ಪುಟ:ನಿರ್ಮಲೆ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಗುಲೆ ದೆನು, ಅದಕ್ಕಾಗಿಯೇ, ನಮ್ಮತ್ತೆಗೆ ಕಾಗದವನ್ನು ಕೊಟ್ಟು ಓದಿಸಿದೆನು. ಸನ್ನ ತಪ್ಪೇನು ? [ಪ್ರಿಯಸೇನನು ಬರುವನು.] ಪ್ರಿಯ:-ದುರ್ಮತಿ, ನೀನು ನನ್ನ ಕಾಗದವನ್ನು ನಿಮ್ಮತ್ತೆಯ ಕಯ್ಕೆ ಕೊಟ್ಟು ನಮ್ಮನ್ನು ನಿಜವಾಗಿಯೂ ಮುಳುಗಿಸಿಬಿಟ್ಟೆ, ಇದು ಸರಿಯೇ ? ಹೀಗೆ ಮಾಡಬಹುದೆ ? - ದುರ್ಮ:-ಸಾಲದುದಕ್ಕೆ ನೀನೊಬ್ಬನು ಬಂದೆಯೊ ? ಕಮಲೆ ಯನ್ನೇ ಕೇಳು, ಯಾರಿಂದ ಈ ಅನರ್ಥವು ಸಂಭವಿಸಿತೆಂಬುದನ್ನು ಅವಳನ್ನೇ ಕೇಳು. ಇದಕ್ಕೆಲ್ಲ ಅವಳ ಕುಶಲತೆಯೇ ಕಾರಣ, ನನ್ನ ತಪ್ಪು ಏನೇನೂ ಇಲ್ಲ. [ರಾಮವರ್ಮನು ಬರುವನ್ನು] - ರಾಮ: ನಿಮ್ಮೆಡೆಯಲ್ಲಿ ನಿನ್ನ ಬಾಳು' ಈಗ ಸಾರ್ಥಕವಾಯಿತು. ಎಲ್ಲರಿಂದಲೂ ತುಚ್ಛನೆನಿಸಿಕೊಂಡು, ತಿರಸ್ಕರಿಸಲ್ಪಟ್ಟು, ಅಪಮಾನವನ್ನು ಹೊಂದಿ, ಅಯ್ಯೋ! ಕೊನೆಗೆ ಹುಚ್ಚನೂ ಎಂದೆನಿಸಿಕೊಳ್ಳಬೇಕಾಯಿತು. ನನ್ನ ಬಾಳು ನಗೆಗೀಡಾಯಿತು. ದುರ್ಮ:-ಇವನೂ ಒಬ್ಬನು ಬಂದನೋ? ಹುಚ್ಚರ ಆಸ್ಪತ್ರೆ ಯನ್ನು ಜಾಗ್ರತೆಯಾಗಿ ಬರಿದುಮಾಡಬೇಕು, ಇವರೆಲ್ಲ ರೂ ಅಲ್ಲಿರಬೇಕಾ ದವರು, ಕವು:-ಇವೆಲ್ಲ ಕೂ ಮೂಲಕಾರಣರಾದ ಈ ಮಹಾಶಯರಿಗೆ ನಾವು ಕೃತಜ್ಞರಾಗಿರಬೇಕು. ರಾಮ:-ಈ ದಡ್ಡನನ್ನು ಏನುಮಾಡಬಹುದು ? ಅವಿವೇಕ, ಚಿಕ್ಕ ವಯಸ್ಸುಗಳು ಮಾತ್ರ ಅವನ ಆಧಾರವಸ್ತುಗಳಾಗಿವೆ. ಪ್ರಿಯ:- ಈ ಪಾಪಿಯನ್ನು ತಿದ್ದಲು ಪ್ರಯತ್ನ ಪಡುವವರಿಗೆ ಅವ ಮಾನವು ತಪ್ಪದು. ಇವನ ಹೊಟ್ಟೆಯನ್ನು ಮೂಲಕಾರಣರಾದ ಈ ಸಹವಾಸವಾಯಿತು. 19