ಪುಟ:ನಿರ್ಮಲೆ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ ನಿರ್ಮಲೆ ಹೋಗಿ ಅವನನ್ನು ಕಾದಿರುವೆನು, ಅವನು ಹೇಳಿದ ಕಾಲವು ಕಳೆಯಿತು. (ಹೊರಡುವರು) [ವಿಜಯಪಾಲನೂ ದೇವದತ್ತನೂ ಪ್ರವೇಶಿಸುವರು.] ದೇವ:--- ಹಾ! ಹಾ! ಅವನು ತನ್ನ ಮಹದಾಜ್ಞೆಗಳನ್ನಿತ್ತ ಖಂಡಿತದ ರೀತಿಯನ್ನು ಏನೆಂದು ಹೇಳಲಿ ? ಹಾ ! ಹಾ ! ವಿಜಯ:-- ನೀನು ಮುಂದುವರಿದು ಮಾತನಾಡಲು ಅವನು ಅವ ಕಾಶವನ್ನೇ ಕೊಡಲಿಲ್ಲ ವೊ? ಗುಂಪುಸೇರಿದಲ್ಲಿಯೇ ತನ್ನ ವಿಚಿತ್ರ ಸ್ವಭಾವವನ್ನು ವ್ಯಕ್ತಪಡಿಸಿದನೇನೋ ? ದೇವ:- ನನ್ನ ನ್ನು ನೋಡಿದ ಕೂಡಲೆ ಸಾಧಾರಣ ಭೋಜನಶಾಲಾ ಧ್ಯಕ್ಷನೆಂದು ತಿಳಿದುಕೊಂಡನಂತಿ, ನನ್ನ ನ್ನು ನೋಡಿದರೆ ಹಾಗೆ ಕಾಣುವೆನೆ ? ವಿಜ:--ಇಲ್ಲ, ಅವನು ನಿನ್ನ ನ್ನು ಭೋಜನಶಾಲಾಧ್ಯಕ್ಷನೆಂದು ತಪ್ಪುಮಾಡಬಹುದೇ ? ದೇವ:ಪಾಪ, ಅದೂ ನನಗೆ ಸಂತೋಷ, ನಮ್ಮಿಬ್ಬರಮನೆಗೂ ಬಾಂಧವ್ಯವು ನಡೆದು ಇಬ್ಬರ ಸ್ನೇಹವೂ ಮತ್ತಷ್ಟು ಹೆಚ್ಚು ವುದೆಂದು ನನ್ನ ನಂಬಿಕೆ, ನನ್ನ ಪುತ್ರಿಯಾದ ನಿಮ್ಮಲೆಯ ಆಸ್ತಿಯು ಅಲ್ಪವಾದರೂ.... - ವಿಜ:-ಆಸ್ತಿಯು ಯಾರಿಗೆಬೇಕಾಗಿದೆ ? ಆ ಮಾತನ್ನು ನನ್ನೊಡನೆ ಹೇಳುವಿಯೇಕೆ ? ದೇವರು ನನ್ನ ಮಗನಿಗೆ ಸಮೃದ್ಧಿಯಾದ ಆಸ್ತಿಯನ್ನೂ ವಿದ್ಯೆಯನ್ನೂ ಕೊಟ್ಟಿರುವನು. ಅವನ ಸುಖಸಾಮ್ರಾಜ್ಯದ ಎಲ್ಲೆಯನ್ನು ಸೇರಲು, ಗುಣವತಿಯ ಸುಕುಮಾರಿಯೂ ಆದ ಕನೈಯೊಬ್ಬಳು ಮಾತ್ರ ಆವಶ್ಯಕವಾಗಿದೆ. ನೀನು ಹೇಳುವಂತೆ ಅವರಿಗೆ ಪರಸ್ಪರ ಪ್ರೀತಿವಿಶ್ವಾಸ ಗಳಿದ್ದರೆ... ..... ..... ದೇವ:-ಇದ್ದಗೆ !! ನನ್ನ ಮಾತನ್ನು ನಂಬು, ಅವರು ಪ್ರಣಯ “ಸಾಗರದಲ್ಲಿ ಮುಳುಗಿ ತೇಲಾಡುತ್ತಿರುವರು, ನಿಮ್ಮಲೆಯು ನನ್ನೊಡನೆ ಅಂತ ರಂಗದಲ್ಲಿ ಹೇಳಿದುದಕ್ಕೆ ಇದೇ ಅರ್ಥವು.