ಪುಟ:ಕಥಾಸಂಗ್ರಹ ಸಂಪುಟ ೨.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ _51 ವಿಯೋಗವಾಗುವುದೆಂಬ ದುಃಖದಿಂದ ಪ್ರಾಣಿಗಳನ್ನು ಬಿಡುವವನಾಗಿದ್ದಾನೆ. ಪ್ರಾಜ್ಞಳಾದ ನೀನು ಇಂಥಾ ವೇಳೆಯಲ್ಲಿ ಹೆಚ್ಚಾದ ಕಷ್ಟ ವ್ಯಥಾದುಃಖಗಳಲ್ಲಿ ತಗುಲಿ ವಿಚಾರಗೆಟ್ಟಿರುವ ಆತನಿಗೆ ಹಿತಚಿಂತಕಳಾಗಿ ಧೈರ್ಯವನ್ನೂ ನೀವೇಕವನ್ನೂ ಹೇಳು ತಿರುವವಳಾಗಿ ದುಃಖನಮಾಧಾನವನ್ನು ಮಾಡುತ್ತ ಇಲ್ಲಿದ್ದರೆ ನಾನು ಕಾಡಿನಲ್ಲಿ ಹದಿನಾಲ್ಕು ಸಂವತ್ಸರಗಳನ್ನು ಹದಿನಾಲ್ಕು ದಿನಗಳನ್ನೊ ಎಂಬಂತೆ ಕಳೆದು ತಿರುಗಿ ಶೀಘ್ರವಾಗಿ ನಿಮ್ಮ ಸನ್ನಿಧಾನಕ್ಕೆ ಬಂದು ನಿಮ್ಮ ನ್ನು ವಿಶೇಷವಾಗಿ ಸಂತೋಷಪಡಿ ಸುವೆನು. ಸ್ತ್ರೀಯರಿಗೆ ಪತಿಯೇ ಪರದೇವತೆಯ ಪ್ರಭುವೂ ಆಗಿದ್ದಾನೆ. ಇಂಥ ಆತನು ಜೀವಿತನಾಗಿರುವಲ್ಲಿ ನಿನಗೇನು ಕಡಮೆ ? ಮತ್ತು ಭರತನು ಧರ್ಮಿಷ್ಟನೂ ಸರ್ವಭೂತಪ್ರಿಯನೂ ಭಾತೃವತ್ಸಲನೂ ಆಗಿದ್ದಾನೆ ಆತನು ನಿನ್ನ ವಿಷಯದಲ್ಲಿ ಬಹಳ ಭಕ್ತಿಯಿಂದಲೂ ಗೌರವದಿಂದಲೂ ನಡೆದುಕೊಳ್ಳುವನು. ಎಲೈ ತಾಯಿಯೇ ! ವಿಶೇಷವಾದ ಮಾತುಗಳಿಂದ ಪ್ರಯೋಜನವೇನು ? ನಾನು ವನದಲ್ಲಿ ಹದಿನಾಲ್ಕು ಸಂವತ್ಸರಗಳ ವರೆಗೂ ಸುಖವಾಗಿದ್ದು ತಿರಿಗಿ ನಿನ್ನ ಸನ್ನಿಧಾನಕ್ಕೆ ಬರುವ ಹಾಗೆ ನೀನು ಪುಣ್ಯದಾಯಕವಾದ ಸತಿಶುಕ್ರೂಷೆಯನ್ನೂ ವ್ರತಹೋಮಾದಿಗಳನ್ನೂ ದಾನ ಧರ್ಮಗಳನ್ನೂ ದೇವತಾರ್ಚನೆಗಳನ್ನೂ ಮಾಡುತ್ತ ನನ್ನ ಬರುವಿಕೆಯನ್ನೇ ನಿರೀಕ್ಷಿಸಿ ಕೊಂಡು ಕಾಲವನ್ನು ಕಳೆಯುತ್ತಿದ್ದರೆ ಅನಂತರದಲ್ಲಿ ಸಕಲವಿಧ ಸುಬಸಂತೋಷ ಗಳನ್ನೂ ಅನುಭವಿಸುತ್ತ ನಿಶ್ಚಿಂತೆಯಿಂದಿರುವೆ. ಮತ್ತು