ಪುಟ:Abhaya.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸರಸಮ್ಮ ಒಂದು ನಿಮಿಷ ಯೋಚಿಸಿದರು:ಜ್ವರಪೀಡಿತಳಾದ ಜಲ

ಜಳ ಸಾಮೀಪ್ಯ ಒಂದೆಡೆ,ಮಂಚದ ಎತ್ತರ ಇನ್ನೊಂದೆಡೆ. ಆ ಗರ್ಭಿಣಿ ಎಲ್ಲಿ ಮಲಗಬೇಕು?

ತಾವೇ ಇತ್ಯರ್ಥ ಮಾಡಲಾರದವರಂತೆ ಅವರು ಕೇಳಿದರು:

"ಎಲ್ಲಿ ಮಲಕ್ಕೋತಿಯಾ ತುಂಗಮ್ಮ?"

ಮತ್ತೆ ಆ ಹಾಸಿಗೆಯ ಮೇಲೇಯೇ ಒರಗಿಕೊಳ್ಳಬೇಕೆಂದು ಯೋಚಿಸು

ತಿದ್ದ ತುಂಗಮ್ಮ,"ಹೂಂ?"ಎಂದಳು.

"ನನ್ನ ಪಕ್ಕದಲ್ಲೇ ಇರಲಿ ದೊಡ್ಡಮ್ಮ...."

ಛಲ ಹಿಡಿದು ಮಾತನಾಡುವ ಮಗುವಿನ ವೈಖರಿ ತಮ್ಮ ಸಮಸ್ಯೆ

ಬಗೆಹರಿಯಿತೆಂಬಂತೆ ಸರಸಮ್ಮ ನಕ್ಕರು.ತುಂಗಮ್ಮನೂ ಸಣ್ಣೆನೆ ನಕ್ಕಳು.

ಅಕೆ ಮೆಲ್ಲನೆದ್ದು, ಆ ಹಾಸಿಗೆಯ ಬಳಿಗೆ ನಡೆದು ಹೋಗಿ,ಅದರ

ಮೇಲೆ ಕುಳಿತುಕೊಂಡಳು.

ಅಕೆಗೆದುರಾಗಿ ಸರಸಮ್ಮ ಜಲಜಳ ಹಾಸಿಗೆಯ ಮೇಲೆಯೇ ಜಾಗ

ಮಾಡಿ ಕುಳಿತರು, ಆ ತೀಕ್ಶ್ಣ ದೃಷ್ಟಿ ತನನ್ನು ಇರಿದು ಪರೀಕ ಸುತ್ತಿದೆಯೋ ಏನೋ ಎಂದು ಅಂಜುತ್ತ ತುಂಗಮ್ಮ ಅವರನ್ನು ನೋಡಿದಳು. ಹಾಗೇನೂ ಇರಲ್ಲಿಲ ಆ ದೃಷ್ಟಿ ಶಾಂತವಾಗಿಯೇ ಇತ್ತು. ಮೊದಲ ಬಾರಿ ಆ ಕೊಠಡಿಯಲ್ಲಿ ತಾನು ಕಣ್ಣು ತೆರೆದಾಗ ಇದ್ದಂತೆಯೇ.

ಸರಸಮ್ಮ , ಉದ್ದೇಶಪೂರ್ವಕವಾಗಿಯೇ ದೃಷ್ಟಿಯನ್ನು ಬದಲಿಸಿ

ಜಲಜಳನ್ನು ನೋಡಿದರು ತಮ್ಮ ಅಂಗೈಯಿಂದ ಆಕೆಯ ಹಣೆಯನ್ನು ಮುಟ್ಟದರು. ಮೈ ಬಿಸಿಯಾಗಿರಲಿಲ್ಲ.

"ಇಳಿದೋಗಿದೆಲ್ಲೇ ಜ್ವರ."

"ಹೂಂ ದೊಡ್ಡಮ್ಮ.ನೀವು ಪಡೋ ಕಷ್ಟ ನೋಡಿ ಅಯ್ಯೋ

ಪಾಪ-ಅನಿಸ್ತೇನೋ ಆ ಜ್ವರಕ್ಕೆ!"

"ಅಲ್ವೆ!"

ಅವರ ದೃಷ್ಟಿ ಮಂಚದ ಕೆಳಗಿದ್ದ ಔಷಧಿ ಶೀಷೆಯತ್ತ ಹೋಯಿತು.ಆ ಶೀಷೆಯಲ್ಲಿದ್ದು,ರಾತ್ರೆಯ ಒಂದೇ ಗುಟುಕು-ಕೆಂಪು ಔಷಧಿ,