ಪುಟ:ಕಥಾಸಂಗ್ರಹ ಸಂಪುಟ ೨.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಗ್ರೀವಸಖ್ಯದ ಕಥೆ 79 ಬಾಯಾರಿಕೆಗಳಿಂದ ಕಂದಿ ಕುಂದಿ ಕಡೆಗೆ ಸ್ವಯಂಪ್ರಭೆಯೆಂಬುವಳಿರುವ ಗುಹೆ ಯನ್ನು ಪ್ರವೇಶಿಸಿ ಅವಳನ್ನು ಕಂಡು ತಾವು ಬಂದಿರುವುದಕ್ಕೆ ಕಾರಣವನ್ನು ಸಾಂಗ ವಾಗಿ ತಿಳಿಸಲು ಆಕೆಯು ಅವರಿಗೆ ತಿನ್ನುವುದಕ್ಕೆ ಕಂದಮೂಲಗಳನ್ನೂ ಕುಡಿಯುವು. ದಕ್ಕೆ ನಿರ್ಮಲೋದಕವನ್ನೂ ಜೇನು ತುಪ್ಪವನ್ನೂ ಕೊಟ್ಟು ಅವರ ಹಸಿವು ಬಾಯಾರಿ ಕೆಗಳನ್ನು ಶಾಂತಪಡಿಸಿದಳು. ಆ ಮೇಲೆ ಅವರೆಲ್ಲರೂ ಆಕೆಯನ್ನು ಕುರಿತು-ಎಲ್ಲೆ ತಾಯೇ ! ನಿನ್ನ ದಯೆಯಿಂದ ನಮ್ಮ ಕುತೂಷೆಗಳು ಅಡಗಿದವು. ನಾವು ಬರುವಾಗ ಈ ಗುಹೆಯೊಳಗೆ ಸುಲಭವಾಗಿ ಬಂದೆವು. ಈಗ ನಾವು ಹೇಗೆ ಯಾವ ದಾರಿಯಿಂದ ಹೋಗಬೇಕೋ ತಿಳಿಯುವುದಿಲ್ಲ, ನನ್ನೊಡೆಯನಾದ ಸುಗ್ರೀವನು ಒಂದು ತಿಂಗ ಳೊಳಗೆ ಹಿಂದಿರುಗಿ ಬಾರದಿದ್ದರೆ ನಿಮ್ಮನ್ನೆಲ್ಲಾ ಕೊಲ್ಲಿಸುವೆನೆಂದು ನಮಗೆ ಅಪ್ಪಣೆ ಕೊಟ್ಟಿದ್ದಾನೆ. ಆದುದರಿಂದ ಎಲೈ ತಾಯೇ ! ನೀನು ನಮ್ಮಲ್ಲಿ ದಯೆಯನ್ನಿಟ್ಟು ಈ ಗುಹೆಯಿಂದ ಹೊರಗೆ ಹೋಗುವ ಹಾಗೆ ಸಹಾಯಮಾಡಿದರೆ ನೀನೇ ನನ್ನ ಪ್ರಾಣ ಗಳನ್ನು ಕಾಯವಳಾಗುತ್ತೀಯೆ ಎಂದು ದೈನ್ಯದಿಂದ ಬೇಡಿಕೊಳ್ಳಲು ಆಗ ಆಕೆಯು ಅವರನ್ನು ಕುರಿತು- ಎಲೈ ಕಪಿನಾಯಕರುಗಳಿರಾ ! ಮಹಾಪೂರುಷರಾದ ದೇವತೆಗ ಭೂ ಕೂಡ ಈ ಗುಹೆಯನ್ನು ಪ್ರವೇಶಿಸಿ ಹಿಂದಿರುಗಿ ಹೋಗಲಾರರು. ಅದು ಕಾರಣ ಈಗ ನೀವೆಲ್ಲರೂ ಒಬ್ಬರ ಕೈಯನ್ನೊ ಬ್ಬರು ಹಿಡಿದುಕೊಂಡು ಕಣ್ಣುಗಳನ್ನು ಮುಚ್ಚಿ ಕೊಳ್ಳಿರೆಂದು ಹೇಳಿದಳು. ಅವರೆಲ್ಲರೂ ಕೂಡಲೇ ಒಬ್ಬೊಬ್ಬರ ಕೈಗಳನ್ನು ಹಿಡಿದು ಕೊಂಡು ಕಣ್ಣುಗಳನ್ನು ಮುಚ್ಚಿ ಕೊಂಡರು. ಆ ಕ್ಷಣದಲ್ಲಿಯೇ ಅವರೆಲ್ಲರನ್ನೂ ಗುಹೆಯಿಂದ ಹೊರಗೆ ತಂದು ಬಿಟ್ಟು ಆಕೆಯು ಅವರನ್ನು ಕುರಿತು..