ಪುಟ:ಕಥಾಸಂಗ್ರಹ ಸಂಪುಟ ೨.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಕಥಾಸಂಗ್ರಹ-೪ ನೆಯ ಭಾಗ ವಾದ ನಿಷ್ಕರ್ಷೆಯು ಭರತನಿಗೆ ಸಮ್ಮತವಾಗಿದ್ದರೆ ಅವನು ನನಗೆ ಪುತ್ರನೂ ಅಲ್ಲ. ನಾನು ಅವನಿಗೆ ಪಿತೃವೂ ಅಲ್ಲ. ನೀನು ನನ್ನನ್ನು ಕೊಲ್ಲುವ ಮೃತ್ಯುವೆಂದರಿಯದೆ ಅಜ್ಞಾನದಿಂದ ಹೆಂಡತಿಯೆಂದು ತಿಳಿದು ಈ ವರೆಗೂ ನಿನ್ನೊಡನೆ ಕೂಡಿದೆನು, ಯೌವ ನವಂತನೂ ಪಿತೃವತ್ಸಲನೂ ಗುಣಶಾಲಿಯ ನಿರಪರಾಧಿಯ ಆದ ಮಗನನ್ನು ನಿಷ್ಕಾ ರಣವಾಗಿ ಅಡವಿಗಟ್ಟುವ ನನ್ನಂಥ ಪಾಪಿಯಾದ ತಂದೆಯು ಯಾವ ಮಕ್ಕಳಿಗೂ ಉಂಟಾಗಬಾರದು. ಶ್ರೇಷ್ಠವಾದ ಕರಿತುರಗರಥಾದಿ ವಾಹನಗಳ ಮೇಲೇರಿ ಸಂಚರಿ ಸು ' ಸುಕುಮಾರಾ೦ಗನಾದ ನನ್ನ ಕುಮಾರನು ಸಿಂಹ ಶಾರ್ದೂಲ ಭಲಕ ಸೂಕರಾದಿ ಕೂರಜಂತುಗಳಿಂದ ಕೂಡಿದ ಮಹಾರಣ್ಯ ಮಧ್ಯದಲ್ಲಿ ಕಲ್ಲು ಮುಳ್ಳು ಹಳ್ಳ ತಿಟ್ಟುಗಳಿಂದ ಅಪಾಯಕರವಾದ ಕ ದಧ್ಯದಲ್ಲಿ ಬರಿಗಾಲುಗಳಿಂದ ಹೇಗೆ ಸಂಚ ರಿಸುವನು ? ದಿವ್ಯವಾದ ಭಕ್ಷ್ಯಭೋಜ್ಯಾದಿಗಳನ್ನು ಉಂಡು ಸುಖಿಸುತ್ತಿದ್ದ ನನ್ನ ಕಂದನು ಕಂದಮಲಾದಿಗಳನ್ನು ತಿಂದು ಹೇಗೆ ಜೀವಿಸುವನು ? ಅಮೂಲ್ಯವಾದ ಪೀತಾಂಬರವನ್ನು ಡುತ್ತಿದ್ದ ನನ್ನ ಕುಮಾರನು ಹೇಗೆ ನಾರಸೀರೆಯನ್ನು ಡುವನು ? ಅನರ್ಘವಾದ ನವರತ್ನಾಭರಣಗಳನ್ನು ಧರಿಸಿಕೊಳ್ಳುತ್ತಿದ್ದ ಕೋಮಲಾಂಗನಾದ ಬಾಲನು ಆಲದಂಟಿನಿಂದ ಒರಟಾಗಿ ಮಲಿನವಾದ ಜಡೆಗಳನ್ನು ಧರಿಸುವುದು ಹೇಗೆ ? ರತ್ನಮಯವಾದ ಮಂಚದ ಮೇಲೆ ಮೃದುವಾದ ಹಂಸತೂಲಿಕಾತಲ್ಪದಲ್ಲಿ ಸುಖವಾಗಿ ನಿದ್ರಿಸುತ್ತಿದ್ದ ನನ್ನ ಮುದ್ದು ಮಗನು