಯಗಳು (ಉದಾ: ಪಲ್ಸಾರ್, ಶ್ವೇತಕುಬ್ಜ, ಕಂದುಕುಬ್ಜ) ಮತ್ತು ಅನಿಲ ದೂಳುಗಳ ಮಹತ್ತ್ವವನ್ನು. ಹೀಗೆ ಬ್ರಹ್ಮಾಂಡದ ಉದ್ದಗಲಕ್ಕೆ ಹರಡಿರುವ ಅಸಿತಪದಾರ್ಥದ (ಬ್ಲ್ಯಾಕ್ ಮ್ಯಾಟರ್) ಪರಿಕಲ್ಪನೆ ಪ್ರವರ್ಧಿಸಿತು. 

ಇತರ ಬ್ರಹ್ಮಾಂಡಗಳ ಆವರ್ತನೆಗಳನ್ನು ತಿಳಿಯಲು ರೇಡಿಯೊ ದೂರದರ್ಶಕ ನೆರವಿಗೆ ಬಂದಿದೆ. ಇವುಗಳಲ್ಲಿಯೂ ಕೆಪ್ಲರನ ನಿಯಮಕ್ಕೆ ಅನುಮೋದನೆ ದೊರೆಯಲಿಲ್ಲವಾದ್ದರಿಂದ ಅಸಿತಪದಾರ್ಥದ ಅಸ್ತಿತ್ವಕ್ಕೆ ರುಜುವಾತು ಸಿಕ್ಕಿದಂತಾಯಿತು. ಕೆಲವೊಂದು ಬ್ರಹ್ಮಾಂಡಗಳ ಕೇಂದ್ರದಲ್ಲಿ ಕೃಷ್ಣವಿವರ ಇರಬಹುದೆಂದು ಊಹಿಸಲು ಅವುಗಳಿಂದ ಉತ್ಸರ್ಜಿತವಾಗುವ ಅತಿಹೆಚ್ಚು ಪ್ರಮಾಣದ ಶಕ್ತಿಯೇ ಕಾರಣವಾಗುವುದು. ಪಟುಬ್ರಹ್ಮಾಂಡೀಯಬೀಜಗಳು (ಎಜಿಎನ್ - ಆ್ಯಕ್ಟಿವ್ ಗ್ಯಲಾಕ್ಟಿಕ್ ನ್ಯೂಕ್ಲಿಯೈ) ಮತ್ತು ಕ್ವೇಸಾರುಗಳು ಈ ವರ್ಗಕ್ಕೆ ಸೇರಿದವು. ದೃಕ್‍ದೂರದರ್ಶಕಕ್ಕೆ ಕೇವಲ ಚುಕ್ಕಿಯಂತೆ ಕಾಣುವ ಇವು ಬಲುದೂರದಲ್ಲಿದ್ದರೂ ಅತಿ ಹೆಚ್ಚಿನ ಶಕ್ತಿಯ ಕಾರಣ ಪ್ರಕಟವಾಗುತ್ತವೆ. ಇವುಗಳ ರೇಡಿಯೊ ಉತ್ಸರ್ಜನೆಯ ವಿಸ್ತಾರ ಆಕಾಶಗಂಗೆಯ ನೂರು ಪಟ್ಟು! ಈ ಅದ್ಭುತಗಾತ್ರದ ವಸ್ತುಗಳನ್ನು ರೇಡಿಯೊದೂರದರ್ಶಕ ತೋರಿಸಿಕೊಟ್ಟಿದೆ. ಕ್ವೇಸಾರುಗಳಂತೆ ಇತರ ಹಲವಾರು ಬ್ರಹ್ಮಾಂಡಗಳನ್ನು ಅಭ್ಯಸಿಸಲು ರೇಡಿಯೊ ದೂರದರ್ಶಕಗಳು ಉಪಯುಕ್ತವಾಗಿವೆ. ಈ ಎಲ್ಲ ಬ್ರಹ್ಮಾಂಡಗಳ ವೇಗವನ್ನು ರಕ್ತಪಲ್ಲಟದಿಂದ (ರೆಡ್ ಶಿಫ್ಟ್) ಅಳತೆಮಾಡಿ ದಾಗ ಅವು ಬೆಳಕಿನದಕ್ಕಿಂತ ಅಧಿಕ ವೇಗದಿಂದ ದೂರ ಧಾವಿಸುತ್ತಿದ್ದುವು! ಈ ವಿದ್ಯಮಾನ ಸೈದ್ಧಾಂತಿಕ ಭೌತವಿe್ಞÁನಿಗಳಿಗೆ ಹೊಸ ಸಮಸ್ಯೆಯನ್ನೇ ಸೃಷ್ಟಿಸಿತು. ಸೂಪರ್‍ಲ್ಯೂಮಿನಲ್ ಮೋಶನ್ ಎಂದು ಇದನ್ನು ಹೆಸರಿಸಲಾಗಿದೆ. ಬೆಳಕಿನ ವೇಗದಿಂದ ವಸ್ತು ನಮ್ಮತ್ತ ನುಗ್ಗಿ ಬರುವಾಗ ಈ ಬಗೆಯ ಪಲ್ಲಟ ಸಾಧ್ಯ ಎಂದು ಈಗ ತಿಳಿದಿದೆ. 1979ರಲ್ಲಿ ಎರಡೆರಡು ಕ್ವೇಸಾರುಗಳನ್ನು ಒಂದೇ ದಿಶೆಯಲ್ಲಿ ಗುರುತಿಸಿದಾಗ ಗುರುತ್ವದಿಂದ ಬೆಳಕು ಬಾಗುವುದರ ಪರಿಣಾಮವನ್ನು ಚರ್ಚಿಸಲಾಯಿತು. ಹಿನ್ನೆಲೆಯಲ್ಲಿ ಕ್ವೇಸಾರ್ ಇದ್ದು ನಡುವೆ ಬೇರೊಂದು ಸಾಧಾರಣವಾದ ಬ್ರಹ್ಮಾಂಡ ಇದ್ದರೆ ಅದು ಬೆಳಕನ್ನು ಬಾಗಿಸುತ್ತದೆ. ಈ ಸಾಧಾರಣವಾದ ಬ್ರಹ್ಮಾಂಡ ಅದರ ದೂರದ ಕಾರಣ ಕಾಣುವುದಿಲ್ಲ. ಆದರೆ ಅದು ಮಸೂರದಂತೆ ಬೆಳಕನ್ನು ಬಾಗಿಸುವುದರಿಂದ ಕ್ವೇಸಾರಿನ ಇನ್ನೊಂದು ಬಿಂಬ ಮೂಡುತ್ತದೆ. ಹೀಗೆ ಕ್ವೇಸಾರಿನ ಜೋಡಿ ಇದೆ ಎಂಬ ಭ್ರಮೆ ಮೂಡುತ್ತದೆ. ಅಂತರಬ್ರಹ್ಮಾಂಡ ಗುರುತ್ವಮಸೂರ ಪರಿಣಾಮವೆಂದು ಈ ವಿದ್ಯಮಾನದ ಹೆಸರು. ಭೂಮಿ, ಸಾಧಾರಣ ಬ್ರಹ್ಮಾಂಡ ಮತ್ತು ಕ್ವೇಸಾರ್ ಒಂದೇ ನೇರಕ್ಕೆ ಇದ್ದರೆ ಉಂಗುರದಂತೆ ಕಾಣುತ್ತದೆ. ನೇರಕ್ಕೆ ಇಲ್ಲದಿದ್ದರೆ ಕಂಸಗಳಂತೆ ತುಂಡಾದ ಬಿಂಬಗಳು ಕಾಣುತ್ತವೆ. ಈಚೆಗೆ ಇಂಥ ಪರಿಣಾಮದ ಛಾಯಾಚಿತ್ರಗಳನ್ನು ಹಬಲ್ ದೂರದರ್ಶಕ ಒದಗಿಸಿದೆ.

