ಪುಟ:ನಿರ್ಮಲೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ೪೫ ಕಮಲಾ:-ನಾವು ನಂಟರು, ಒಬ್ಬರನ್ನೊ ಬ ರು ಮಾತನಾಡಿಸಬಾ ರದೆ ? ಅದರಲ್ಲಿ ದೋಷವೇನು? ದುರ್ಮ:- ನಾನು ನಿನಗೆ ಯಾವ ತೆರನಾದ ನಂಟನಾಗಬೇಕೆಂದು ನಿನ್ನ ಅಪೇಕ್ಷೆಯಿದೆಯೋ, ಅದನ್ನು ನಾನು ಚೆನ್ನಾಗಿ ಬಲ್ಲೆನು, ನನ್ನ ಮಾತನ್ನು ಕೇಳು, ಅದೂ ಎಂದಿಗೂ ನಡೆಯದ ವಿಷಯ. ನೀನು ದೂರವಾಗಿರಬೇಕು. ನಿನ್ನೊಡನೆ ನನಗೆ ಸವಿಾಪಬಾಂಧವ್ಯವು ಅವಶ್ಯಕವಿಲ್ಲ, ತಿಳಿಯಿತೆ ? (ದುರ್ಮತಿಯ ಹಿಂದೆಯೇ ಕಮಲಾವತಿಯು ಹೋಗುವಳು, ಇಬ್ಬರೂ ಹೊರಟುಹೋಗುವರು.) ಚಂಡಿ:-ನಿನ್ನ ಮಾತುಗಳು ಬಹಳ ಸ್ವಾರಸ್ಯವಾದುವುಗಳಾಗಿವೆ. ನಾನು ದೊಡ್ಡ ಪಟ್ಟಣದಲ್ಲಿ ವಾಸಮಾಡದೆ ಇದ್ದರೂ ಅಲ್ಲಿಯ ವೃತ್ತಾಂತ ಗಳನ್ನು ಕೇಳಲು ನನಗೆ ಬಹಳ ಆದರವುಂಟು. ಪ್ರಿಯಸೇನ: - ನೀನು ಪಟ್ಟಣಗಳಲ್ಲಿ ವಾಸಮಾಡಿಯೇ ಇಲ್ಲವೆ ? ಇದೇನು? ಅಲ್ಲಿನವರಿಗಿಂತಲೂ ವಿಶೇಷವಾಗಿ ನಿಷಯಗಳನ್ನು ತಿಳಿದುಕೊಂಡಿ ರುವಿಯಲ್ಲ? ಚಂಡಿ:-ನನಗೇನೋ ಷ ಹರೆಂದರೆ ಬಹುಶೆ, ಅಲ್ಲಿಗೆ ಹೋಗಿಬರು ವುದರಿಂದಲೂ ವ್ಯತ್ಯಾಂತಪತ್ರಿಕೆಗಳಿ೦ದ ೧ ಎಲ್ಲಾ ನರ್ತಮಾನಗಳನ್ನೂ ನವನಾಗರಿಕತೆಯ ಸಂಗತಿಗಳನ್ನೂ ಹೊಸಹೊಸ ಉಡುಗೆತೊಡಗೆಗಳ ತರ ಹೆಯನ್ನೂ ತಿಳಿದುಕೊಳ್ಳುವೆನು. .ಪ್ರಿಯ;-ನಿಮ್ಮ ಸಂಗತಿಗಳೆಲ್ಲಾ ಆಶ್ಚರ ಕರವಾದುವುಗಳಾಗಿವೆ! ನಿಮ್ಮ ಉಡುಪನ್ನು ಮಾಡಿದವರಾರು? ಅವುಗಳನ್ನು ಪಟ್ಟಣಗಳಿಂದ ತರಿಸಿದಿರೇನು? - ಚಂಡಿ:-ಇಲ್ಲ; ಇಲ್ಲ, ಎಲ್ಲವನ್ನೂ ಪತ್ರಿಕೆಗಳಲ್ಲಿ ಓದಿ ಕಲಿತು ನಾನೇ ಮಾಡಿಕೊಳ್ಳುತ್ತೇನೆ. ಪ್ರಿಯ:-ನಿನ್ನ ಬುದ್ದಿ ಕುಶಲತೆಯನ್ನೂ ನಾಜೂಕನ್ನೂ ಎಷ್ಟು ಹೊಗಳಿದರೂ ಸಾಲದು.

  • ಬ ?'