ಪುಟ:ಕುರುಕ್ಷೇತ್ರ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ಲೇಪಥಿನಿ ಪರಾ:- ಈ ಗ್ರಾಮದಲ್ಲಿ ಮಲ್ಲಪ್ಪನಿಗೆ ೫೦ ರೂಪಾಯಿನ Vನೇ ನಂಬರು ಖಾತೆ ಇದೆ, ಇವನಿಗೆ ಖಾನೇಷುಮಾರಿ ಲೆಕ್ಕದ ಪ್ರಕಾರ ಇರುವ ಅಹವಾಲು: ಗಂಡು ೪, ಹೆಣ್ಣು ೩. ದನ ೧೫, ಕುರಿ ೦೬ ನೇಗಲು ೪, ಬಂಡಿ, ಅವನು ನಮಗೆ ತಿಳಿದಮಟ್ಟಿಗೆ ಮಾಫಿಯಾಗಿಯಾಗಲಿ ರಿಯಾಯ ತು ದರಗಳ ಮೇಲಾಗಲಿ ಇದುವರೆಗೆ ಯಾವ ಮರದ ಸಾಮಾನನ್ನೂ ಪಡೆದಿರುವುದಿಲ್ಲ. ಕಾನಭೋಗ ರಂಗಪ್ಪನ ರುಡ್, ಪಟೇಲ ರಾಮಪ್ಪನ ರುಜ್ ಬಂಕಾಪುರದ ತಾಲ್ಲೂಕು ಮಾಮ್ಮೆದಾರರವರ ಸನ್ನಿಧಾನಕ್ಕೆ. ಲಿಂಗೇಗೌಡನ ಅರ್ಜಿ ಸ್ವಾಮಿಯವರ ಸವಾರಿಯು ನಮ್ಮ ಗ್ರಾಮಕ್ಕೆ ಹಯಮಾಡಿ ದ್ದಾಗ ಊರು ಮುಂದೆ ತಿಪ್ಪೆಗಳನ್ನು ಹಾಕಿಕೊಂಡಿರುವುದರಿಂದ ದಾರಿ ಯಲ್ಲಿ ಹೋಗುವವರಿಗೂ ಸುತ್ತುಮುತ್ತೂ ಇರುವ ಮನೆಗಳಿಗೂ ಈ ಗಲೀಜಿನಿಂದ ಬಹಳ ತೊಂದರೆಯುಂಟಾಗಿದೆ ಎಂದು ನಾವೆಲ್ಲಾ ಹೇಳಿ ಕೊಂಡುದಕ್ಕೆ ಊರ ಹೊರಗೆ ಗೊಬ್ಬರವನ್ನು ಹಾಕಿಕೊಳ್ಳುವುದಕ್ಕೆ ತಕ್ಕ ಜಮಾನನ್ನು ಕೊಡಿಸುವುದಾಗಿ ಅಪ್ಪಣೆಯಾಯಿತು. ಈ ಗ್ರಾಮದ ಮಲ್ಲಾರಿ ಬಿನೆ ಗೌಡಪ್ಪನ ಜಮಾನಿಗೆ ಬಡಗ ದಿಕ್ಕಿ ನಲ್ಲಿರುವ ಸರ್ವೆ ೪೫ನೇ ನಂಬರು ಜವಿಾನು ಸರ್ಕಾರೀ ಪಡಾವ (ಖಂಜರಿ) ಆಗಿದೆ. ಇದು ಬಹಳ ಕಲ್ಲುಗಳುಳ್ಳ ಜಮಿಾನಾಗಿರುವುದ ರಿಂದ ಸಾಗುವಳಿ ಕೆಲಸಕ್ಕೆ ಬರುವಹಾಗಿಲ್ಲ, ಇದನ್ನು ದಯವಿಟ್ಟು ಬಿಡಿಸಿಕೊಟ್ಟರೆ, ಅಲ್ಲಿ ಗ್ರಾಮದವರೆಲ್ಲರೂ ಗೊಬ್ಬರವನ್ನು ಹಾಕಿಕೊಳ್ಳು ವುದಕ್ಕೆ ಬಹಳ ಅನುಕೂಲವಾಗಿರುತ್ತದೆ.