ಈ ಬಗೆಯ ಬ್ರಹ್ಮಾಂಡಗಳ ಅಗಾಧ ಶಕ್ತಿಯನ್ನು ಎಕ್ಸ್‍ಕಿರಣ, ದ್ರುಕ್ ಹಾಗೂ ರೇಡಿಯೊ ತರಂಗಗಳಲ್ಲಿ ಆಕಾಶಗಂಗೆಯದರೊಡನೆ ತುಲನಿಸಬಹುದು: ಬ್ರಹ್ಮಾಂಡ ಎಕ್ಸ್‍ಕಿರಣ ದೃಕ್ ರೇಡಿಯೊ ಆಕಾಶಗಂಗೆ 1 1 1 ರೇಡಿಯೊ 100-5000 2 2000-2,000,000 ಬ್ರಹ್ಮಾಂಡಗಳು ಸೆಫರ್ಟ್ 3000-70,000 2 20-2,000,000 ಬ್ರಹ್ಮಾಂಡಗಳು ಕ್ವೇಸಾರುಗಳು 2,500,000 250 6,000,000

ರೇಡಿಯೊ ಖಗೋಳವಿಜ್ಞಾನದ ಇನ್ನೊಂದು ಮುಖ್ಯ ಕೊಡುಗೆಯೆಂದರೆ ಮಹಾಬಾಜಣೆ (ಬಿಗ್ ಬ್ಯಾಂಗ್) ಸಿದ್ಧಾಂತದ ಸಮರ್ಥನೆ. 1960ರ ದಶಕದಲ್ಲಿ ಮಹಾಬಾಜಣೆಯ ಕಾರಣವಾಗಿ ಪ್ರಕಟವಾಗಬಹುದಾದ ಸಾರ್ವತ್ರಿಕ ವಿಕಿರಣವನ್ನು ಲೆಕ್ಕಹಾಕಿದರು. ಇದು ಅತಿ ಕಡಿಮೆ ಎಂದರೆ -2700 ಸೆ (3ಏ ಕೆಲ್ವಿನ್) ಉಷ್ಣತೆಗೆ (ಸು. 15-20 ಬಿಲಿಯನ್ ವರ್ಷಗಳ ಅನಂತರ) ಇಂದು ಇಳಿದಿರಬಹುದು ಎಂದು ಊಹಿಸಿ, ಇದನ್ನು ರೇಡಿಯೊ ದೂರದರ್ಶಕಗಳಿಂದ ಪತ್ತೆಮಾಡ ಬಹುದು ಎಂದು ಸೂಚಿಸಿದರು. ಇದೇ ವೇಳೆ ಬೆಲ್ ಲ್ಯಾಬೊರೇಟರಿಯ ಇಬ್ಬರು ರೇಡಿಯೊ ದೂರದರ್ಶಕದಿಂದ ಬರುತ್ತಿದ್ದ ಕ್ಷೀಣ ಸಂಜ್ಞೆಯ ಮೂಲವನ್ನು ಹುಡುಕುತ್ತಿದ್ದರು. ದೂರದರ್ಶಕವನ್ನು ಯಾವ ದಿಶೆಗೆ ತಿರುಗಿಸಿದರೂ ಈ ಮಂದ್ರನಾದ ಮಿಡಿಯುತ್ತಿತ್ತು. ಆದ್ದರಿಂದ ಸ್ಥಳೀಯ ಆಕರವೇನಾದರೂ ಇದನ್ನು ಸೃಷ್ಟಿಸುತ್ತಿರಬಹುದೇ ಎಂಬ ಅಂಶವನ್ನೂ ಪರಿಶೀಲಿಸಿದರು. ಕೊನೆಗೆ ವಿಶ್ವಪೂರ್ತಿ ಪ್ರಕಟವಾಗುತ್ತಿದ್ದ ಹಿನ್ನೆಲೆನಾದ ಇದು ಎಂದು ನಿರ್ಧಸಿದರು. ಹೀಗೆ ಮಹಾಬಾಜಣೆ ಸಿದ್ಧಾಂತಕ್ಕೆ ನೇರ ಪುರಾವೆ ಸಿಕ್ಕಿತು. ಮಹಾಬಾಜಣೆಯಿಂದ ಆರಂಭವಾದ ವಿಶ್ವ ಇಂದು -2700 ಸೆ.ಗೆ ತಣ್ಣಗಾಗಿದೆ ಎಂದಾಯಿತು. ಇದರ ವೀಕ್ಷಣೆಗೆಂದೇ ಸಿಒಬಿಇ (ಕಾಸ್ಮಿಕ್ ಬ್ಯಾಕ್‍ಗ್ರೌಂಡ್ ಎಕ್ಸ್‍ಪ್ಲೋರರ್) ಎಂಬ ಬಾಹ್ಯಾಕಾಶನೌಕೆ ಹಾರಿ ಸಮರ್ಥನೆ ಒದಗಿಸಿತು. ಕೇವಲ ಆರೇಳು ದಶಕಗಳಷ್ಟು ಇತಿಹಾಸವಿರುವ ರೇಡಿಯೊ ಖಗೋಳವಿe್ಞÁನ ಮೂರು ನೊಬೆಲ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಪಲ್ಸಾರ್‍ನ ಆವಿಷ್ಕಾರ - ಆ್ಯಂಟನಿ ಹೆವಿಷ್ (1924) ಮತ್ತು ಹೈ ಮಾರ್ಟಿನ್ ರೈಲ್ (1918-84) 1974ರಲ್ಲಿ; ಬ್ರಹ್ಮಾಂಡೀಯ ಹಿನ್ನೆಲೆ ವಿಕಿರಣದ ಆವಿಷ್ಕಾರ - ಆರ್ನೋ ಪೆನ್ಸಿಯಾಸ್ (1933) ಮತ್ತು ರಾಬರ್ಟ್ ವಿಲ್ಸನ್ (1936) 1978ರಲ್ಲಿ; ಯಮಳ ಪಲ್ಸಾರ್‍ನ ಆವಿಷ್ಕಾರ - ರಸಲ್ ಹಲ್ಸ್ (1950) ಮತ್ತು ಜೊಸೆಫ್ ಟೈಲರ್ (1941) 1993ರಲ್ಲಿ. ಇವಲ್ಲದೆ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೊನೆನ್ಸ್‍ಗಾಗಿ 1952ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಎಡ್ವರ್ಡ್ ಮಿಲ್ಸ್ ಪರ್ಸೆಲ್ (1912-97) ಮತ್ತು ಫೆಲಿಕ್ಸ್ ಬ್ಲಾಚ್ (1905-83) ಹಂಚಿಕೊಂಡರು. ಇವರು 1950ರಲ್ಲಿ 21 ಸೆಂಮೀ ಅಧ್ಯಯನವನ್ನು ಮೊದಲಬಾರಿ ನಡೆಸಿದರು. ಜಾನ್ಸ್ಕಿಯ ಹೆಸರಿನಲ್ಲಿ ಅಮೆರಿಕದ ಎನ್‍ಆರ್‍ಒ ಸಂಸ್ಥೆ ಒಂದು ಪ್ರೊಫೆಸರ್ ಹುದ್ದೆಯನ್ನಿರಿಸಿದೆ. ಈ ಗೌರವದ ಪ್ರೊಫೆಸರ್‍ಶಿಪ್ ಪಡೆದ ರೇಡಿಯೊ ಖಗೋಳವಿe್ಞÁನಿಗಳಿಬ್ಬರೂ ಭಾರತೀಯರು ಎಂಬುದು ಹೆಗ್ಗಳಿಕೆಯ ವಿಷಯ. ವಿ. ರಾಧಾಕೃಷ್ಣನ್ (ರಾಮನ್ ಸಂಶೋಧನಾಲಯದ ನಿರ್ದೇಶಕರು) ಮತ್ತು ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಶ್ರೀನಿವಾಸ ಕುಲಕರ್ಣಿ.

6. ಭಾರತದಲ್ಲಿ ರೇಡಿಯೊ ಖಗೋಳವಿe್ಞÁನ: ಖಗೋಳವಿe್ಞÁನದಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸಿದ ಕೊಡೈಕೆನಾಲ್ ವೀಕ್ಷಣಾಲಯ 1952ರಲ್ಲಿ ರೇಡಿಯೊ ದೂರದರ್ಶಕವನ್ನು ಪಡೆದುಕೊಂಡಿತು. 100 ಮೆಗಾಹಟ್ರ್ಸ್ ಆವೃತ್ತಿಯ ಈ ಆಂಟೆನ ಸೂರ್ಯನ ರೇಡಿಯೊ ಉತ್ಸರ್ಜನೆಯನ್ನು ವರದಿ ಮಾಡುತ್ತಿತ್ತು. ಮುಂದೆ 1956ರಲ್ಲಿ ಅಹ್ಮದಾಬಾದ್‍ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ ಬ್ರಹ್ಮಾಂಡೀಯ ರೇಡಿಯೊಗದ್ದಲ ಆಲಿಸಲು ರೇಡಿಯೊದೂರದರ್ಶಕವನ್ನು ನಿರ್ಮಿಸಿತು. ತರುವಾಯ ಹಂತಹಂತವಾಗಿ ರೇಡಿಯೊ ಅಧ್ಯಯನ ನಡೆಸಲು ದೂರದರ್ಶಕಗಳು ನಿರ್ಮಾಣವಾದುವು.

