ಪುಟ:ನಿರ್ಮಲೆ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{19 | ನಿರ್ಮಲೆ ೧೦೩ ಸಂಭವಿಸುತ್ತಿರಲಿಲ್ಲ, ಕೆಸರಿನಲ್ಲಿ ಮುಳುಗಿ, ಬಚ್ಚಲಿನಲ್ಲಿ ಬಿದ್ದು, ಮೈಕ್ಕೆ ತಲೆಗಳನ್ನು ಒಡೆದುಕೊಂಡು, ಕೊನೆಗೆ ದಾರಿಯೂ ತಪ್ಪಬೇಕೆ ? ಅಯ್ಯೋ! ಇದೆಲ್ಲವೂ ಹಣೆಯ ಬರಹವೇ ಸರಿ, ಈಗ ನಾವೆಲ್ಲಿರುವೆವು ? ದುರ್ಮ:- ಮನೆಯಿಂದ ಸುಮಾರು ನಲ್ವತ್ತು ಮೈಲಿ ದೂರದಲ್ಲಿರಬ ಹುದು. ಇದೇಯೇ ತಲೇ ಕಾಮನದಿಣ್ಣೆಯಂತೆ ಕಾಣುತ್ತೆ. ಚಂಡಿ:- ಅಯ್ಯೋ ! ಅಯ್ಯೋ !! ಕಳ್ಳರಿಗೆ ಇದು ಬಹು ಪ್ರಖ್ಯಾತ ವಾದ ಸ್ಥಳ. ಇಷ್ಟು ಸಂಭ್ರಮದ ಜತೆಗೆ ದರೋಡೆಯೂ ಆಗಿಬಿಟ್ಟರೆ, ನಮ್ಮ ಪುಣ್ಯಕ್ಕೆ ಎಣೆಯೇಇಲ್ಲ. ದುರ್ಮ: ಅತ್ತೆ, ಹೆದರಬೇಡ, ಇಲ್ಲಿದ್ದ ಐದುಮಂದಿಯಲ್ಲಿ ಇಬ್ಬ ರನ್ನು ಗಲ್ಲಿಗೆ ಹಾಕಿದರು. ಉಳಿದ ಮೂವರ ಕೈಗೆ ಪ್ರಾಯಶಃ ನಾವು ಸಿಕ್ಕಿ ಬೀಳಲಾರೆವು, ಹೆದರಬೇಡ, ಅತ್ತೆ, ಧೈರವಾಗಿರು, (ಅತ್ತನೋಡಿ) ಅದಾರು ? ನಮ್ಮ ಹಿಂದೆ ಕುದುರೆಯನ್ನು ಓಡಿಸಿಕೊಂಡು ಬರುತ್ತಿರುವರು. ಓಹೋ ! ಏನೂ ಇಲ್ಲ, ಅದೊಂದು ಮರ ಹೆದರಬೇಡ. ಚಂಡಿ:-ಹೆದರಿಕೆಯಿಂದ ನನ್ನ ಪ್ರಾಣವೇ ಹಾರಿಹೋಗುವುದು, ದುರ್ಮ: ... ಅತ್ತೆ, ಅತ್ತ ನೋಡು, ಆ ಪೊದೆಯ ಹಿಂದೆ ಏನೋ ಅಲ್ಲಾಡುವುದು, ಅದೇನು ಕರೀಟೋಪಿಯೊ ? ನಿನಗೆ ಚೆನ್ನಾಗಿ ಕಾಣುವುದೆ ? ಚಂಡಿ:-(ಅತ್ತನೋಡಿ) ಅಯ್ಯೋ ! ಅಯ್ಯೋ !! ಇನ್ನೇನುಗತಿ ? ದುರ್ಮ:- ಏನೂ ಹೆದರಿಕೆಯಿಲ್ಲ. ಅದೊಂದು ಹಸು, ಅತ್ತೆ, ಹೆದರಬೇಡ, ಧೈಲ್ಯವಾಗಿರು. ಚಂಡಿ:- ಅಯ್ಯೋ ! ಅಲ್ಲಿ ನೋಡೋ ! ಯಾರೋ ಬರುವಂತಿದೆ ? ಅಯ್ಯೋ ! ಅವನು ನಮ್ಮನ್ನು ನೋಡಿದರೆ, ನಮ್ಮ ಅವತಾರವು ಪೂರೈಸಿತೆಂದೇ ಹೇಳಬೇಕು. - ದುರ್ಮ:-(ಸ್ವಗತಂ) ನನ್ನ ಮಾವನಾದ ದೇವದತ್ತನು, ಎಂದಿನಂತೆ 0 ಅತ್ರೆಯ ಕಾಲದಲ್ಲಿ ಸುತ್ತಾಡಲು ಇತ್ತ ಬರುತ್ತಿರುವನು' (ಪ್ರಕಾಶ೦) ಅತ್ತೆ,