ಪುಟ:ಕಥಾಸಂಗ್ರಹ ಸಂಪುಟ ೨.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾಪಹಾರದ ಕಥೆ 61 2) ಎಂಬಂತೆ ನಿಶ್ಯಬ್ದ ವಾಗಿರುವುವು. ಕಾಗೆಗಳೆಲ್ಲಾ ಗೂಡುಗಳಲ್ಲಿರುವ ತಮ್ಮ ಮೊನ್ನೆ ಗ ಳೊಡನೆ ಸೇರಿದ ಕೋಗಿಲೆಗಳ ಮೊಟ್ಟೆಗಳನ್ನೂ ತಮ್ಮ ಮೊಟ್ಟೆ ಗಳೇ ಎಂದು ಭಾವಿಸಿ ಕಾವಿಗೋಸ್ಕರ ಅವುಗಳ ಮೇಲೆ ಕುಳಿತು ಪ್ರೀತಿಯಿಂದ ಮರಿಮಾಡುತ್ತಿರುವವ. ಬಡವರ ಮನೆಗಳ ಗೋಡೆಗಳಲ್ಲಿರುವ ತಿಗಣೆಗಳು ತಾವು ಮೊದಲು ಮನುಷ್ಯರ ಮೈಗಳನ್ನು ಕಚ್ಚಿ ರಕ್ತವನ್ನು ಹೀರುತ್ತಿದ್ದಂಥ ದುಗ್ಧಭಾವವನ್ನು ಬಿಟ್ಟು ಪರಹಿಂಸೆ ಯನ್ನು ಮಾಡದೆ ಮೊದಲ್ಯಾಡಿದ ಪಾಪಪರಿಹಾರಾರ್ಥವಾಗಿ ಸಜ್ಜನರಂತೆ ಉಪವಾಸ ವ್ರತವನ್ನು ಮಾಡುತ್ತಿರುವುವೋ ಎಂಬಂತೆ ಕೃಶವಾಗಿ ಗೋಡೆಗಳಲ್ಲಿ ಹತ್ತಿಕೊಂಡಿರು ವುವು. ಸೂರ್ಯನು ಚಂದ್ರನಂತಿರುವನು, ಬಿಸಿಲು ಬೆಳದಿಂಗಳಂತಾಯಿತು. ಮಧ್ಯಾ ಹೃ ಕಾಲವು ಸಂಚಾರ ಮಾಡುವವರಿಗೆ ಹರ್ಷಕರವಾಗಿರುವುದು. ರಾತ್ರಿಯಲ್ಲಿ ಚಂದ್ರನು ಹಿಮದಿಂದ ಅಚ್ಛಾದಿಸಲ್ಪಟ್ಟ ವನಾಗಿ ಪ್ರಕಾಶರಹಿತನಾಗಿರುವನು. ಪಡುವ ಣದಿಕ್ಕಿನಿಂದ ನುಗ್ಗಿ ಬರುವ' ಶೀತವಾತವು ಹಿಮದೈತ್ಯನ ವಾಹನದಂತಿರುವುದು. ಭೂಮಿಯು ಎಲ್ಲಿ ನೋಡಿದರೂ ಯವೆ ಗೋಧಿ ಮೊದಲಾದ ಧಾನ್ಯಗಳ ಸಸ್ಯಗಳಿಂದ ಕೂಡಿ ಪ್ರಕಾಶಿಸುತ್ತಿರುವುದು. ಚಾಡಿಮಾತನ್ನು ಕೇಳುವ ದೊರೆಯ ಐಶ್ವರ್ಯ ದಂತೆಯ ಸತ್ಪುರುಷರ ಬಡತನದಂತೆಯ ಹಿಮಂತರ್ತುವಿನ ಹಗಲುಗಳು ಬೇಗ ಮುಗಿದುಹೋಗುತ್ತಿರುವುವು. ಅರಸುಗಳು ಹಗೆಗಳನ್ನು ಜಯಿಸುವುದಕ್ಕಾಗಿ ದಂಡೆತ್ತಿ ಪರಮಂಡಲಗಳಿಗೆ ಹೋಗುತ್ತಿರುವರು. ಕಾಡುಗಳಲ್ಲಿ ಆನೆಗಳು ಹಿಮದಿಂದ ಬಲು ತಣ್ಣಾದ ನೀರುಗಳನ್ನು ಕುಡಿಯಲಂಜಿ ತಮ್ಮ ತಮ್ಮ ಸೊಂಡಿಲುಗಳನ್ನು ಬಾಯಿಯ ಲ್ಲಿಟ್ಟುಕೊಂಡು ಬಾಯಾರಿಕೆಯಿಂದ ಕಂಗೆಡುತ್ತಿರುವುವು. ಚಿಗುರು ಹೂವುಗಳಿಲ್ಲದಿ ರುವುದರಿಂದ ವನಪಂಕ್ತಿಗಳೆಲ್ಲಾ ಮಲಗಿ ಕಣ್ಮುಚ್ಚಿ ನಿದ್ದೆ ಹೋಗುತ್ತಿವೆಯೋ ಎಂಬ ಹಾಗೆ ಕಾಣುತ್ತಿರುವುವು ಎಂದು ಹೇಳಿದನು. ಆಗ ಶ್ರೀರಾಮನು ತಮ್ಮನ ಮಾತು ಗಳನ್ನು ಕೇಳಿ ನಿಶ್ಚಯವೆಂದು ಸಂತೋಷಿಸಿ ತಾನು ಅಂಥ ಹಿಮ ಕಾಲದಲ್ಲೂ ಗೋದಾ ವರಿಯಲ್ಲಿ ಮಿಂದು ಮಡಿಯುಟ್ಟು ನಿತ್ಯಕರ್ಮಗಳನ್ನು ನೆರವೇರಿಸುತ್ಯ ಮುನಿಗಳಂತೆ ಕೃಷ್ಣಾಜಿನಗಳನ್ನು ಹಾಸಿ ಹೊದೆದು ಕೊಂಡು ಕಂದ ಮಲಾದಿಗಳನ್ನು ತಿಂದು ಜೀವಿಸಿಕೊಂಡು ಕಷ್ಟ ಪಡುತ್ತಿದ್ದನು. ಹೀಗಿರುವಲ್ಲಿ ಮೊದಲು ಲಂಕಾಪಟ್ಟಣದಿಂದ ಬಂದು ಆ ಪಂಚವಟಿಯ ಸಮೀಪದಲ್ಲಿರುವ ಜನಸ್ಥಾನದಲ್ಲಿ ತನ್ನ ಅಣ್ಣನಾದ ಖರನೊಡನೆ ವಾಸಮಾಡಿ ಕೊಂಡಿದ್ದ ರಾವಣನ ತಂಗಿಯಾದ ಶೂರ್ಪನಖಿಯು ಆಹಾರಾರ್ಥವಾಗಿ ಕಾಡಿನಲ್ಲಿ ಸಂಚರಿಸುತ್ತ ಒಂದಾನೊಂದು ದಿನ ಪಂಚವಟಿಗೆ ಬಂದು ಸುಂದರಾಂಗನಾದ ರಾಮ ನನ್ನು ನೋಡಿ ಮೋಹಿತಳಾಗಿ ಕಾಮರೂಪಿಣಿಯಾದುದರಿಂದ ಕೂಡಲೇ ಚೆಲುವೆಯಾದ ಹೆಣ್ಣಿನ ಆಕಾರದಂತಿರುವ ಆಕಾರವನ್ನು ಧರಿಸಿ ಕಡೆಗಣ್ಣಳ ನೋಟದಿಂದ ದಿಕ್ಕುಗ ಳನ್ನು ಬೆಳಗಿಸುತ್ತ ಮದಗಜದಂತೆ ಮಂದಗತಿಯಿಂದ ನಡೆಯುತ್ತ ರಾಮನಿರುವ ಸರ್ಣ ಶಾಲೆಯ ಬಾಗಿಲೆಡೆಗೆ ಬಂದು ನಿಂತು ಮುಗುಳ್ಳಗೆಯಿ೦ದ ಕೂಡಿದವಳಾಗಿ ಸುಂದರಪುರುಷನೇ ! ನೀನು ಯಾರು ? ನಿನ್ನ ಬಳಿಯಲ್ಲಿರುವ ಈ ಹೆಂಗಸು ಯಾರು ?