1963ರಲ್ಲಿ ಟಾಟಾ ಮೂಲಭೂತಸಂಶೋಧನಸಂಸ್ಥೆ ಮುಂಬಯಿಯ ಕಲ್ಯಾಣ್‍ನಲ್ಲಿ 610 ಮೆಗಾಹಟ್ರ್ಸ್ ಆಂಟೆನವನ್ನು ಸ್ಥಾಪಿಸಿತು. ಮುಂದೆ ಇನ್ನೂ ಹೊಸಹೊಸ ದೂರದರ್ಶಕಗಳು ಸ್ಥಾಪನೆಯಾದುವು. ಅವುಗಳಲ್ಲಿ ಮುಖ್ಯವಾದದ್ದು ಉದಕಮಂಡಲದ ದೊಡ್ಡಬೆಟ್ಟದ ಮೇಲಿರುವ 530ಮೀx30ಮೀ ವ್ಯಾಪ್ತಿಯ ದೂರದರ್ಶಕ (1970). ಈ ವ್ಯವಸ್ಥೆಯಲ್ಲಿ ಸು. 24 ಪರವಲೀಯ (ಪ್ಯರಾಬೊಲಿಕ್) ಗಂಗಳಗಳಿವೆ. ಇದು 3265 ಮೆಗಾಹಟ್ರ್ಸ್ ಆವೃತ್ತಿಯದು. ಚಂದ್ರನ ಹಿಂದೆ ಮರೆಯಾಗಿ ಹೊರಬರುವ ರೇಡಿಯೊ ಆಕರಗಳ ದೊಡ್ಡದೊಂದು ಪಟ್ಟಿಯನ್ನೇ ಇದು ಸಿದ್ಧಪಡಿಸಿತು. ಈ ನೂತನವಿಧಾನದಿಂದ ಹಲವಾರು ಹೊಸ ಆಕರಗಳು ಪತ್ತೆಯಾಗಿವೆ. ಇವಲ್ಲದೆ 7 ಬೇರೆಬೇರೆ ಗಂಗಳಗಳನ್ನು ಅಳವಡಿಸಿ ವ್ಯತಿಕರಣಮಾಪನ ವಿಧಾನದಿಂದ ಪರೀಕ್ಷೆ ನಡೆಸಲಾಯಿತು. ಗೌರಿಬಿದನೂರಿನಲ್ಲಿ ಇಂಗ್ಲಿಷ್ ಅಕ್ಷರ ಖಿ ಆಕಾರದ 1000 ಡೈಪೋಲ್‍ಗಳ ಆಂಟೆನ ವ್ಯವಸ್ಥೆ ಉಂಟು. ಉತ್ತರದಕ್ಷಿಣವಾಗಿ ಸುಮಾರು 0.5 ಕಿಮೀ ಪೂರ್ವಪಶ್ಚಿಮವಾಗಿ ಸುಮಾರು 1.5 ಕಿಮೀ ಉದ್ದದ ಈ ಜೋಡಣೆ 34.5 ಮೆಗಾಹಟ್ರ್ಸ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ರಾಮನ್ ಸಂಶೋಧನಾಲಯದ ಆವರಣದಲ್ಲಿ ಸುಮಾರು 10 ಮೀ ವ್ಯಾಸದ ಬೃಹತ್ ಆಂಟೆನ ಸ್ಥಾಪಿತವಾಗಿದೆ. ಇದು 80-115 ಗಿಗಾಹಟ್ರ್ಸ್ (ಅಂದರೆ ಮಿಲಿಮೀಟರ್ ತರಂಗಗಳ) ಅಧ್ಯಯನ ನಡೆಸುತ್ತಿದೆ. ಪುಣೆಯಿಂದ 80 ಕಿಮೀ ಉತ್ತರದ ನಾರಾಯಣಗಾಂವ್ ನಲ್ಲಿರುವ ಜಿಎಮ್‍ಆರ್‍ಟಿ (ಜಯಂಟ್ ಮೀಟರ್ ರೇಡಿಯೊ ಟೆಲಿಸ್ಕೋಪ್) ಮೀಟರ್ ಅಲೆಯುದ್ದದ ಅತಿದೊಡ್ಡ ದೂರದರ್ಶಕ ಎನ್ನಿಸಿಕೊಂಡಿದೆ. ಸುಮಾರು 45 ಮೀ ವ್ಯಾಸದ 30 ಗಂಗಳಗಳಿವೆ. ಇದರಲ್ಲಿ 50ರಿಂದ 1430 ಮೆಗಾಹಟ್ರ್ಸ್ ಆವೃತ್ತಿಯ ಅಧ್ಯಯನ ಸಾಧ್ಯವಾಗಿದೆ. ಅಂತಾರಾಷ್ಟ್ರೀಯ ಸಂಘಟನಾಧ್ಯಯನಗಳಲ್ಲಿ ಇದು ಪಾಲ್ಗೊಂಡಿದೆ. ರಾಮನ್ ಸಂಶೋಧನಾಲಯ ಮತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಆಸ್ಟ್ರೊಫಿಸಿಕ್ಸ್ ಈ ಎರಡೂ ಸಂಸ್ಥೆಗಳು ಮಾರಿಷಸ್‍ನಲ್ಲಿ ರೇಡಿಯೊದೂರದರ್ಶಕವನ್ನು ಸಜ್ಜುಗೊಳಿಸಿವೆ. 2ಕಿಮೀx1 ಕಿಮೀ ಗಾತ್ರದ (ಖಿ) ಆಕಾರದ ಈ ಜೋಡನೆ 150 ಮೆಗಾಹಟ್ರ್ಸ್ ಆವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಇದಕ್ಕಿಂತ ಭಾರೀ ಉದ್ದಗಲದ ವ್ಯವಸ್ಥೆಯನ್ನು ಅಹ್ಮದಾಬಾದ್‍ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ ನಿರ್ಮಿಸಿತು. ಅಹ್ಮದಾಬಾದ್, ರಾಜಕೋಟ್ ಮತ್ತು ಭಾವನಗರಗಳಲ್ಲಿ ಬೇರೆಬೇರೆ ಆಂಟೆನಗಳನ್ನು ನಿರ್ಮಿಸಿ, ಮೂರರ ಅಳತೆಗಳನ್ನೂ ತ್ರಿಕೋಣೀಕರಣದಿಂದ ಒಟ್ಟುಗೂಡಿಸಿ, ಸೌರಮಾರುತ, ಅಂತರಗ್ರಹ ಪ್ಲಾಸ್ಮಾ ವಿಕಿರಣಗಳನ್ನು ಅಳತೆಮಾಡಲಾಗಿದೆ. ಬೃಹದ್ವಿಶ್ವವನ್ನು ಅರಿತು ವಿವರಿಸಲು ಮಾನವಮತಿ ಅನುಸರಿಸಿರುವ ಖಗೋಳವೈe್ಞÁನಿಕ ಮಾರ್ಗಗಳು ಹಲವಾರು. ಆ ಪೈಕಿ ರೇಡಿಯೊ ಖಗೋಳವಿe್ಞÁನ ಒಂದು. ಕೇವಲ 6 ದಶಕಗಳಲ್ಲೇ ಇದು ಸಾಧಿಸಿರುವ ಪ್ರಗತಿ ಮತ್ತು ಭರವಸೆ ನೀಡಿರುವ ಭವಿಷ್ಯ ಸಾಧ್ಯತೆಗಳು ಉತ್ತೇಜನಕಾರಿಯಾಗಿವೆ. (ಎಸ್.ಎಚ್..ಬಿ.ಎಸ್.)