ಪುಟ:ಕಥಾಸಂಗ್ರಹ ಸಂಪುಟ ೨.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 57. ಕೇಳಲು ಆಗ ದಶರಥನು-ಎಲೈ ರಾಮನೇ ! ನಾನು ಈ ಕೈಕೇಯಿಯೆಂಬ ಮಹಾ ಮೃತ್ಯುವಿಗೆ ವರದ್ವಯವನ್ನು ಕೊಟ್ಟು ಹುಚ್ಚನಾದೆನು. ಅದು ಕಾರಣ ನೀನೇ ನನ್ನನ್ನು ನಿಗ್ರಹಿಸಿ ಅರಸುತನವನ್ನು ಮಾಡುತ್ತ ಅಯೋಧ್ಯೆಯಲ್ಲಿ ಸುಖದಲ್ಲಿರು ಎಂದು ಹೇಳಲು ಅದಕ್ಕೆ ರಾಮನು-ಎಲೆ ತಂದೆಯೇ ! ನೀನೇ 'ಸಾವಿರಾರು ಸಂವತ್ಸರಗಳ ವರೆಗೂ ಭೂಮಿಗೆ ಒಡೆಯನಾಗಿರು. ನಾನು ಅರಣ್ಯದಲ್ಲೇ ವಾಸಿಸುವೆನು. ನಿನ್ನನ್ನು ಅಸತ್ಯ ವಂತನನ್ನಾಗಿ ಮಾಡಿ ನಾನು ಈ ರಾಜ್ಯವನ್ನು ಅನುಭವಿಸುವುದು ಲಜ್ಜೆಗೂ ಅಪಮಾ ನಕ್ಕೂ ಕಾರಣವಾಗಿರುವುದು. ಆದುದರಿಂದ ಹದಿನಾಲ್ಕು ಸಂವತ್ಸರಗಳ ವರೆಗೂ ವನವಾಸವನ್ನು ಮಾಡಿ ನಿನ್ನ ಪ್ರತಿಜ್ಞೆಯನ್ನು ನೆರವೇರಿಸಿ ತಿರಿಗಿ ನಿನ್ನ ಪಾದಸನ್ನಿಧಿಗೆ ಬರುವೆನು ಎಂದು ಹೇಳಿ ಒಡಂಬಡಿಸಿ ಆತನಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ ಹೊರಡುವುದಕ್ಕೆ ಉದ್ಯುಕ್ತನಾಗಲು ಆಗ ದಶರಥರಾಜನು ಸುಮಂತ್ರನನ್ನು ನೋಡಿನನ್ನ ಸೇನಾಪತಿಗಳೂ ಪರಿವಾರದವರೂ ರಾಮನ ಸಂಗಡವೇ ಹೋಗಲಿ, ಮತ್ತು ಅಡಿಗೆಯವರೂ ದಾಸಶೃತ್ಯರೂ ದಾಸೀಜನಗಳೂ ಗಾಡಿಗಳೂ ರಾಮನೊಡನೆಯೇ ಹೋಗಲಿ, ಭೋಜನ ಸಾಮಗ್ರಿಗಳ ವಸ್ತ್ರಾಭರಣಗಳ ಚತುರ್ದಶ ಸಂವತ್ಸ ರಗಳ ವರೆಗೂ ಸ್ವಲ್ಪವೂ ನ್ಯೂನತೆ ಇಲ್ಲದಂತೆ ಎಲ್ಲವನ್ನೂ ತೆಗೆಯಿಸಿಕೊಂಡು ನೀನೂ ರಾಮನ ಸಂಗಡವೇ ಹೊರಟು ಹೋಗೆನಲು ಆಗ ರಾಮನು ತಪಸ್ವಿಯಂತೆ ವನಕ್ಕೆ ಹೋಗುವ ನನಗೆ ರಾಜಭೋಗ್ಯವಾದ ಈ ವಸ್ತುಗಳಿಂದ ಸ್ವಲ್ಪ ಮಾತ್ರವಾದರೂ ಪ್ರಯೋಜನವಿಲ್ಲವು. ಅರಣ್ಯದಲ್ಲಿ ಕಂದಮಲಾದಿಗಳು ಯಥೇಚ್ಛವಾಗಿರುವವು. ನನಗೆ ನಾರುಮಡಿಗಳನ್ನು ಮಾತ್ರ ಕೊಡಿಸಬೇಕೆಂದು ಕೇಳಿಕೊಳ್ಳಲು ಆಗ ಕೈಕೇ ಯಿಯು ಅತಿ ಸಂತೋಷದಿಂದ ಎದ್ದು ಒಳಕ್ಕೆ ಹೋಗಿ ಎರಡು ನಾರ್ಮಡಿಗಳನ್ನು ತಂದು ರಾಮನ ಕೈಗೆ ಕೊಟ್ಟಳು. ಆಗ ಲಕ್ಷ್ಮಣನು ಅವುಗಳನ್ನು ತೆಗೆದುಕೊಂಡು ತಾನುಟ್ಟಿದ್ದ ಪೀತಾಂಬರವನ್ನು ತೆಗೆದಿಟ್ಟು ಆ ಮಡಿಗಳನ್ನು ಧರಿಸಿಕೊಂಡನು. ಆ ಮೇಲೆ ಕೈಕೇಯಿಯು ಮತ್ತೆರಡು ನಾರುಮಡಿಗಳನ್ನು ತಂದು ಕೊಡಲು ಸೀತೆಯು ಅವುಗಳನ್ನು ರಾಮನ ಕೈಗಳಿಂದ ತೆಗೆದು ಕೊಂಡು ಉಟ್ಟುಕೊಳ್ಳುವುದಕ್ಕೆ ಬಾರದೆ ಕೈಯಲ್ಲೇ ಹಿಡಿದುಕೊಂಡು ಕಣ್ಣೀರನ್ನು ಸುರಿಸುತ್ತ ರಾಮನ ಮುಖವನ್ನು ನೋಡಿ ಮುನಿಪತ್ನಿಯರು ನಾರು ಸೀರೆಯನ್ನು ಉಡುವುದು ಹೇಗೆ ? ಎಂದು ಕೇಳಲು ರಾಮನು ಬಂದು ಆಕೆಯು ಮೊದಲುಟ್ಟಿದ್ದ ಪೀತಾಂಬರದ ಮೇಲೆಯೇ ಆ ನಾರುಮ ಡಿಗಳನ್ನು ಸುತ್ತಿ ಕಟ್ಟಿ ದನು, ಆ ಕೂಡಲೇ ಕೈಕೇಯಿಯು ಬಹು ಸಂತೋಷದಿಂದ ಪುನಃ ಎರಡು ನಾರುಮಡಿಗಳನ್ನು ತಂದು ರಾಮನ ಹಸ್ತಗಳಿಗೆ ಕೊಟ್ಟುದರಿಂದ ರಾಮನು ಅವುಗಳನ್ನು ಉಟ್ಟುಕೊಂಡನು. ಅಲ್ಲಿ ಕೂಡಿದ್ದ ಸಮಸ್ತ ಪ್ರಜಾಸಮ ಹವೂ ಅದನ್ನೆಲ್ಲಾ ನೋಡಿ ಹೋ ! ಎಂದು ಕೂಗಿ ದುಃಖಿಸುತ್ತಿರಲು ಆಗ ವಸಿಷ್ಠ ಮಹಾಮುನಿಯು ಕೈಕೇಯಿಯ ಮೇಲೆ ಕೋಪಿಸಿಕೊಂಡು ನೀನು ರಾಮನೂ ಬೃನು ಮಾತ್ರ ವನವಾಸಕ್ಕೆ ಹೋಗಬೇಕೆಂದು ಕೇಳಿಕೊಂಡೆಯಷ್ಟೆ ? ಸೀತೆಯು ಪತಿ ಭಕ್ತಿಯಿಂದ ಆತನ ಸಂಗಡವೇ ಹೋಗುವವಳಾಗಿದ್ದಾಳೆ. ಆಕೆಯು ನಾರುಮಡಿಗ