ಮಹಾರಾಜನಾಗುವ ಭರತನಲ್ಲಿ ಯಾವಾಗಲೂ ಅಪ್ರಿಯವಾದ ಮಾತುಗಳನ್ನಾಡದೆ ನನ್ನಲ್ಲಿ ಪುತ್ರವಾತ್ಸಲ್ಯವನ್ನಿಟ್ಟಿ ರುವಂತೆ ಆತನ ಇಟ್ಟು ಕೊಂಡಿರುವವಳಾಗು, ಬುದ್ಧಿಶಾಲಿಗಳು ತಮ್ಮ ವಿಪತ್ತಾ ಲದಲ್ಲಿ ಯಾರಿಂದ ಏನುಂಟಾದಾಗೂ ಅದನ್ನೆಲ್ಲಾ ಸಹಿಸಿಕೊಳ್ಳುವ ತಾಳ್ಮೆಯಿಂದಿರೆ ತಕ್ಕುದು ಸ್ವಾಭಾವಿಕವಲ್ಲವೆ ? ಎಂದು ಬಹು ವಿಧವಾಗಿ ಹೇಳಿದನು. ಈ ಪ್ರಕಾರವಾಗಿ ನಯನೀತಿಭರಿತವಾದ ಮಗನ ಮಾತುಗಳನ್ನು ಕೇಳಿ ಒಡಂ ಬಟ್ಟರೂ ಶೋಕಾರ್ತಳ- ದ ಕೌಸಲ್ಯಯು ರಾಮನನ್ನು ನೋಡಿ ಎಲೈ ಕಂದಾ ! ನಿನ್ನ ತಂದೆಯ ಆಜ್ಞೆಯಿಂದ ವನವಾಸದಲ್ಲಿ ನಿಶಿ ತಬುದ್ದಿ ಯುಳ್ಳವನಾಗಿರುವ ನಿನ್ನನು ತಡೆಯುವುದಕ್ಕೆ ನನಗೆ ಶಕ್ತಿ ಸಾಲದು. ಇದೆಲ್ಲವೂ ಆಘಟನ ಘಟನ ಸಮರ್ಥನಾದ ಭಗವಂತನ ಸಂಕಲ್ಪವು. ಇದನ್ನು ಮಾರಿ ನಡೆಯುವುದಕ್ಕೆ ಯಾರಿಗೆ ತಾನೆ ಸಾಧ್ಯವಾ ಗುವುದು ? ಇಲ್ಲವು. ಅದು ಕಾರಣ ಹೋಗು. ಮಗನೇ ನಿನಗೆ ಮಂಗಳವಾಗಲಿ. ನನ ವಾಸದಲ್ಲಿ ನಿಯುಕ್ತವಾದ ದಿನಗಳನ್ನೆಲ್ಲಾ ಕಳೆದು ತಂದೆಯ ಆಜ್ಞೆಯನ್ನೆಲ್ಲಾ ನೆರೆ ವೇರಿಸುವುದರಿಂದ ಕೃತಾರ್ಥನಾಗಿ ಬಂದ ನಿನ್ನನ್ನು ನೋಡುವುದರಿಂದ ಪರಮ ಸಂತೋಷವನ್ನು ಹೊಂದುವೆನು ಎಂದು ಹೇಳಿ ಮಗನಿಗೆ ಮಂಗಳಾಶಾಸನವನ್ನು ಮಾಡುವುದಕ್ಕಾಗಿ ಶುದ್ದ ಜಲದಿಂದ ಸ್ನಾನಮಾಡಿ ಭೌತವಸ್ತ್ರಗಳನ್ನು ಟ್ಟುಕೊಂಡು ಶುದ್ಧಾಚಮನವನ್ನು ಮಾಡಿ ಪೂರ್ವದಿಟ್ಟುಬಿಯಾಗಿ ಕುಳಿತು ತ್ರಿಜಗತೈವ್ಯನಾದ ಭಗವಂತನನ್ನು ಭಯಭರಿತ ಭಕ್ತಿಭಾವದಿಂದ ಧ್ಯಾನಿಸಿ ಸ್ತೋತ್ರಗಳನ್ನು ಸಮರ್ಪಿಸಿ ಎಲೈ ದಿರ್ಘಾಯುಷ್ಯಂತನಾದ ಪುತ್ರನೆ ! ನೀನು ಧೈರ್ಯದಿಂದಲೂ ನಿಯಮ