ಪುಟ:ಕುರುಕ್ಷೇತ್ರ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಬೋಧಿನಿ ಇದರಿಂದ ಗ್ರಾಮದ ಗಲೀಜ ದೂರಕ್ಕೆ ಹೋಗಿ ಗ್ರಾಮಸ್ಥರಿಗೆ ಆರೋಗ್ಯ ಉಂಟಾಗುವುದು, ತಾವು ಯಾವಾಗಲೂ ಪ್ರಜೆಗಳ ಕ್ಷೇಮ ಚಿಂತನೆಯನ್ನು ಮುಖ್ಯವಾಗಿ ಇಟ್ಟುಕೊಂಡಿರುವುದು ತಿಳಿದು, ಈ ಕಾರವನ್ನು ನೆರವೇರಿಸಿಕೊಡುವಿರೆಂಬ ಭರವಸೆಯಿಂದ ಇದನ್ನು ಅರಿ ಕೆಮಾಡಿ ಕೊಂಡಿದೇನೆ. ೧೫ನೇ ಮಾರ್ಚಿ, ೧೯೦೫ (ರುಜ್) ಲಿಂಗೇಗೌಡ. ಜಾನಿಗೊಸ್ಕರ ದರಖಾಸ್ತು, ಗೋಪಾಲಪುರದ ತಾಲ್ಲೂಕು ಅಮಲ್ದಾರರವರ ಕಚೇರಿಗೆ ಈ ತಾಲ್ಲಕು ರಂಗಸಮುದ್ರದ ಹೋಬಳ ದಿಬ್ಬಹಳ್ಳಿಯ ಗ್ರಾಮದ ರಾಘವಯ್ಯನ ದರಖಾಸ್ತು. ಈ ಗ್ರಾಮದಲ್ಲಿ ಈಗ ಸರ್ಕಾರೀ ಬಂಜರಾಗಿರುವ ಕೆಳಗೆ ವಿವರಿ ನಿರುವ ಜಮೀನನ್ನು ಸಾಗುವಳಿಗೆ ಪಡೆದುಕೊಳ್ಳಲು ನಾನು ಅಪೇಕ್ಷೆ ಯುಳ್ಳವನಾಗಿರುವುದರಿಂದ, ದಯವಿಟ್ಟು ಅದನ್ನು ನನಗೆ ಈ ಸಾಲು ಲಾಗಾಯಿತು ಕೊಡಿಸಿಕೊಡಬೇಕೆಂದು ಬೇಡಿಕೊಳ್ಳುತೇನೆ. ಜಮಾನಿನ ವಿವರ :-ಸರ್ವೆ ನಂಬರು ೫•, ಎಕರೆ ೧೦, ಕಂದಾ ಯ, ೧೦ ರೂ. ಇದಕ್ಕೆ ಚಕ್ಕುಬಂದಿ: ಪೂರ್ವಕ್ಕೆ ೫೩ನೇ ನಂಬರು ಹೊಲ, ಪಶ್ಚಿಮಕ್ಕೆ ೫೯ನೇ ನಂಬರು, ಉತ್ತರಕ್ಕೆ ೪ನೇ ನಂಬರು ಬಾಗಾಯಿತು, ದಕ್ಷಿಣಕ್ಕೆ ರಾಮಪುರದ ರಸ್ತೆ. ಪ್ರತಿವರ್ಷವೂ ಸರ್ಕಾರಕ್ಕೆ ನಿಬಂಧನೆಯಾಗಿರುವ ಕಂದಾಯ ಕೊಡುವುದು ಮುಂತಾದ ಮಾಮೂಲಿನ ಷರತ್ತುಗಳಿಗೆ ಬದ್ಧನಾಗಿರುವೆ ನೆಂದು ಒಪ್ಪಿ ಇದಕ್ಕೆ ರುಜ್ ಮಾಡಿದೇನೆ. ೧೫ನೇ ಜನವರಿ, ೧v೯7, (ರುಜ್) ರಾಘವಯ್ಯ.