ರಣಧೀರ - ಮೀನಾಕ್ಷಿ ನಿನ್ನ ಕಣ್ಣ ಮೇಲೆ

Wikisource ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಚಿತ್ರ: ರಣಧೀರ
ಗಾಯನ: ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಸಂಗಡಿಗರು
ಸಂಗೀತ: ಹಂಸಲೇಖ


ಪಲ್ಲವಿ
ಮೀನಾಕ್ಷಿ ನಿನ್ನ ಕಣ್ಣ ಮೇಲೆ ಮುರಳಿಗೇಕೊ ಕಣ್ಣು
ಕಾಮಾಕ್ಷಿ ನಿನ್ನ ಕೆನ್ನೆಗಳಿದು ಮಧುರವಾದ ಹಣ್ಣು
ಕೇಳೆ ಸಖಿ ಮಕರಂದನ ರಾಯಭಾರ ನೀನವನಿಗೆ ಹೆಣ್ಣು, ಅವನಿನ್ನು ಬಿಡನಿನ್ನು
ಮೀನಾಕ್ಷಿ ನಿನ್ನ ಕಣ್ಣ ಮೇಲೆ ಮುರಳಿಗೇಕೊ ಕಣ್ಣು
ಕಾಮಾಕ್ಷಿ ನಿನ್ನ ಕೆನ್ನೆಗಳಿದು ಮಧುರವಾದ ಹಣ್ಣು

ಚರಣ-೧
ನಿನ್ನ ಪಾದ ಗೆಜ್ಜೆ ನಾದ ನಡೆವ ಭಂಗಿಗೆ
ಬಿಗಿದ ನಡುವ ತುಂಬಿದೆದೆಯ ಮೈ ಮೆರವಣಿಗೆ
ಗೋಕುಲದ ಬೀದಿಗಳಿಗೆ ಸೂರ್ಯೋದಯವೇ
ನೀ ನಡೆದು ಬೀಗುತಿರಲು ಹೃದಯೋದಯವೇ
ನಳಿನಾಕ್ಷಿ ನಿನ್ನ ನಡುವ ಮೇಲೆ ಈ ಮುರಾರಿ ಕಣ್ಣು
ಜಲಜಾಕ್ಷಿ ನೀನು ಗಿಣಿಯು ಕಂಡ ಮಾಗಿ ತೂಗೊ ಹಣ್ಣು
ಕೇಳೆ ಸಖಿ ಮಕರಂದನ ರಾಯಭಾರ ನೀನವನಿಗೆ ಹೆಣ್ಣು, ಅವನಿನ್ನು ಬಿಡನಿನ್ನು

ಚರಣ-೨
ದ್ವಾರಕಾಪುರದಲಿ ಅಸುರ ಸೈನ್ಯ ದಾಳಿಗೆ
ಅವಿತು ಕುಳಿತ ಗೋಪಿ ಕುಲದ ಪ್ರಾಣ ರಕ್ಷೆಗೆ
ಶ್ರೀ ಕೃಷ್ಣನು ವೀರನಾಗಿ ಧಾವಿಸಿ ಬರಲು
ರಾಧೆ, ನೀ ಕರಪಿಡಿದು ಕರೆದೊಯ್ಯೆನಲು
ಕಮಲಾಕ್ಷಿ ನಿನ್ನ ಪ್ರಾಣದೊಡವೆ ಮೇಲೆ ಅವನ ಕಣ್ಣು
ವಿಮಲಾಕ್ಷಿ ನೀನು ಶೇಷಶಯನ ಕದ್ದು ಒಯ್ವ ಹಣ್ಣು

ಕನ್ನಡ ವಿಕಿಸೋರ್ಸ್[ಬದಲಾಯಿಸಿ]

ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |