ಪುಟ:ನಿರ್ಮಲೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ನಿಮಲೆ ಸಂಗಡ ನಾಟಕೋಟಿ ಶೆಟ್ಟಿಗಳನ್ನೂ ಶ್ರೀಮಂತರನ್ನೂ ಕರೆತಂದಿರುವೆವೆ ? ಇಷ್ಟೆಲ್ಲಾ ನಮಗೇಕೆ ? ಒಂದೆರಡು ಚೊಕ್ಕಟವಾದ ತಿಂಡಿಗಳಾದರೆ ಸಾಕು. ಪ್ರಿಯ:ಇರಲಿ, ಎಲ್ಲಿ, ಪಟ್ಟಿಯನ್ನು ಕೊಡು. ರಾಮ:-(ಓದುವನು) ಮೊದಲನೆಯ ಸಲಕ್ಕೆ, ಕಡಬು, ರಸಾಯನ. ಪ್ರಿಯ:-ನಿನ್ನ ಕಡಬನ್ನು ಭಾವಿಗೆಹಾಕು. ರಾಮ: ನಿನ್ನ ರಸಾಯನವನ್ನು ಒಲೆಗೆ ಹುಯ್ಯ ದೇವ:ಸರಿ, ಹಸಿವಿನಿಂದ ಪೀಡಿತರಾದವರಿಗೆ ಇದರಂತಹ ಭೋ ಜ್ಯವಸ್ತುವು ಬೇರೊಂದಿಲ್ಲ. ರಾಮ:ಪಟ್ಟಿಯ ಬುಡದಲ್ಲಿ ರೊಟ್ಟಿ, ಬೀರು, ಲಾಡು' ಎಂದಿದೆ. ಪ್ರಿಯ:-ಥ 1 ಲಾಡು ಅಜೀರ್ಣಕಾರಿ ! ರಾಮ:-ಲಾಡುವನ್ನು ನಿನ್ನ ತಲೆಯ ಮೇಲೆ ಹಾಕಿಕೋ ! ದೇವ:-(ಸ್ವಗತ) ಈ ತುಂಟಾಟವನ್ನು ನೋಡಿದವರಿಗೆ ಹುಚ್ಚು ಹಿಡಿಯುವುದು, (ಅವರನ್ನು ನೋಡಿ) ನೀವು ನನ್ನ ಅತಿಥಿಗಳು, ನಿಮಗೆ ಮನವೊಪ್ಪುವಂತೆ ಬದಲಾಯಿಸಬಹುದು. ನಿಮಗೆ ಇಷ್ಟವಾದುದನ್ನು ಧಾರಾಳವಾಗಿ ತಿಳಿಸಬಹುದು, ಯಾವ ಪದಾರ್ಥವನ್ನು ಅಪೇಕ್ಷಿಸಿದರೂ ಹೊಸದಾಗಿ ತಯಾರ್ಮಾಡಿಸಿ ಸಿದ್ದಗೊಳಿಸುವೆನು. - ರಾಮ:-ಪಲ್ಯಗಳು, ಮೇಲೋಗರಗಳು, ಮಸಾಲೆಯನ್ನು ಹಾಕಿದ ಭೋಜ್ಯವಸ್ತುಗಳು, ಗಟ್ಟಿಯಾದ ಹಾಲಿನ ಕೆನೆ, ಅಥವಾ ಫೇಡ ಇವೊಂದೂ ಇಲ್ಲ. ಪ್ರಿಯ:-ಇದೇನು ಬಿಯ್ಯಗರ ಔತನವೆ ! ನನಗೆ ಸಾಮಾನ್ಯವಾದ ಊಟವಾದರೆ ಸಾಕು. ದೇವ:-ಸ್ವಾಮಿ ! ತಮಗೆ ಬೇಕಾದ ಪದಾರ್ಥವು ನನ್ನ ಮನೆ ಯಲ್ಲಿರುವಂತಿಲ್ಲ, ಆದರೂ ತಮಗೆ ಯಾವುದರಲ್ಲಿ ಹೆಚ್ಚು ಅಕ್ಕರೆಯೆಂಬು ದನ್ನು ತಿಳಿಸಿದರೆ...... ಬ