ಪುಟ:ನಿರ್ಮಲೆ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಲೆ ನಿರ್ಮಲೆ ನಿನ್ನ ಮಿತ್ರ, ಪ್ರಿಯಸೇನ, ” (ಶೋಕಾಗ್ರಹಗಳನ್ನು ತೋರ್ಪಡಿಸುತ್ತ) ಅಯ್ಯೋ, ಇದೇನು? ನಾನು ಶಾಂತಳಾಗಿರುವುದು ಹೇಗೆ? ಎಲಾ ಮಡಯ, ನೆಟ್ಟಗೆ ನಾಲ್ಕು ಮಾತನಾಡಲು ಬಾರದ, ಯುಕ್ತಾಯುಕ್ತಜ್ಞಾನವಿಲ್ಲದ ನೀನು ನನ್ನನ್ನು ಪ್ರತಿಭಟಿಸಿ ಕಾಕ್ಯಗಳನ್ನು ನಡೆಯಿಸುವಿಯಾ ? ಒಳ್ಳೆಯದು; ಇರಲಿ, ನಿಮಗೆಲ್ಲಾ ತಕ್ಕ ಪ್ರಾಯಶ್ಚಿತ್ರವನ್ನು ಮಾಡುವೆನು. ಜಾಣೆ ! ಕುದುರೆ ಗಾಡಿಗಳು ಸಿದ್ಧವಾಗಿರಬೇಕಲ್ಲವೆ ? ಅಯ್ಯೋ ಪಾಪ ! ಅವಕ್ಕೇಕೆ ಆಶಾಭಂಗವನ್ನು ೦ಟು ಮಾಡಬೇಕು, ನಿನ್ನ ಪ್ರಣಯಿಯ ಸಂಗಡ ಹೋಗು ವುದಕ್ಕೆ ಪ್ರತಿಯಾಗಿ ನನ್ನೊಡನೆ ನನ್ನ ತಂಗಿಯ ಮನೆಗೆ ಹೊರಡು, ಅವೇ ಕುದುರೆಗಾಡಿಗಳು ಹೊರಡಲಿ, ಅಲ್ಲಿ ನೀನು ಸುರಕ್ಷಿತವಾಗಿರಬಹುದು, ಎಲ್ಲಾ ದುರ್ಮತಿ, ನೀನು ಕುದುರೆಯನ್ನೆ ರು. ನಮ್ಮ ಕಾವಲಿಗಾಗಿ ಜತೆಯಲ್ಲಿ ಬಾ, ಎಲಾ ಚಂಡಗು, ರಕ್ತಾಕ್ಷ, ಸೋಮಾರಿ ಸಿದ್ದ, ಎಲ್ಲಿ? ಉಳಿದವ ರೆಲ್ಲಿ ? ಎಲ್ಲರೂ ಬನ್ನಿ , ಹೂ ! ಹೂ !! ನಿಮಗೆ ಯಾವ ಮಾರ್ಗವು ಒಳ್ಳೆ ಯದೆಂಬುದನ್ನು ಈಗ ಕಲಿಸಿಕೊಡುವೆನು. (ಹೊರಡುವಳು) ಕಮ:-(ಸ್ವಗತ೦) ಈಗಲೀಗ ನಾನು ಸಂಪೂರ್ಣವಾಗಿಯ ಹಾಳಾದೆನು, ದುರ್ಮತಿ, ಪ್ರಮಾದಮಾಡಿದಿಯಲ್ಲೋ? ದುರ್ಮ:ಸಂದೇಹವೇನು ? ಸಂಪೂರ್ಣವಾಗಿಯ....... ಕಮಲೆ:- ನಿನ್ನಂತಹ ಮುಠಾಳರ ಸಹವಾಸದಿಂದ ಇದೇ ಫಲವು ದೊರೆಯುವುದು, ಎಷ್ಟು ಸಾರಿ, ಕಣ್ಣು, ಕೈ, ಹುಬ್ಬುಗಳಿಂದ ಸಂಜ್ಞೆ ಮಾಡಿ ತೋರಿದರೂ ನಿನಗೆ ತಿಳಿಯದೇ ಹೋಯಿತೆ ? ನಿನಗೆ ಸುಳು ಸೂಕ್ಷ್ಮ ಜ್ಞಾ ನವು ಇಲ್ಲ. ದುರ್ಮ:-ನೀನು ಹಾಳಾದುದು ನನ್ನ ಮುಠಾಳತನದಿಂದಲ್ಲ, ನಿನ್ನ ಕೆಲಸಕ್ಕೆ ಬಾರದ ಜಾಣ್ನೆಯಿಂದಲೇ ! ನೀನೇಕೆ ಮಹಾಕುಶಲತೆಯನ್ನು ತೋರಿಸುವಳಂತೆ ಆನಂದಮಂದಿರ, ಗುಗ್ಗಾಣಿ, ಕುಸ್ತಿ, ಕೋಳಿಯ ಕಾಳಗ ಗಳ ಸುದ್ದಿಯನ್ನು ಹೇಳುತ ಬಂದೆ ? ನಾನು ಅದೆಲ್ಲವೂ ನಿಜವೆಂದೇ ನಂಬಿ