ಪುಟ:ಕುರುಕ್ಷೇತ್ರ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಲೇಖ್ಯಬೋಧಿನಿ ಕೊನೆಯಲ್ಲಿ ಬರೆಯುವ ಮಾತುಗಳು. 17. ಮೊದಲು ಬರೆದಿರುವ ವಂದನೆಯ ಮಾತನ್ನೇ ಬರೆಯ ಬೇಕು, ಹೇಗೆಂದರೆ :- ಇಂತೀ ವಿಜ್ಞಾಪನೆ, ಇಂತೀ ಬಿನ್ನಹ ಇಂತೀ ವಿನಯಾರ್ಥ. ಇಂತೀ ಸಾಷ್ಟಾಂಗ ನಮಸ್ಕಾರಗಳು. ಇಂತೀ ಆಶಿರ್ವಾದಗಳು ............ಇತ್ಯಾದಿ. ಮೊದಲು ಹೆಸರು ಬರೆಯದಿದ್ದರೆ “ ರಾಮಯ್ಯನ ವಿಜ್ಞಾಪನೆ " • ರಾಮಶಾಸ್ತ್ರಿ ಯ ಆಶೀರ್ವಾದ' ಎಂದು ಮುಂತಾಗಿ ಕೊನೆಯಲ್ಲಿ ಬರೆ ಯಬೇಕು. ಮೊದಲೇ ಹೆಸರು ಬರೆದಿದ್ದರೆ ಇದು ಆವಶ್ಯಕವಲ್ಲ. ನಮ್ಮಲ್ಲಿ ಕೆಲವರು ಸರ್ಕಾರದ ಉದ್ಯೋಗ ಮುಂತಾದ್ದನ್ನು ಇವರು ತಮ್ಮ ಉದ್ಯೋಗದ ಹೆಸರನ್ನು ಹಾಕಿಕೊಳ್ಳುತ್ತಾರೆ, ಇದು ಗುರ್ತು ತಿಳಿಯದವರಿಗೆ ತಾವು ಇಂತವರೆಂದು ಗೊತ್ತಾಗಿ ತಿಳಿಸುವುದಕ್ಕೆ ಅಗತ್ಯ ವಾದಾಗ ತಪ್ಪಲ್ಲ, ತಿಳಿದಿರುವವರಿಗೆ ತಮ್ಮ ಕಸಬಿಗೆ ಸಂಬಂಧವಿಲ್ಲದ ಕ್ಷೇಮಸಮಾಚಾರದ ಕಾಗದಗಳಲ್ಲಿ ತಮ್ಮ ಅಧಿಕಾರದ ಹೆಸರುಗಳನ್ನು ಬರೆಯುವವರು, ತಮ್ಮ ಐಶ್ವರ್ಯವನ್ನೆಲ್ಲರಿಗೂ ತೋರಿಸಿಕೊಳ್ಳಬೇ ಕೆಂದು ಆಶಿಸುವ ಹೆಮ್ಮೆಗಾರರಿಗೆ ಸಮಾನರು. ಮೇಲಿನ ವಿಳಾಸ. 18. ಕಾಗದಗಳನ್ನು ಮಡಿಸುವುದು ಲಕೋಟನ್ನು ಹರಿಯು ವಾಗ ಕಾಗದದಲ್ಲಿ ಬರೆದಿರುವ ಭಾಗವು ಹರಿದುಹೋಗದಂತೆ ನೋಡಿ ಮಡಿಸಬೇಕು. ಈಗ ಪೋಸ್ಟಾಫೀಸಿಗೆ ಹಾಕುವ ಕಾಗದಗಳನ್ನೆಲ್ಲಾ ಅರ್ಧಾಣೆಯ ಲಕೋಟುಗಳಲ್ಲಿ ಹಾಕಿ ಕಳುಹಿಸುವುದು ಬಹಳ ಒಳ್ಳದು. ಲಕೋಟಿನ ಮೇಲೆ ಎಡಗಡೆ ಮೂಲೆಯಲ್ಲಿ ಕ್ಷೇಮ' ಎಂಬ ಮಾತು, ಮರಣಸಮಾಚಾರದ ಕಾಗದಗಳಿಗೆ ವಿನಾ, ಮಿಕ್ಕವುಗಳಿಗೆಲ್ಲಾ ಬರೆಯ