ಪುಟ:ಕುರುಕ್ಷೇತ್ರ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಬೀಬೋಧಿನಿ ೧ ೧ ೪ ಉಪಕಾರವನ್ನು ಸ್ಮರಿಸುವ ಕಾಗದ. ಶ್ರೀಮದಖಂಡಿತಲ...... ನಮ್ಮ ಕೃಷ್ಣ ಶೆಟ್ಟಿರವರ ಸನ್ನಿಧಾನಕ್ಕೆ. ತಮ್ಮ ಕೃತಜ್ಞನಾದ ಸೇವಕ ಬಸಪ್ಪಶೆಟ್ಟಿಯು ಮಾಡುವ ಶರ ಣಾರ್ತಿ ಅದಾಗಿ, ಈ ವಿಜಯಸಂವತ್ಸರದ ವೈಶಾಖ ಶು| ೫ಯವರೆಗೆ ತಮ್ಮ ವಿಶ್ವಾ ಸದಬಲದಿಂದ ನಾನು ಕ್ಷೇಮವಾಗಿದೇನೆ. ಸಾಂಪ್ರತ. ತಾವು ಈ ಸಲ ನನಿಗೆ ಬಂದ ಕಮ್ಮಕಾಲದಲ್ಲಿ ನನ್ನ ಕಡೆ ನಿಂತು ಮಾಡಿದ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ. ಬಂಧುಗಳು ಇರು ಎಲ್ಲರೂ ನಾವು ಒಳ್ಳಸ್ಥಿತಿಯಲ್ಲಿರುವ ವರೆಗೂ ನಮ್ಮ ಕಡೆಯ ವರಾಗಿರುತ್ತಾರೆ, ಅನೇಕ ಸಾರಿ ನನ್ನಿಂದ ಉಪಕಾರವನ್ನು ಹೊಂದಿರುವ ಅನೇಕರು ನನಗೆ ಸಹಾಯಮಾಡುವುದಕ್ಕೆ ಹಿಂತೆಗೆದರು, ಈ ಲೋಕ ದಲ್ಲಿ ಹಣವೆಂಬುವುದು ಎಷ್ಟು ಕೆಟ್ಟದ್ದೊ ! ಅದಕ್ಕೋಸ್ಕರ ಒಳ್ಳೆಯವ ರೆಲ್ಲರೂ ಕಟ್ಟವರಾಗಬೇಕಾಗುತ್ತದೆ. ಅಪೂರ್ವವಾಗಿ ತಮ್ಮಂತಾ ಮ ಹಾನುಭಾವರು ಯಾರಾದರು ಇದ್ದರೆ, ಹಣವನ್ನು ಅಕ್ಷಮಾಡದೆ ಸ್ನೇಹಿತರಿಗೆ ಉಪಕಾರವನ್ನು ಮಾಡುವರು, ತಾವು ನನಗೆ ಅತ್ಪಾದ ರದಿಂದ ಸಾಲವನ್ನು ಕೊಡೋಣವಾಯಿತು. ದೈವಾನುಗ್ರಹದಿಂದಲೂ, ತಮ್ಮ ಔದಾರ್ಯಗುಣದ ಪ್ರಭಾವದಿಂದಲೂ ನನ್ನ ವ್ಯಾಪಾರದಲ್ಲಿ ವಿಶೇ ಪವಾಗಿ ಲಾಭಬಂದುದರಿಂದ ತಮ್ಮ ೧೦,000 ರೂಪಾಯಿಯನ್ನು ಬಡ್ಡಿ ಯ ಸಹಿತವಾಗಿ ಕೊಡುವಂತೆ ಈ ದಿವಸ ಸಾಹುಕಾರರು ಬೊಮ್ಮ ಣ್ಣನವರ ಹೆಸರಿಗೆ ಹುಂಡಿಯನ್ನು ಬರೆದು ಅದರೊಡನೆ ಕಳುಹಿಸಿದೇನೆ. ತರಿಸಿದ್ದಕ್ಕೆ ಜವಾಬು ಅಪ್ಪಣೆಯಾಗಬೇಕು, ಇದರಿಂದ ತಾವು ದಯ ಮಾಡಿ ಕೊಟ್ಟಿದ್ದ ಹಣದ ಸಾಲವನ್ನು ತೀರಿಸಿಕೊಂಡರೂ, ತಮ್ಮ ವಿಶ್ವಾಸದ ನೆನಪನ್ನು ಈ ಜನ್ನವಿರುವ ವರೆಗೂ ಮರೆಯಲಾರೆನು ಇದು ತಮ್ಮ ಸದಾಕಾಲ ಕೃತಜ್ಞನಾದ, ಬಸಪ್ಪಶೆಟ್ಟಿಯ ಕರಣಾತಿ,