ಪುಟ:ಕಥಾಸಂಗ್ರಹ ಸಂಪುಟ ೨.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

72 ಕಥಾಸಂಗ್ರಹ-೪ ನೆಯ ಭಾಗ ರ್ಯವಂತರಾದವರನ್ನು ಸೇರುವ ಸೇವಕರನ್ನು ಅನುಕರಿಸುತ್ತಿರುವುವು. ತೆಂಕಣ ಗಾಳಿ ಯೆಂಬ ಗುಡ್ಡನು ವನಸರಸ್ಸುಗಳಲ್ಲಿ ಮಿಂದು ಪುಷ್ಪಧೂಳಿಯೆಂಬ ಭಸ್ಮವನ್ನು ಧರಿಸಿ ಅನುಸರಿಸಿ ಬರುತ್ತಿರುವ ಭಂಗಗಳ ಝೇಂಕಾರವೆಂಬ ಬೊಬ್ಬೆಯಿಂದ ಕೂಡಿ ಸಂಪಿಗೆ ಹೂವುಗಳೆಂಬ ಕೆಂಡಗಳನ್ನು ತುಳಿಯುತ್ತ ವನದೇವತೆಯ ಮುಂದೆ ತೂಳಗ ಬಂದವ ನಂತೆ ಮೆರೆಯುತ್ತಿರುವನು. ಇಂಥ ವಿನೋದಕರವಾದ ವಸಂತಕಾಲದಲ್ಲಿ ನನ್ನನ್ನಗಲಿ ಸೀತೆಯು ಸೀತೆಯನ್ನ ಗಲಿ ನಾನೂ ದುಃಖಪಡುತ್ತಿರುವೆವು. ಕಾಲಗತಿಯನ್ನು ಮಾರ ಬಲ್ಲವರಾರು ? ಎಂದು ಬಿಸುಸುಯ್ಯುತ್ತಿರಲು ಅಷ್ಟರೊಳಗೆ ಈ ವನರಾಜಿಯಲ್ಲಿ ಸಂಚರಿಸುತ್ತಿರುವ ಮನುಷ್ಯರಾರೆಂಬುದನ್ನು ತಿಳಿದು ಬಂದು ಹೇಳುವಂತೆ ಸುಗ್ರೀವ ನಿಂದ ಮೊದಲೇ ನೇಮಿಸಲ್ಪಟ್ಟಿದ್ದ ಆಂಜನೇಯನು ಸನ್ಯಾಸಿವೇಷಧಾರಿಯಾಗಿ ಬಂದು ರಾಮಲಕ್ಷ್ಮಣರನ್ನು ಕಂಡು ವಂದಿಸಿ ನೀವು ಯಾರು ? ಮನುಷ್ಕಾ ಕಾರಗಳನ್ನು ಧರಿಸಿದ ಮನ್ಮಥವಸಂತರೋ ? ಜಯಂತ ನಳಕೂಬರರೋ ? ಅಶ್ವಿನೀ ದೇವತೆಗಳೊ ? ಮುನಿಪುತ್ರರೋ ? ಅಥವಾ ರಾಜಕುಮಾರರೋ ? ನಿಮ್ಮನ್ನು ನೋಡುವುದರಿಂದ ಇವರಿಂಥಾವರೇ ಎಂದು ನಿರ್ಧರಿಸಿ ತಿಳಿಯುವುದಕ್ಕಾಗುವುದಿಲ್ಲ. ಏಕೆಂದರೆ ನಿಮ್ಮ ಸೊಂಟಗಳಲ್ಲಿ ಪರೆಯನ್ನು ಬಿಟ್ಟ ಸರ್ಪಗಳಂತೆ ಒರೆಯಿಂದ ತೆಗೆದ ಕತ್ತಿಗಳು ಪ್ರಕಾಶಿ ಸುತ್ತಿರುವುವು. ನಿಮ್ಮ ಕೈಗಳಲ್ಲಿ ಇಂದ್ರಧನಸ್ಸುಗಳಂತೆ ಹೊಳೆಯುತ್ತಿರುವ ಸಿಂಗಾಡಿ ಗಳು ಒಪ್ಪುತ್ತಿರುವುವು. ಹಾವುಗಳಿಂದ ತುಂಬಲ್ಪಟ್ಟ ಹುತ್ತಗಳಂತೆ ನಿಮ್ಮ ಬೆನ್ನಿನಲ್ಲಿ ಅಲಗುಗಳಿಂದ ತುಂಬಲ್ಪಟ್ಟ ಬತ್ತಳಿಕೆಗಳು ವಿರಾಜಿಸುತ್ತಿರುವುವು. ಜಡೆಗಳಿಂದ ಕೂಡಿದ ನಿಮ್ಮ ಶಿರಸ್ಸುಗಳು ಬೀಳಲುಗಳಿಂದ ಒಪ್ಪವ ಆಲದ ಮರಗಳನ್ನು ಹೋಲು ತಿರುವುವು. ಮುನಿಗಳಂತೆ ನಾರ್ಮಡಿಗಳನ್ನೂ ಕೃಷ್ಣಾಜಿನಗಳನ್ನೂ ಧರಿಸಿರುವಿರಿ. ನಿಮ್ಮ ಮುಖಗಳ ತೇಜಸ್ಸನ್ನೂ ನಿಮ್ಮ ಅಂಗೋಪಾಂಗಗಳಲ್ಲಿರುವ ಮಹಾಪುರುಷ ಲಕ್ಷಣಗಳನ್ನೂ ನೋಡಿದರೆ ಪಂಚಾಶಕ್ಕೊಟಿಯೋಜನ ವಿಸ್ತೀರ್ಣವಾದ ಈ ಭೂಮಂಡಲವನ್ನು ಪರಿಪಾಲಿಸತಕ್ಕ ಪುರುಷಶ್ರೇಷ್ಠರಾಗಿ ಕಾಣಿಸುತ್ತೀರಿ. ಇಂಥ ನೀವು ಪಾದಚಾರಿಗಳಾಗಿ ಈ ಅರಣ್ಯ ಭೂಮಿಗೆ ಬರುವುದಕ್ಕೆ ಕಾರಣವೇನು ? ಇತ್ಯಾದಿ ವಿಷಯಗಳನ್ನೆಲ್ಲಾ ದಯೆಯಿಟ್ಟು ನನಗೆ ವಿಸ್ತಾರವಾಗಿ ಹೇಳಬೇಕು. ನಾನು ವಾಲಿ ಯೆಂಬ ಕಪಿರಾಜನಿಂದ ತಿರಸ್ಕರಿಸಲ್ಪಟ್ಟು ವನದಲ್ಲಿರುವ ಸೂರ್ಯಕುಮಾರನಾದ ಸುಗ್ರೀವನೆಂಬ ಕಪಿರಾಜನ ಮಂತ್ರಿಯು. ನಾನು ಕೇಸರಿಯೆಂಬ ಕಪಿಚೇಷ್ಟನ ಪತ್ನಿ ಯಾದ ಅ೦ಜನಾದೇವಿಯಲ್ಲಿ ವಾಯುದೇವತಾ ಪ್ರಸಾದದಿಂದ ಹುಟ್ಟಿದವನು. ಜನರು ನನ್ನನ್ನು ಹನುಮಂತನೆಂದು ಕರೆಯುತ್ತಿರುವರು. ನನ್ನೊಡೆಯನಾದ ಸುಗ್ರಿ ವನು ನಿಮ್ಮ ಸ್ನೇಹಸಂಬಂಧವನ್ನು ಬಯಸುತ್ತಿರುವನು ಎಂದು ವಿನಯದಿಂದ ಹೇಳಲು ಆಗ ಲಕ್ಷಣನು ಆತನನ್ನು ಕುರಿತು-ನಾವು ಸಾಕೇತನಗರ ನಾಯಕನಾದ ದಶರಥ ಭೂಪನ ಕುವರರು. ಈತನು ನನ್ನಣ್ಣನು. ಈತನಿಗೆ ರಾಮನೆಂದು ಹೆಸರು. ಲಕ್ಷ್ಮಣ ನೆಂದು ನನಗಭಿಧಾನವು. ಮಹಾತ್ಮನಾದ ಈ ರಾಮಚಂದ್ರನು ತಾತಾಚ್ಚಾನುಸಾರ ವಾಗಿ ಜಟಾ ಚೀರಗಳನ್ನು ಧರಿಸಿ ಸೀತೆಯೆಂಬ ಸತಿಯೊಡನೆಯ ನನ್ನೊಡನೆಯ M &