ಶುಭಮಂಗಳ - ಸ್ನೇಹದ ಕಡಲಲ್ಲೀ
ಚಿತ್ರ: ಶುಭಮಂಗಳ
ಸಾಹಿತ್ಯ: ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯನ:
ಸ್ನೇಹದ ಕಡಲಲ್ಲೀ..
ನೆನಪಿನ ದೋಣಿಯಲೀ... |೨|
ಪಯಣಿಗ ನಾನಮ್ಮಾ |೨|
ಪ್ರೀತಿಯ ತೀರವ
ಸೇರುವುದೊಂದೇ..
ಬಾಳಿನ ಗುರಿಯಮ್ಮಾ |೨|
ಸ್ನೇಹದ ಕಡಲಲ್ಲೀ..
ನೆನಪಿನ ದೋಣಿಯಲೀ...
ಪಯಣಿಗ ನಾನಮ್ಮಾ |೨|
ಬಾಲ್ಯದ ಆಟ ಆ ಹುಡುಗಾಟ... ಇನ್ನು ಮಾಸಿಲ್ಲಾ!
ಅ ಆ.. ಬಾಲ್ಯದ ಆಟ ಆ ಹುಡುಗಾಟ... ಇನ್ನು ಮಾಸಿಲ್ಲಾ
ಆಟದೆ ಸೋತು ರೋಷದೆ ಕಚ್ಚಿದ |೨|.. ಗಾಯವ ಮರೆತಿಲ್ಲಾ..
ಹ ಹ.. ಗಾಯವ ಮರೆತಿಲ್ಲಾ!
ಸ್ನೇಹದ ಕಡಲಲ್ಲೀ..
ನೆನಪಿನ ದೋಣಿಯಲೀ...
ಪಯಣಿಗ ನಾನಮ್ಮಾ |೨|
ಶಾಲೆಗೆ ಚಕ್ಕರ್
ಊಟಕೆ ಹಾಜರ್
ಲೆಕ್ಕದೆ ಬರಿ ಸೊನ್ನೆ! |೨|
ಎನ್ನುತ ನಾನು ಕೆಣಕಲು ನಿನ್ನ |೨|
ಊದಿಸಿದೆ ಕೆನ್ನೆ!... ಓ, ನಾನದ ಮರೆಯುವೆನೆ?
ಸ್ನೇಹದ ಕಡಲಲ್ಲೀ..
ನೆನಪಿನ ದೋಣಿಯಲೀ...
ಪಯಣಿಗ ನಾನಮ್ಮಾ |೨|
ಸಂಗವ ಬಿಟ್ಟು ಜಗಳಾ ಆಡಿದ ದಿನವ ಮರೆತಿಲ್ಲಾ!
ಅ ಆ.. ಸಂಗವ ಬಿಟ್ಟು ಜಗಳಾ ಆಡಿದ ದಿನವ ಮರೆತಿಲ್ಲಾ
ಮಳೆಯಲಿ ನನ್ನ ಮೋರಿಗೆ ತಳ್ಲಿದ! |೨| ತುಂಟಿಯ ಮರೆತಿಲ್ಲಾ!
ಹ ಹ ಹ ಹಾ.. ತುಂಟಿಯ ಮರೆತಿಲ್ಲಾ
ಸ್ನೇಹದ ಕಡಲಲ್ಲೀ..
ನೆನಪಿನ ದೋಣಿಯಲೀ...
ಪಯಣಿಗ ನಾನಮ್ಮಾ |೨|
ಪ್ರೀತಿಯ ತೀರವ..
ಸೇರುವುದೊಂದೇ|೨|
ಬಾಳಿನ ಗುರಿಯಮ್ಮಾ |೨|