ಕಾಡಿನಲ್ಲಿ ಕಲ್ಲುಗಳ ಮೇಲೂ ವ್ಯತ್ಯಸ್ತವಾದ ಭೂಮಿಯ ಮೇಲೂ ತರಗೆಲೆಗಳ ಹಾಸಿಗೆಯ ಮೇಲೂ ಹೇಗೆ ಮಲಗುವನು ? ಇಂಥ ಭಯಂಕರವಾದ ಮಾತುಗಳನ್ನಾಡುತ್ತಿರುವ ನಿನ್ನ ನಾಲಿಗೆಯ ಕೇಳುತ್ತಿರುವ ನನ್ನ ಕಿವಿಗಳೂ ಸೀಳಿಹೋಗುವುದಿಲ್ಲವಲ್ಲಾ ! ಎಂದು ಅನಾಥನಂತೆ ರೋದಿಸುತ್ತ ಹಾ ರಾಮ ಎಂದು ಹಂಬಲಿಸಿ ಕೈಕೇಯಿಯ ಕಾಲುಗಳ ಮೇಲೆ ಬಿದ್ದು ತಿರಿಗಿ ಮರ್ಧೆ ಹೊಂದಿ ದನು. ಅಷ್ಟರಲ್ಲಿಯೇ ಬೆಳಗಾಗಲು ಪುರೋಹಿತನಾದ ವಸಿಷ್ಠ ಮುನಿಯು ವಾಮದೇ ವಾದಿ ಮಹಾಮುನಿಜನಗಳೊಡನೆಯ ಶಿಷ್ಯಸಮೂಹದೊಡನೆಯ ಕೂಡಿದವನಾಗಿ ಪಟ್ಟಾಭಿಷೇಕದ ಸಾಮಗ್ರಿಗಳನ್ನು ತೆಗೆಯಿಸಿಕೊಂಡು ರಾಜನ ಅಂತಃಪುರದ ಬಾಗಿಲೆಡೆ ಗೈತಂದು ನಿಂತು ಅಲ್ಲಿ ರಾಜಪ್ರೀತಿಪಾತ್ರನಾದ ಸುಮಂತ್ರನೆಂಬ ಮಂತ್ರಿವರ್ಯನನ್ನು ನೋಡಿ--ಎಲೈ ಮಂತ್ರಿ ಶ್ರೇಷ್ಟನಾದ ಸುಮಂತ್ರನೇ ! ನೀನು ದಶರಥಭೂಪಾಲನ ಬಳಿಗೆ ಹೋಗಿ ಪವಿತ್ರವಾದ ಗಂಗಾದಿ ಸಕಲ ನದೀ ಜಲಗಳಿ೦ದಲೂ ಚತುಸ್ಸಮುದ್ರೋದ ಕಗಳಿಂದಲೂ ತುಂಬಲ್ಪಟ್ಟಿರುವ ಸುವರ್ಣಕಲಶಗಳೂ ಅತ್ತಿಯ ಮರದಿಂದ ಮಾಡಲ್ಪ ಟ್ಟಿರುವ ಭದ್ರಪೀಠವೂ ಸಕಲ ವಿಧಧಾನ್ಯಗಳೂ ನವರತ್ನಗಳೂ ನಾನಾ ವಿಧವಾದ ಔಷಧೀರಸಗಳೂ ಕ್ಷೀರ ದಧಿ ಮೃತ ಮಧು ಲಾಜಾ ದರ್ಭಾದಿಗಳೂ ಸೌಂದರ್ಯ ವತಿಯರಾದ ಎಂಟು ಮಂದಿ ಕನ್ನಿಕೆಯರೂ ಮದದಾನೆಯ ನಾಲ್ಕು ಕುದುರೆ ಗಳಿಂದ ಕೂಡಿ ಸಿದ್ಧವಾಗಿರುವ ದಿವ್ಯರಥವೂ ಹೊಸದಾಗಿ ಸಾಣೆ ಮಾಡಿದ ಖಡ್ಗವೂ ಧನುರ್ಬಾಣಗಳೂ ಪೂರ್ಣಿಮಾಚ೦ದ್ರನನ್ನು ಹೋಲುವ ಬೆಳು ಗೊಡೆಯ ಸುವ ರ್ಣದ ಗಿಂಡಿಗಳೂ ಚಿನ್ನದ ಸರಪಣಿಯಿಂದ ಕಟ್ಟಲ್ಪಟ್ಟು ದೂ ತೋರವಾದ ಹಿಳೆ