ಪುಟ:ಕುರುಕ್ಷೇತ್ರ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ನೆಯ ಭಾಗ ಅರ್ಜಿಗಳು ಮತ್ತು ಸರ್ಕಾರ ಸಂಬಂಧವಾದ ಇತರ ಕಾಗದಗಳು. 25, ಕ್ಷೇಮಸಮಾಚಾರ ಮುಂತಾದ ಸಂಗತಿಗಳಲ್ಲಿ ಜನರು ಪರ ಸ್ಪರ ಬರೆದುಕೊಳ್ಳುವ ಕಾಗದಗಳಿಗೂ ಸರ್ಕಾರಕ್ಕೆ ಸಂಬಂಧಪಟ್ಟ ಕಾಗದಗಳಿಗೂ ಇರುವ ತಾರತಮ್ಯವೇನೆಂದರೆ, ಸಾಧಾರಣವಾಗಿ ಸರ್ಕಾ ರದ ವಿಷಯಗಳ ಕಾಗದ ಪತ್ರಗಳಲ್ಲಿ ವಿಶ್ವಾಸ ದಾಕ್ಷಿಣ್ಯ ಕೃತಜ್ಞತೆ ಮುಂತಾದ ಗುಣಗಳನ್ನು ತೋರ್ಪಡಿಸುವ ಅಥವಾ ಉಂಟುಮಾಡ ತಕ್ಕ ಆವಶ್ಯಕತೆ ಇರುವುದಿಲ್ಲ. ಆದ್ದರಿಂದ ಅವುಗಳಲ್ಲಿ ಸಾಧಾರಣವಾಗಿ ಎಷ್ಟು ಆವಶ್ಯಕವೋ ಅಷ್ಮನ್ನೇ ಬರೆಯಬೇಕು. ಅನೇಕ ವಿಷಯಗಳಲ್ಲಿ ಹೀಗೆಯೇ ನಡೆಯತಕ್ಕದ್ದೆಂದು ಕಾನೂನುಗಳಿಂದ ನಿರ್ಧರವಾಗಿರು ವುದು, ಇಂತಾ ಸಂದರ್ಭಗಳಲ್ಲಿ ಅವಕ್ಕೆ ತಕ್ಕ ಅಧಿಕಾರಗಳನ್ನು ಎಷ್ಟು ವಿನಯವಾಗಿ ಬೇಡಿಕೊಂಡರೂ, ಆ ನಿಯಮಗಳನ್ನು ಉಲ್ಲಂಘಿಸುವುದ ಕಿಲ್ಲ. ಮುಖ್ಯವಾಗಿ ಕೋರ್ಟುಗಳ ನಡವಳಿಕೆಗಳಲ್ಲಿ ಇದು ಸಂಪೂರ್ಣ ವಾಗಿಸಲ್ಲತಕ್ಕದ್ದು, ಕೆಲವು ಮುಲ್ಕಿ ವಿಷಯಗಳಲ್ಲಿ ಅಧಿಕಾರಿಗಳು ಸಮ ಯೋಚಿತವಾಗಿ ತಮ್ಮ ಇಚ್ಛಾನುಸಾರವಾಗಿ ಕೇಳಿಕೊಳ್ಳುವುವರಿಗೆ ಉಪ ಕಾರವನ್ನು ಮಾಡಬಹುದಾಗಿರುತ್ತದೆ. ಇಂತಾ ಸಂದರ್ಭಗಳಲ್ಲಿ ಅರ್ಜಿ ಯನ್ನು ಬರೆದುಕೊಳ್ಳುವುವರು ಈ ಉಪಕಾರಕ್ಕೆ ಅರ್ಹರೆಂದು ವಕ್ಕೆ ಪಡಿಸುವ ಹೆಚ್ಚು ಸಂಗತಿಗಳನ್ನು ಸ್ವಲ್ಪಮಟ್ಟಿಗೆ ಬರೆದುಕೊಳ್ಳಬಹು ದೆಂದು ತೋರುತ್ತದೆ, ಹೇಗೆಂದರೆ, ದಾವೆಗೆ ವಾಯಿದೆ ಮಾರಿಹೋಗಿರು ವಾಗ ಸಾಲವನ್ನು ಬರಮಾಡಿಕೊಳ್ಳಬೇಕೆಂಬುವುವನು ತಾನು ಬಹಳ ಬಡವನು ದೊಡ್ಡ ಸಂಸಾರಿ ಎಂದು ಅರ್ಜಿಯಲ್ಲಿ ಬರೆದುಕೊಂಡ ಮಾತ್ರ