ಪುಟ:ಕುರುಕ್ಷೇತ್ರ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಖಬೋಧಿನಿ ವಿಶೇಷವಾದ ಜಾಗರೂಕತೆಯಿಂದ ತೆಗೆದುಕೊಂಡು ಹೋಗುವರು; ಪ್ರಾಯಶಃ ಅವು ಕಳದು ಹೋಗುವುದಿಲ್ಲ. 24, ಕಾಗದಗಳ ಅಕೋಟುಗಳನ್ನು ಹತ್ತಿ ಬಿಟ್ಟರೆ ಒಳಗಿ ರುವ ವಿಷಯ ಯಾರಿಗೂ ತಿಳಿಯದಂತೆ ಭದ್ರವಾಗಿದೆಯೆಂದು ಸಾಧಾರ ಇವಾಗಿ ತಿಳಿದುಕೊಳ್ಳುತ್ತಾರೆ, ತೆಳ್ಳಗಿರುವ ಕಾಗದದಲ್ಲಿ ಅಕೋಟು ಮಾಡಿದ್ದರೆ, ಒಳಗಿನ ಬರವಣಿಗೆಯನ್ನು ಸುಲಭವಾಗಿ ಓದಿಕೊಳ್ಳಬಹು ದು, ಅಕೋಟುಗಳನ್ನು ಒಡೆದು ಪುನಃ ಹತ್ತಿಸದಂತೆ ಧೈರ್ಯವಾಗಿರ ಬೇಕಾದಾಗ ಅರಗಿನಿಂದ ಮೊಹರು ಮಾಡಬೇಕು; ಒಂದು ದಾರವನ್ನು ನಡುವೆ ಪೋಣಿಸಿ, ಅದರ ಗಂಟಿನ ಮೇಲೆ ಮೊಹರು ಮಾಡುವುದು ಇನ್ನೂ ಒಳ್ಳೆಯದಾದ ಉಪಾಯವು. ಕಾಗದಗಳ ನಮನಗಳು. ಮಗು ಹುಟ್ಟಿದ ಸಮಾಚಾರಗಳು, ಶ್ರೀ. ಶ್ರೀಮತ್ಸಕಲಗುಣ ಸಂಪನ್ನರಾದ ರಾಜ ಮಾನ್ಯ ರಾಜಶ್ರೀ ರಂಗರಾಯರವರ ಸನ್ನಿಧಾನಂಗಳಿಗೆ, ತನ್ನ ಸೇವಕನಾದ ರಾಮರಾಯನು ಮಾಡುವ ಅನೇಕ ನನು ಸ್ವರಗಳು, ಇಲ್ಲಿ ಈ ವರೆಗೆ ಸರ್ವರೂ ಕ್ಷೇಮದಲ್ಲಿರುವೆವು ಅಲ್ಲಿ ಜಿರಂಜೀವಿಗಳೂ ಸೌಭಾಗ್ಯವತಿಗಳ ಆದಿಯಾಗಿ ತಮ್ಮ ನಿರಂತರ ಸುಕ್ಷೇಮಾತಿಶಯಗಳನ್ನು ಆಗಿಂದಾಗ್ಗೆ ಪತ್ರಿಕಾದ್ವಾರಾ ತಿಳಿಯಪ ಡಿಸಿ ಮನಸ್ಸಂತೋಷವನ್ನುಂಟುಮಾಡುತಿರಬೇಕೆಂದು ಕೋರುತ್ತೇನೆ. ಸಾಂಪ್ರತ. ಇಲ್ಲಿ ತಮ್ಮ ಸೊಸೆ ಚಿಗಿ ಸೌ| ಕುಂಕುಮಶೋಭಿತಳಾದ ನೀತ ಮನು ಈ ನಂದನ ಸಂವತ್ಸರದ ಆಶ್ವಯುಜ ಬ| ೨ ಬುಧವಾರ ಹಗ