ಪುಟ:ಕಥಾಸಂಗ್ರಹ ಸಂಪುಟ ೨.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಕಥಾಸಂಗ್ರಹ-೪ ನೆಯ ಭಾಗ ಒಂದು ರಾತ್ರಿಯಲ್ಲಿ ಉದಯವನ್ನು ಹೊಂದಿದ ಚಂದ್ರನನ್ನು ನೋಡಿ ಭಯಪಟ್ಟು, ಲಕ್ಷ್ಮಣನನ್ನು ಕುರಿತು-ಎಲೈ ತಮ್ಮ ನೇ ! ಬೇಗೇಳು, ಒಂದು ಮರದ ನೆರಳನ್ನು ಸೇರಿ ಕೊಳ್ಳೋಣ. ಸೂರ್ಯನು ತನ್ನ ತೀಕ್ಷ್ಯತೆಯುಳ್ಳ ಕಿರಣಗಳಿಂದ ಸುಡುತ್ತಿರುವನು ಎನ್ನಲು ಆಗ ಲಕ್ಷ್ಮಣನು-ಎಲೈ ಅಣ್ಣನೇ ! ಸಮರಾತ್ರಿಯಲ್ಲಿ ಸೂರ್ಯನಲ್ಲಿರುವನು? ಈಗ ಚಂದ್ರನುದಿಸಿರುವನು ಎನ್ನಲು ರಾಮನು ಇವನು ಚಂದ್ರನೆಂಬುದು ನಿನಗೆ ಹೇಗೆ ತಿಳಿಯಿತು ? ಎಂದು ಕೇಳಿದುದಕ್ಕೆ ಲಕ್ಷ್ಮಣನು-ಅದೋ ಬಿಂಬಮಧ್ಯದಲ್ಲಿ ಕಳಂಕವಿರುವುದು ನೋಡು ಎಂದನು. ರಾಮನು ಕಳಂಕವೆಂಬ ಮಾತನ್ನು ಕೇಳಿ ಅಯ್ಯೋ ಇದು ಚಂದ್ರಬಿಂಬವೇ ? ಎಲೈ ಚಂದ್ರಮುಖಿಯೇ ! ಎಲ್ಲಿರುವೆ ? ಎಂದು ಸೀತೆಯನ್ನು ನೆನಸಿಕೊಂಡು ಮರ್೮ಹೊಂದಿದನು. ಆಗ ಲಕ್ಷಣನು ಶೈತ್ಯೋಪಚಾರಮಾಡಿ ರಾಮನನ್ನು ಎಬ್ಬಿಸಿ ಹಿಡಿದು ತನ್ನೆ ದೆಗೊರಗಿಸಿಕೊಂಡು ಎಲೈ ಅಗ್ರ ಜನೇ ! ನೀನು ಯುಕ್ರಾಯುಕ್ತವಿಚಾರತತ್ಪರನು. ಮತ್ತು ಮಹಾ ಧೈರ್ಯಸಂಪನ್ನನು. ಇಂಥಾ ನೀನು ಧೈರ್ಯಹೀನನಾಗಿ ದುಃಖಪ ಡುವುದುಚಿತವೇ ? ಮನುಷ್ಯರಿಗೆ ದುಃಖಕ್ಕಿಂತಲೂ ಬೇರೆ ಹಗೆಯುಂಟೇ ? ದುಃಖವು ಉತ್ಸಾಹವನ್ನು ತಗ್ಗಿಸುವುದು. ಧೈರ್ಯವನ್ನು ಹಾಳ್ಳಾಡಿ ಬುದ್ದಿಯನ್ನು ಮಣ್ಣು ಕೂಡಿಸುವುದು. ಬಲವನ್ನು ಕುಂದಿಸುವುದು, ತೇಜಸ್ಸನ್ನು ನಂದಿಸುವುದು, ಅದು ಕಾ ರಣ ಅಪಾಯಕಾರಿಯಾದ ಶೋಕವನ್ನು ಬಿಟ್ಟು ಸುಗ್ರೀವನ ಸಹಾಯವನ್ನು ಹೊಂದಿ ರಾವಣ ಸಂಹಾರಕ್ಕೆ ಪ್ರಯತ್ನಿಸುವವನಾಗೆಂದು ಲಕ್ಷ್ಮಣನು ಹೇಳಿದ ಮಾತುಗಳನ್ನು ಕೇಳಿ ಧೈರ್ಯವನ್ನು ತಾಳಿ ರಾಮನು ಪಂಪಾ ತೀರದಲ್ಲಿ ಲಕ್ಷ್ಮಣನಿರ್ಮಿತವಾದ ಪರ್ಣಶಾಲೆಯೊಳಗೆ ವಾಸಿಸುತ್ತಿದ್ದನು. 4. RAMA FORMS AN ALLIANCE WITH SUGRIVA, THE MONKEY KING. ೪. ಸುಗ್ರೀವಸಖ್ಯದ ಕಥೆ. ಸುಗ್ರೀವನ ಸ್ನೇಹಾಪೇಕ್ಷೆಯಿಂದ ಪಂಪಾ ತೀರದಲ್ಲಿ ವಾಸಮಾಡುತ್ತಿದ್ದ ರಾಮನು ಒಂದು ದಿನ ಲಕ್ಷ್ಮಣನನ್ನು ಕುರಿತು-ಎಲೈ ತಮ್ಮ ನೇ ! ಇತ್ತ ನೋಡು. ಈ ಉದ್ಯಾನವನಲಕಿಯು ವಸಂತರ್ತುವೆಂಬ ನಿಜಪತಿಯನ್ನು ಆಲಿಂಗಿಸಿಕೊಂಡಿ ರುವಳು. ಜಗದಾಹ್ವಾದಕರನಾದ ಈ ವಸಂತನೆಂಬ ರಾಜನು ಸತ್ಪುರುಷರ ಶೀತೋ ದಕಸ್ಮಾನಗಳಿಗೆ ತೊಂದರೆಯನ್ನುಂಟುಮಾಡುತ್ತ ಲಕ್ಷ್ಮಿದೇವಿಗೆ ಮನೆಯಾದ ತಾವ ರೆಗಳ ಅಂದವನ್ನು ಕೆಡಿಸುತ್ತ ಲೋಕೋಪಕಾರಿಯಾದ ಸೂರ್ಯನ ತೇಜೋಬಲ ವನ್ನು ಕುಂದಿಸಿ ಲೋಕದಲ್ಲಿ ಬಡತನದಿಂದ ಹಾಸಿಗೆ ಹೊದಿಕೆಗಳಿಲ್ಲದ ಜನರನ್ನು ಶೈತ್ಯದಿಂದ ಕೈಶಪಡಿಸುತ್ತ ಸಾಂದ್ರವಾದ ತಮ್ಮ ನೆಳಲುಗಳಿಂದ ಮಾರ್ಗಸ್ಥರ