ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

484 ಶ್ರೀಮದ್ಭಾಗವತವು [ಅಧ್ಯಾ, ೨೯. ಕೋರಲಾರರು. ಆದರೆ ಅವರಿಗೆ ನಿನ್ನಿಂದಾಗುವ ಬೇರೆ ಉಪಕಾರ ವೇನು” ಎಂದು ಕೇಳುವೆಯಾ ? ಓ ಈಶಾ ! ಹೊರಗೆ ಅಚಾತ್ಯರೂಪದಿಂ ದಲೂ, ಒಳಗೆ ಅಂತರಾತ್ಮಸ್ವರೂಪದಿಂದಲೂ ಇದ್ದು, ನೀನೇ ಸಮಸ್ತ ಚೇತನರಿಗೂ ಅಶುಭಗಳೆಲ್ಲವನ್ನೂ ನೀಗಿಸಿ,ನಿನ್ನ ಯಾಥಾತ್ಮವನ್ನು ಪ್ರಕಾ ಶಗೊಳಿಸತಕ್ಕವನು. ಇಂತಹ ನಿನ್ನ ಉಪಕಾರವನ್ನು ಬಲ್ಲವರಾದ ಬ್ರಹ್ಮ ಜ್ಞಾನಿಗಳು, ಆ ನಿನ್ನ ಸ್ಮರಣಕಾಲದಲ್ಲೆಲ್ಲಾ ಉತ್ಕಟಾನಂದಪರವಶ ರಾಗುವರು. ನಿನ್ನಿಂದ ಪಡೆದ ಉಪಕಾರಕ್ಕೆ, ಅವರು ಬ್ರಹ್ಮಾಯುಸ್ಸಿನ ಕಾಲದಲ್ಲಿಯೂ ಪ್ರತ್ಯುಪಕಾರಮಾಡಿ ತೀರಿಸಲಾರರು" ಎಂದನು. ಓ ಪರೀಕ್ಷಿದ್ರಾಜಾ : ಲೋಕವೆವನ್ನೂ ತನ್ನ ಲೀಲೆಯಿಂದ ಆಡಿಸತಕ್ಕವ ನಾಗಿಯೂ, ತ್ರಿಮೂರ್ತಿರೂಪದಿಂದ ಸೃಷ್ಟಿಸಿತಿಸಂಹಾರಗಳನ್ನು ನಡೆಸ ತಕ್ಕವನಾಗಿಯೂ, ಬ್ರಹ್ಮಾದಿಗಳಿಗೂ ಈಶ್ವರನಾಗಿಯೂ ಇರುವ ಕೃಷ್ಣನು, ಉದ್ದವನು ಭಕ್ತಿ ಪೂರೈಕವಾಗಿ ಪ್ರಶ್ನೆ ಮಾಡಿದುದನ್ನು ಕೇಳಿ ಸಂತೋಷಗೊಂಡು,ಪ್ರೇಮಪೂರಕವಾದ ಮಂದಹಾಸದೊಡನೆ ಹೀಗೆಂದು ಹೇಳುವನು. ಭಲೆ ! ಶಹಬಾಸು ! ಉದ್ದವಾ ! ಸೀನು ಸಾರವತ್ತಾದ ಪ್ರಶ್ನೆ ಯನ್ನು ಕೇಳಿದೆ! ಯಾವ ಮಾರ್ಗವನ್ನು ಶ್ರದ್ಧೆಯಿಂದನುಸರಿಸುವ ಮನು ಹೈನು, ದುರ್ಜಯವಾದ ಮೃತ್ಯುವನ್ನೂ ಸುಲಭವಾಗಿ ಜಯಿಸಬಹುದೋ, ಅಂತಹ ಭಾಗವತಧರಗಳೆಲ್ಲವನ್ನೂ ನಿನಗೆ ತಿಳಿಸುವೆನು ಕೇಳು ! ಅವುಗಳ ಕ್ರಮವೇನೆಂದರೆ, ನನ್ನಲ್ಲಿ ಭಕ್ತಿಯನ್ನು ಸಾಧಿಸಬೇಕೆಂಬ ಉದ್ದೇಶವುಳ್ಳ ವನು, ತಾನು ನಡೆಸತಕ್ಕ ವರ್ಣಾಶ್ರಮಧಮ್ಮಗಳೆಲ್ಲವನ್ನೂ, ನನ್ನ ಆರಾ ಧನರೂಪವೆಂದೇ ಮನಸ್ಸಿನಲ್ಲಿ ನೆನೆಸುತ್ತ, ತನ್ನ ಸತ್ವವಿಧಮನೋವ್ಯಾ ಪಾರಗಳನ್ನೂ ನನ್ನಲ್ಲಿಯೇ ಅರ್ಪಿಸಿಡಬೇಕು. ನನ್ನ ಭಕ್ತರು ವಿಶೇಷವಾಗಿ ನೆಲೆಸಿರತಕ್ಕ ಪುಣ್ಯಸ್ಥಳಗಳನ್ನೇ ಆಶ್ರಯಿಸುತ್ತ, ದೇವಾಸುರಮನುಷ್ಯರಲ್ಲಿ ನನ್ನ ಭಕ್ತರಾದವರ ನಡತೆಗಳನ್ನೇ ಅನುಸರಿಸುತ್ತಿರಬೇಕು. ಶಕ್ತಿಯಿದ್ದರೆ ತಾನೊಬ್ಬನೇ ಆಗಲಿ, ಇಲ್ಲವೇ ಇತರರೊಡನೆ ಸೇರಿಯಾಗಲಿ, ನನ್ನ ಮಹೋತ್ಸವಗಳನ್ನೂ, ಜಾತ್ರೆಗಳನ್ನೂ ನೃತ್ಯ ಗೀತ ವಾದ್ಯಾದಿ ವೈಭವಗ ಕೊಡನೆಯೂ, ಇತರ ರಾಜೋಪಚಾರಗಳೊಡನೆಯೂ ನಡೆಸಬೇಕು !