ಪುಟ:ಕುರುಕ್ಷೇತ್ರ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಖೀಬೋಧಿನಿ ಜೇಯವಾಗಿದೆಯೋ! ಇಲ್ಲಿಯ ಕಾವೇರಿಯ ಅಗಲವನ್ನು ನೋಡಿದರೆ ನಮ್ಮ ಪ್ರಾಂತ್ಯದ ನದಿ ಬರೀಕಾಲುವೆಗೆ ಸಮಾನ. ನಾವಿರುವ ಮಹಡಿ ಯ ಮೇಲೆ ಕೂತುಕೊಂಡರೆ ಸುತ್ತೂ ಎಷ್ಟು ದೂರ ನೋಡಿದರೂ ಸಮುದ್ರದ ಹಾಗೆ ನೀರು ಕಾಣತದೆ. ಯಜಮಾನರೂ ನಾನೂ ನಿನ್ನೆ ರಾತ್ರಿ ಬೆಳದಿಂಗಳಲ್ಲಿ ಈ ನದಿಯನ್ನು ನೋಡುತ ಊಟಕ್ಕೆ ಕೂತಿದ್ದೆವು. ಇನ್ನದರ ಆನಂದವನ್ನು ಏನೆಂದು ಹೇಳಲಿ? ನೀನೂ ನನ್ನ ಜತೆಗೆ ಸೇರಿದ್ದರೆ ಇನ್ನೆಷ್ಟು ಸಂತೋಷಪಡುತ್ತಿದ್ದೆನೋ ! ಬೇಗ ಹೊರಡಬೇಕೆಂದು ನನ್ನ ಖಾವಂದರು ತೊಂದರೆ ಮಾಡು ತಿದಾರೆ ; ಏನು ಮಾಡುವುದು ; ಪರಾಧೀನತೆಯಲ್ಲಿನ ಕವಿಗೊಂದು. ಮತ್ತೊಂದು ಸಲ, ಇಲ್ಲಿ ನೋಡಿದ ವಿಚಿತ್ರವಾದ ದೇವಾಲಯಗಳನ್ನು ವಿವರಿಸುತ್ತೇನೆ. ನಿನ್ನ ಕಂದ ಕಮಲೆಗೆ ನನ್ನನ್ನು ಜ್ಞಾಪಿಸಿ, ಊರೂರೂ ಅಲೆ ಯುತಿರುವ ನಿನ್ನ ಬಡಸ್ನೇಹಿತಳಿಗೆ ಕಷ್ಟ್ಯವನ್ನು ಬೇಗ ತಪ್ಪಿಸಿ, ನಿನ್ನ ಸವಿಾಪಕ್ಕೆ ಬರುವಂತೆ ಮಾಡಬೇಕೆಂದು ನಾಳೆ ಗೌರೀಪೂಜೆ ಮಾಡು ವಾಗ ಹರಸಿಕೊ. ಇದು ನಿನ್ನ ಪ್ರಿಯಂವದೆಯ ವಿಜ್ಞಾಪನೆ. ತಿರುಚನಾಪಳ್ಳಿ, ಭಾದ್ರಪದ ಶು|| ೧