ಯಾವ ಮೋಹನ ಮುರಳಿ ಕರೆಯಿತು
ಗೋಚರ
- ಸಂಗೀತ : ಮೈಸೂರು ಅನಂತಸ್ವಾಮಿ
- ಸಾಹಿತ್ಯ : ಗೋಪಾಲ ಕೃಷ್ಣ ಅಡಿಗ
- ಹಾಡುಗಾರರು: ರತ್ನಮಾಲಾ ಪ್ರಕಾಶ್
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು |ಪ|
ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ |೧|ಯಾವ|
ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ |೨|ಯಾವ|
ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ |೩|ಯಾವ|
ಯಾವ ಮೋಹನ ಮುರಳಿ ಕರೆಯಿತೋ ಇದ್ದಕಿದ್ದೊಡೆ ನಿನ್ನನು
ಯಾವ ಬೃಂದಾವನವು ಚಾಚಿತೋ ತನ್ನ ಮಿಂಚಿನ ಕೈಯನು |೪|
ಈ ಹಾಡಿನ ಸಾಹಿತ್ಯವನ್ನು ಅಮೇರಿಕಾ ಅಮೇರಿಕಾ ಚಿತ್ರದ ಹಾಡೊಂದರಲ್ಲಿ ಬಳಸಿಕೊಳ್ಳಲಾಗಿದೆ.