ಪುಟ:ನಿರ್ಮಲೆ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ 4 ರಾಮ:-ತಾವು ಅವರ ಬಾಯಿಂದಲೇ ಕೇಳಿದರೆ ನಂಬಿಕೆಯು ಹುಟ್ಟುವುದು. [ಮಿತಿಮೀಾರಿ ಮದ್ಯಪಾನಮಾಡಿದ ಒಬ್ಬ ಸೇವಕನು ಬರುವನು] ರಾಮ:-ಏನು ? ಹೀಗೆ ಮುಂದೆಬಾ, ಎಲಾ, ನನ್ನ ಅಪ್ಪಣೆಯೇನು? ಈ ಮನೆಗೆ ಒಳ್ಳೆಯದಾಗಲೆಂದೇ ನೀವು ತೃಪ್ತಿಯಾಗುವಂತೆ ಕುಡಿದು ಮನ ಸ್ಸಿಗೆ ಬೇಕಾದುದನ್ನು ತಿನ್ನ ಬಹುದೆಂದು ನಾನು ಆಜ್ಞೆ ಮಾಡಿಲ್ಲವೋ ? ದೇವ:-( ಸ್ವಗತ೦) ಇನ್ನು ಅಸಾಧ್ಯ, ನನಗೆ ತಾಳೆಯು ಹೋಯಿತು, ಸೇವಕ:- ಸ್ವಾಮಿ, ಸ್ವಚ್ಛಾವಿಹಾರ, ಸುಖನಿವಾಸ ನಾನು ಯಾರಿಗೆ ಕಡಮೆ ? ಊಟಕ್ಕೆ ಮುಂಚಿತವಾಗಿ ಕುಡಿಯುವುದು ನನಗೆ ಅಭ್ಯಾ ಸವಿಲ್ಲ, ಏಕೆಂದರೆ, ಕುಡಿದಮೇಲೆ ಊಟಮಾಡಿದರೆ ಮದ್ಯವು ಒಳಗೆ ಸೇರಿ ಅದರಮೇಲೆ ಊಟಮಾಡಿದ ಪದಾರ್ಥಗಳು ಸೇರುವುವು, ದೇವರಾಣೆಗೂ ಕುಡಿದಮೇಲೆ ಊಟಮಾಡಲಾರೆ. (ಬಿಕ್ಕಲುಬರುವದು) ಸ್ವಾಮಿ ? ರಾಮ:-ಸ್ವಾಮಿ, ನೋಡಿದಿರೋ, ಇವನು ಸಂಪೂರ್ಣವಾಗಿಯ ಕುಡಿದಿರುವನು. ನಿಮಗೆ ಇನ್ನೇನಾಗಬೇಕು, ಇವರೆಲ್ಲರೂ ಬೇಕಾದಷ್ಟನ್ನು ಕುಡಿದು ದಣಿದಿರುವರು. ದೇವ:- .ಇನ್ನು ನಾನು ನಿನ್ನ ಹಾವಳಿಯನ್ನು ಸಹಿಸಿಕೊಂಡಿರಲಾರೆ. ಸಹಿಸಿಕೊಂಡಿದ್ದರ ಹುಚ್ಚು ಹಿಡಿಯುವುದು, ರಾಮವರ್ಮನೆ, ನಿನ್ನ ತುಂಟಾ ಟಕ್ಕೆ ಮೊದಲು ಕೊನೆಯಿಲ್ಲವಾಗಿದೆ. ನೀನೂ ನಿನ್ನ ಕುಡುಕಸೇವಕರೂ ಈಗಲೇ ಮನೆಯನ್ನು ಬಿಟ್ಟು ಹೋಗಬೇಕು, ತಿಳಿಯಿತೊ, ಹೊರಡಿರಿ, ರಾಮ:-ಏನು, ಏನು ? ಮನೆಯನ್ನು ಬಿಟ್ಟು ಹೋಗುವುದೆ ? ನೀನು ಪರಿಹಾಸ್ಯ ಮಾಡುತ್ತಿರಬಹುದು, ನಿನ್ನನ್ನು ಸಂತೋಷಪಡಿಸಲು ನನ್ನ ಕೈಯಲ್ಲಾದುದನ್ನೆಲ್ಲ ನಾನು ಮಾಡಿರುವೆನು, ನೀನು ಆಡುವ ಮಾತೆಲ್ಲವೂ ಚೋದ್ಯವೇ ಸರಿ.