ಪುಟ:ನಿರ್ಮಲೆ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲ ತೆಗೆದುಕೊಂಡುಬಾ, ಈ ರಗಳೆಯು ನನಗೆ ಸಾಕು. ದೇವ:-ಸ್ವಾಮಿ, ಈ, (ಯಾವುದೋ ಜ್ಞಾನದಲ್ಲಿ) ಇಗೊ, ಈ ಪುಸ್ತಕ ಭಾಂಡಾಗಾರ, ಇದರಲ್ಲಿರುವ, ನಾನು ಪದೇಪದೇ ಉಪಯೋಗಿಸುವ, ಈ ಪಾಕಶಾಸ್ತ್ರವು ನಿಮ್ಮದಲ್ಲವಷ್ಟೆ ? ಆ ಕಲಾಶಾಸ್ತ್ರ ಪುಸ್ತ... ರಾಮ:-'ಬಿಲ್, ಬಿಲ್' ತೆಗೆದುಕೊಂಡು ಬಾ. ದೇವ:-ಹಾ ! ಏನು ? ರಾಮ: ನಿನ್ನ ಮನೆ ಹಾಳಾಗಲಿ ! ಈಗಲೇ ಬಿಟ್ಟು ... ದೇವ-ಅದೊ, ಅಲ್ಲೊಂದು ಕರೀಮರದ ಮೇಜವಿದೆ, ಅದರಲ್ಲಿ ಕನ್ನಡಿಯೂ ಇದೆ, ಅದರಲ್ಲಿ ಮುಖವು. .. ರಾಮ: 'ಬಿಲ್' ತಾ ಹೊತ್ತಾಯಿತು. ದೇವ:- ಓಹೋ ! ಮರೆತಿದ್ದೆ, ಊಟವಾದ ಅನಂತರ ವಿಶ್ರಮಿಸಿ ಕೊಳ್ಳಲು ಅಲ್ಲಿ ಹಾಕಿರುವ ಆರಾಮ ಕುರ್ಚಿಯೂ ತಮ್ಮದೊ ?

ರಾಮ:- ಅಯ್ಯೋ ಗೋಳೆ ! ಬಿಲ್‌ ಕಾ, ಲೆಕ್ಕವನ್ನು ವ್ಯವಸ್ಥೆ ಮಾಡಿ ನಿನ್ನ ಪಂಚಾಯಿತಿಯನ್ನು ಕೊನೆಮುಟ್ಟಿ ಸುವೆನು.

ದೇವ:- ಎಲಾ ಹುಡುಗ, ಪೋಕರಿ, ನಿಮ್ಮಪ್ಪ ವಿಜಯಪಾಲನ ಕಾಗದವನ್ನು ನೋಡಿ ನೀನೊಳ್ಳೆಯ ವಿನಯಸಂಪನ್ನ ನಂದು ನಂಬಿದ್ದೆನು. ಈಗ ನೋಡಿದರೆ ನಿನ್ನಂತಹ ಅಯೋಗ್ಯನ ಪಟಿಂಗನೂ ಪೋಕರಿಯ ಅವಿವೇಕಿಯ ಮತ್ತಾವವೂ ಇಲ್ಲ ವೆಂಬುದು ವ್ಯಕ್ತವಾಯಿತು. ಅವನೂ ಈಗಲೇ ಬರಬಹುದು, ಅವನಿಗೆ ಇದೆಲ್ಲವೂ ತಿಳಿಯಲಿ, ನಾನು ಈಗ ಹೋಗುವೆನು. ( ಹೊರಟುಹೋಗುವನು.) ರಾಮ;-(ಸ್ವಗತ) ಇದೇನು ? -ನಾನು ಈ ಮನೆಯನ್ನು ಭ್ರಮಿಸಿ, ತಪ್ಪಾಗಿ ತಿಳಿದುಕೊಂಡಿರುವೆನೆ ? ಪ್ರತಿಯೊಂದು ವಿಷಯವನ್ನು ನೋಡಿದರೂ ಇದು ಭೋಜನಶಾಲೆಯಂತೆಯೇ ಕಾಣುವುದು, ಸೇವಕರು ಗೋಳಿಡುತ್ತ ಬರುವರು, ನಮ್ಮ ಯೋಗಕ್ಷೇಮವನ್ನು ಸರಿಯಾಗಿ ನೋಡಿ