ಇದೋ ನೀವೆ ಲರೂ ಹೊರಗೆ ಬಂದಿದ್ದೀರಿ ! ಇನ್ನು ಮೇಲೆ ನಿನ್ನೊಡೆಯನ ಅಪ್ಪಣೆಯನ್ನು ಅನುಸರಿಸಿ ನಡೆಯಬಹುದೆಂದು ಹೇಳಿ ಗುಹೆಯನ್ನು ಹೊಕ್ಕಳು, ಅನಂತರದಲ್ಲಿ ಅಂಗದನು ದಿಕ್ಕುಗಳನ್ನು ನೋಡಿ ಶರತ್ಕಾಲವು ಕಳೆದುಹೋಗಿ ಹೇಮಂತಕಾಲವು ಬಂದಿರುವುದನ್ನು ತಿಳಿದು ಮಹಾತಂಕಯುಕ್ತನಾಗಿ ಜಾಂಬ ವಂತನೇ ಮೊದಲಾದ ಕಪಿವೀರರನ್ನು ಕುರಿತು ಇದೋ ನೋಡಿ ಸುಗ್ರೀವನು ನೇಮಿಸಿದ ತಿಂಗಳ ಅವಧಿಯ ಮುಗಿದುಹೋಯಿತು. ಸೀತಾರಾವಣರನ್ನೂ ಕಾಣ ಲಿಲ್ಲ. ಈಗ ನಾವು ತಿರಿಗಿ ಕಿಂಧೆಗೆ ಹೋದರೆ ಸುಗ್ರೀವನು ನಮ್ಮನ್ನು ಕಲ್ಲುಗಾ ಣಗಳಿಗೆ ಹಾಕಿಸಿ ಅರೆಯಿಸಿಬಿಡುವನು. ತಿರಿಗಿ ಅವನ ಬಳಿಗೆ ಹೋಗಿ ಅವನಿಂದ ಕೊಲ್ಲಿ ಸಿಕೊಳ್ಳುವುದಕ್ಕಿಂತಲೂ ನಾವೇ ಈ ವಿಂಧ್ಯಪರ್ವದಲ್ಲಿ ಅನ್ನೋದಕಗಳನ್ನು ತೊರೆದು ಪ್ರಾಣಗಳನ್ನು ಬಿಡುವುದೇ ಲೇಸು ಎಂದು ಹೇಳಲು ಅದಕ್ಕೆ ಕೊಡಗಗಳೆಲ್ಲಾ ಒಪ್ಪಿ ಕೂಡಿಬಂದು ಒಂದು ದೊಡ್ಡ ಬಂಡೆಯ ಮೇಲೆ ಕುಳಿತು ನಿರಶನವ್ರತವನ್ನು ಕೈಕೊಂಡು ಮೊದಲು ಈ ಸೀತೆಯಿಂದ ವಿರಾಧನೆಂಬ ರಾಕ್ಷಸನು ಕಬಂಧನೆಂಬ ನಿಶಾಚರನು ಖರದೂಷಣರೇ ಮೊದಲಾದ ಹದಿನಾಲ್ಕು ಸಾವಿರ ಮಂದಿ ರಾತ್ರಿಂಚರರು ಜಟಾಯು ವೆಂಬ ಗೃಧ್ರರಾಜನು ಈ ಮೊದಲಾದವರೆಲ್ಲರೂ ಹಾಳಾದರು. ಈಗ ನಾವೂ ಅವರಂತೆ ಈ ಸೀತೆಗಾಗಿ ಪ್ರಾಣಗಳನ್ನು ತೊರೆಯಬೇಕಾಗಿ ಬಂದಿತು ಎಂದು ಮಾತನಾಡಿಕೊ