ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ನೆಯ ಪ್ರಕರಣ-ಇ೦ ದಿರೆಯ ಆತ್ಮ ನಿವೇದನ ! ೧೭ ••••••MM مرمر مرمر برسرمرہ مرمہ مرمره / - /Ananth subray(Bot) (ಚರ್ಚೆ). //*// ಇಷ್ಟು ಹೊತ್ತು ಇಂದಿರೆಯು ಎದ್ದು ನಿಂತೇ ಮಾತಾಡುತ್ತಿದ್ದಳು, ಅವಳು ತನ್ನ ಸಂಗತಿಯನ್ನು ಹೇಳಲಿಕ್ಕೆ ಆರಂಭಿಸಿದ ಕೂಡಲೆ ವಿನಾಯಕನು ತನ್ನ ಪಲಂಗದಿಂದ ದೂರ ಇದ್ದ ಒಂದು ಖುರ್ಚೆ ಯಕಡೆಗೆ ಬೊಟ್ಟು ತೋರಿಸಿ:-( ನೀವು ಮೊದಲು ಆ ಖುರ್ಚಿಯ ಮೇಲೆ ಕುಳಿತು, ನಂತರ ಹೇಳುವದನ್ನೆಲ್ಲ ಹೇಳಿರಿ.” ವಿನಾಯಕನ ಸಹಾನುಭೂತಿಯನ್ನು ಕಂಡು ಇಂದಿರೆಯು ನಾಚಿದಂತೆ ನಟಿಸಿ ಖರ್ಚೆಯ ಮೇಲೆ ಕುಳಿತು:-( ನಾನು ಚಿಕ್ಕಂದಿನಲ್ಲಿಯೇ ನನ್ನ ತಾಯಿಯ ಮೊಲೆಯ ಹಾಲಿಗೆ ಎರವಾಗಿದ್ದೇನೆ. ನನ್ನ ತಾಯಿಯ ವಿಯೋಗವಾದಂದಿನಿಂದ ತಂದೆಯೇ ನನ್ನ ಸಂರಕ್ಷಕನಾದದ್ದರಿಂದ ಯಾವಾಗಲೂ ನಾನು ಆತನ ಸಂಗಡಲೇ ಇದ್ದು ಬೆಳೆದಿರುತ್ತೇನೆ. ಗೋಪಾಳರಾಯನಾದರೂ ನನ್ನ ತಂದೆಯ ಸಹವಾಸದಲ್ಲಿ ಇರಲಿಕ್ಕೆ ಹತ್ತಿ ಬಹಳ ವರ್ಷಗಳಾದವು; ಆದರೆ ಅವನು ಯಾರು ? ಅವನ ಉದ್ಯೋಗ ವೇನು? ಈ ಮೊದಲಾದದ್ದು ಇಂದಿಗೂ ನನಗೆ ಗೊತ್ತಿಲ್ಲ, ನನ್ನ ಸ್ಮರಣೆಯಲ್ಲಿ ನಮ್ಮ ತಂದೆಯು ಮೊದಲು ಹಿಂದೂಧರ್ಮದವನಿದ್ದನೆಂಬುವದು ಮಾತ್ರ ಉಳಿದದೆ-” ವಿನಾಯಕ:-1 ( ನಡುವೆ ಬಾಯಿ ಹಾಕಿ ) ಮತ್ತು ಈಗ ಅವರು ಕ್ರಿಸ್ತಿ ಧರ್ಮದವರು ಇರುತ್ತಾರೇ ?” ಇಂದಿರೆ: – ಇಲ್ಲ. ಈ ಮುಂಬಯಿಯಲ್ಲಿ ವಿಶ್ವಧರ್ಮಸಮಾಜವೆಂಬ ಹೆಸ ರಿನ ಒಂದು ಸಂಸ್ಥೆಯದೆ. ಅದರಲ್ಲಿ ನಮ್ಮ ತಂದೆಯು ಸಮಾವೇಶವಾಗಿದ್ದಾನೆ. ನಮ್ಮ ತಂದೆಯು ಆ ಸಂಸ್ಥೆಗೆ ಸೇರಿದ ಮೇಲೆ ನಾನೂ ಸೇರಬಹುದೆಂದು ನೀವು ಊಹಿಸ ಬಹುದು. ನನಗೆ ನಿರಾಕಾರಕ್ಕಿಂತಲೂ ಸಾಕಾರದ ಮೇಲೆ ಹೆಚ್ಚು ವಿಶ್ವಾಸವದೆ,” ವಿನಾಯಕ:-ಅದು ಯೋಗ್ಯ, ಪ್ರತ್ಯಕ್ಷ ಕಂಡದ್ದನ್ನೆ ಪ್ರಮಾಣಿಸಿ ನೋಡ ಬೇಕೆಂದು ಆರ್ಯವಚನವಿರುವಾಗ ಅಪ್ರತ್ಯಕ್ಷಕ್ಕೆ ಮೆಚ್ಚು ವದು ಹುಚ್ಚತನವಾಗಿದೆ.” ಇಂದಿರೆ:- ಹಾಗನ್ನಿರಿ, ಅಥವಾ ಮನೋಭಾವನೆಯೆಂದರೆ, ನಾನು ತಂದೆಯ ಸಂಗಡ ಎಷ್ಟೋ ಸಾರೆ ಆ ಸಮಾಜಕ್ಕೆ ಹೋಗಿರುವೆನು. ಅಲ್ಲಿ ಎಷ್ಟೋ ಜನರು ಸಾಕಾರ-ನಿರಾಕಾರಗಳ ಬಗ್ಗೆ ವೃಥಾ ವಾದವಿವಾದ ಮಾಡಿ ಅದರಲ್ಲಿಯೇ ತಮ್ಮ ಸರ್ವ ವಾಕ್ಖಾತುರ್ಯವನ್ನು ಖಚು ಮಾಡುತ್ತಾರೆ. ' ಧರ್ಮ ಇದು ಶಬ್ದಾ ಡಂಬರದ ವಿಷಯವಲ್ಲ. ಅದಕ್ಕೆ ಅನುಭವವೇ ಬೇಕು. ಶರೀರ, ಆತ್ಮ, ಪರಮಾತ್ಮ ಇವುಗಳಲ್ಲಿ ಯ ಭೇದಜ್ಞಾನವೂ, ನಿರಾಕಾರದ ತಿಳುವಳಿಕೆಗೆ ಬೇಕಾಗುವ ಯೋಗ ಸಾಮರ್ಥ್ಯವೂ ಅವರಲ್ಲಿ ಇಲ್ಲಿ ಇಲ್ಲ, ಯಾವ ಸ್ವರೂಪವನ್ನು ತಿಳಕೊಳ್ಳಲಿಕ್ಕೆ ಮಹಾ ಮಹಾ ಜ್ಞಾನಿಗಳು ಕೂಡ ತಮ್ಮಿಂದ ಆಗಲಾರದೆಂದು ಅಂದಿರುವರೋ ಆ ನಿರ್ಗುಣಸ್ವರೂಪದ ಬಗ್ಗೆ ಈ ಸಮಾಜದಲ್ಲಿ ಬೇಕಾದವನು ಬಲ್ಲೆನೆಂದು ಅನ್ನುತ್ತಿರು ತಾನೆ. ಗೋಪಾಳರಾಯನ: ಎಂಥ ಮನುಷ್ಯನೆಂಬುವದು ನಿಮಗೆ ಸ್ವಲ್ಪಾನುಭವ