ಪುಟ:ನಿರ್ಮಲೆ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ೭೫ ಪ್ರಿಯ :-ಸಾಕ್ಷಿ ಸಮೇತವಾಗಿ ಅವಳು ಅದನ್ನು ಹೊರಗೆ ತರು ವಳು, ಸರ್ವನಾಶ ! ರಾಮ :-ನಾನು ಮಾಡಿದುದು ಸರಿಯಷ್ಟೆ ! ನನ್ನ ಬುದ್ದಿ ಚತುರತೆ ಜಾಣೆಗಳನ್ನು ನೀನು ಮೆಚ್ಚು ವಿಯೊ ಇಲ್ಲವೊ ? ಪ್ರಿಯ:-(ಸ್ವಗತ) ಇರಲಿ ! ಅಸಮಾಧಾನವನ್ನು ತೋರ್ಪಡಿಸ ಬಾರದು. ರಾಮ:- ಅದೇಕೆ ಸುಮ್ಮನಿರುವೆ? ಅಸಮಾಧಾನವಾದಂತೆ ತೋರು ವುದು, ಏನೂ ಪ್ರಮಾದವಿಲ್ಲವಷ್ಟೆ ? ಪ್ರಿಯ:ಇಲ್ಲ. ಅಸಮಾಧಾನವೇನೂ ಇಲ್ಲ, ಸಂತೋಷವಾ ಗಿಯೇ ಇರುವೆನು, ಪ್ರಾಯಶಃ ಯಜಮಾನಿಯು ಆ ಪೆಟ್ಟಿಗೆಯ ಸಂರಕ್ಷ ಣೆಯ ಭಾರವನ್ನು ಅತ್ಯಾದರದಿಂದ ವಹಿಸಿರಬಹುದು. ರಾಮ:--ಸ್ವಲ್ಪವೂ ತಡಮಾಡಲಿಲ್ಲ. ಪೆಟ್ಟಿಗೆಯೊಂದನ್ನೇ ಅಲ್ಲ. ಅದನ್ನು ತೆಗೆದುಕೊಂಡುಹೋಗಿದ್ದ ಸೇವಕನನ್ನೂ ಭದ್ರವಾಗಿಟ್ಟು ಕೊಂಡಿ ರಲು ಅವಳಿಗೆ ಅಪೇಕ್ಷೆಯಿದ್ದಂತೆ ತೋರುವುದು, ಪ್ರಿಯ:-ಹಾ ! ಹಾಗಾದರೆ ಆ ಸೇವಕನೂ ಸುರಕ್ಷಿತವಾಗಿರು ವನೆ ? ರಾಮ:-ಇಲ್ಲ ; ಇಲ್ಲ, ಅವನು ಬಂದುಬಿಟ್ಟನು, ಲುಬ್ಬನ ಚೀಲದಲ್ಲಿರುವ ಹಣದಂತೆ ಪೆಟ್ಟಿಗೆಯು ಬಹಳ ಜೋಪಾನವಾಗಿರುವುದು. ಪ್ರಿಯ:-(ಸ್ವಗತ೦) ಇನ್ನು ಜವಾಹಿರಿಗಳ ಆಶೆಯಿಲ್ಲ, ಅದರ ಆಶೆಯನ್ನು ಬಿಟ್ಟೆ ನಾವು ಹೊರಡಬೇಕಾಯಿತು, (ಪ್ರಕಾಶಂ) ರಾಮವರ್ಮ, ನನಗೆ ಬೇರೆ ಕೆಲಸವಿದೆ, ಹೊರಡುವೆನು, ನೀನು ಆ ಸೇವಕಳ ಧ್ಯಾನದಲ್ಲಿ ಮಗ್ನನಾಗಿರು ನಿನ್ನಿಂದ ನನ್ನ ಕಾಠ್ಯವು ಜಯಪ್ರದವಾಗುವಂತೆಯೇ, ನನ್ನಿಂದ ನಿನ್ನ ಕಾಠ್ಯವೂ ಜಯಪ್ರದವಾಗಲಿ, (ಹೊರಟುಹೋಗುವನು) - ರಾಮ :-ಪ್ರಿಯನೆ, ವಂದಿಸುವೆನು. ಹಾ ! ಹಾ !!