ಪುಟ:ಕಥಾಸಂಗ್ರಹ ಸಂಪುಟ ೨.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಗ್ರೀವಸಖ್ಯದ ಕಥೆ - ಆಗ ಲಕ್ಷ್ಮಣನು ಅಣ್ಣನ ಅಪ್ಪಣೆಯ ಪ್ರಕಾರ ಧನುರ್ಬಾಣಗಳನ್ನು ತೆಗೆದು ಕೊಂಡು ಕಿಂಧಾ ಪಟ್ಟಣದ ಹೆಬ್ಬಾಗಿಲಿಗೆ ಹೋಗಿ ನಿಂತು ಬಿಲ್ಲಿಗೆ ಹೆದೆಯನ್ನು ಏರಿಸಿ ಝೇಂಕಾರವನ್ನುಂಟುಮಾಡಲು ಪ್ರಳಯ ಕಾಲದ ಶಿಡಿಲಿಗೆ ಸರಿಯಾದ ಲಕ್ಷ್ಮಣನ ಧನುಷ್ಠಾಂಕಾರಧ್ವನಿಯನ್ನು ಕೇಳಿ ಸುಗ್ರೀವನು ಗಡಗಡನೆ ನಡುಗಿ ಹನುಮ ನಳ ನೀಲ ಜಾಂಬವಂತ ಸುಷೇಣ ಇವರೇ ಮೊದಲಾದ ಮಂತ್ರಿಗಳೊಡನೆ ಕೂಡಿ ಬಂದು ಲಕ್ಷ ಣನಿಗೆ ನಮಸ್ಕರಿಸಿ- ಎಲೈ ಲಕ್ಷಣನೆ ! ಶ್ರೀರಾಮಚಂದ್ರನು ನನಗೆ ಮಾಡಿದ ಉಪ ಕಾರವನ್ನು ಮರೆತು ಈ ವರೆಗೂ ಕೃತಜ್ಞತೆಯಿಂದಿರಲಿಲ್ಲ. ಇದೋ ಹಿಮಾಲಯ ನಿಷಧ ಗಂಧಮಾದನ ಮೇರು ವಿಂಧ್ಯಾದಿ ಪರ್ವತಗಳಲ್ಲೂ ಸಮುದ್ರ ಪ್ರಾಂತ್ಯಗಳಲ್ಲೂ ವನಸ್ಥಳಗಳಲ್ಲೂ ಇದ್ದ ಸರ್ವಕಪಿ ಸೇನಾಪತಿಗಳನ್ನೂ ರಾಮ ಕಾರ್ಯಾರ್ಥವಾಗಿ ಕರಿ ಸಿದ್ದೇನೆಂದು ಹೇಳಿ ಲಕ್ಷ್ಮಣನಿಗೆ ಸತ್ಕಾರವನ್ನು ಮಾಡಿ ಆತನೊಡನೆ ಕೂಡಿ ಹೊರಟು ರಾಮನ ಬಳಿಗೆ ಬಂದು ಆತನಿಗೆ ನಮಸ್ಕರಿಸಿದನು. ರಾಮನು ಸುಗ್ರೀವನನ್ನು ತೆಗೆ ದಪ್ಪಿಎಲೈ ಪ್ರಿಯಸಖನೇ ! ಮುಂದೆ ಮಾಡಬೇಕಾದ ರಾಜಕಾರ್ಯ ವಿಷಯವಾಗಿ ಯಾವ ಯೋಚನೆಯನ್ನು ಮಾಡಿದ್ದೀಯೇ ? ಎಂದು ಕೇಳಲು ಸುಗ್ರೀವನು ಕೈಗಳನ್ನು ಮುಗಿದು ನಿಂತುಕೊಂಡು ಸ್ವಾಮಿ ರಾಜೇಂದ್ರನೆ ! ಸಕಲ ಕಪಿಸೇನಾನಾಯಕರು ತಮ್ಮ ತಮ್ಮ ಸೇನೆಗಳೊಡನೆ ಕೂಡಿ ಸನ್ನದ್ದರಾಗಿ ಬಂದು ನಿನ್ನ ಅಪ್ಪಣೆಯನ್ನು ನಿರೀ ಕ್ಷಿಸಿಕೊಂಡಿದ್ದಾರೆ. ಅವರೆಲ್ಲರ ಗಣತಿಯನ್ನು ಪರಾಮರ್ಶಿಸಿ ಚಿತ್ರಕ್ಕೆ ಒಪ್ಪಿಗೆಯಾದ ರೀತಿಯಿಂದ ಅಪ್ಪಣೆ ಕೊಡಿಸಬೇಕೆಂದು ವಿಜ್ಞಾವಿಸಿ ಸರ್ವಸೇನಾಪತಿತ್ವವನ್ನು ಹೊಂದಿ ರುವ ಅಗ್ನಿಯ ಮಗನಾದ ನೀಲನ ಮುಖವನ್ನು ನೋಡಲು ಆಗ ಆತನು ಶ್ರೀರಾಮಚಂದ್ರನಿಗೆ ಗಣತಿಯನ್ನೂ ಪ್ಪಿಸುವುದಕ್ಕಾಗಿ ತಮ್ಮ ತಮ್ಮ ಸೇನೆಗಳೊಡನೆ ಬರುವಂತೆ ಸರ್ವಸೇನಾಪತಿಗಳಿಗೂ ಆಜ್ಞಾಪಿಸಿದನು. ಆ ಬಳಿಕ ನದೀಪ್ರದೇಶಗಳಲ್ಲೂ ಪರ್ವತ ಪ್ರದೇಶಗಳಲ್ಲೂ ಕಡಲ ದಡಗಳಲ್ಲೂ ವನಸ್ಥಳಗಳಲ್ಲೂ `ವಾಸಮಾಡುತ್ತಿದ್ದವುಗಳೂ ಬೆಟ್ಟದಂತೆ ದೊಡ್ಡ ಮೈಯುಳ್ಳುವು ಗಳೂ ಕರವಾದ ಹಲ್ಲುಗಳುಳ್ಳುವುಗಳೂ ಬಾಲಸೂರ್ಯನೋಪಾದಿಯಲ್ಲಿ ಕೆಂಪುಬ ಣ್ಣ ವುಳುವುಗಳೂ ತಾವರೆಗಳ ಕೇಸರಗಳಂತೆ ಹೊಂಬಣ್ಣವುಳ್ಳುಗಳೂ ಚಂದ್ರನಂತೆ ಬಿಳುವಳ್ಳುವುಗಳೂ ಆಗಿರುವ ಹತ್ತು ಕೋಟಿ ಕಪಿಗಳಿಂದ ಕೂಡಿದ ಶತಬಲಿ ಎಂಬ ಕಪಿನಾಯಕನು ಬಂದು ರಾಮನನ್ನು ಕಂಡು ವಂದಿಸಿ ತನ್ನ ಸೇನೆಗಳನ್ನು ತೋರಿಸಿ ದನು. ಆ ಬಳಿಕ ತಾರೆಯ ತಂದೆಯಾದ ಸುಷೇಣನೆಂಬುವನು ಮೇರುಮಂದರಪರ್ವತ ಗಳಿಗೆ ಸಮಾನಗಳಾದ ಕಪಿಗಳಿಂದೊಪ್ಪುತ್ತಿರುವ ಅನೇಕ ಕೋಟಿ ಸೇನೆಗಳನ್ನು ತಂದು ರಾಮಚಂದ್ರನಿಗೆ ಗಣಿತಿಯೊಪ್ಪಿಸಿದನು. ಆ ಮೇಲೆ ರುಮೆಯ ತಂದೆಯ ಸುಗ್ರಿವನ ಮಾವನೂ ಆದ ರುಮಣನೆಂಬ ಸೇನಾಪತಿಯು ಅನೇಕ ಕೋಟಿ ಕಪಿಸೇನೆಗಳನ್ನು ತೆಗೆದು ಕೊಂಡು ಬಂದು ರಾಘವನಿಗೆ ಕಾಣಿಸಿದನು. ಹನುಮಂತನ ತಂದೆಯಾದ ಕೇಸರಿಯೆಂಬ ಕಪಿನಾಯಕನು ತನ್ನ ಅಗಣ್ಯವಾದ ಕಪಿಸೇನೆಗಳನ್ನು ಕರೆತಂದು ರಾಮಚಂದ್ರನ ಮುಂದೆ ನಿಲ್ಲಿಸಿದನು. ಆ ಬಳಿಕ ಮಹಾ ಪರಾಕ್ರಮಶಾಲಿಯಾದ 3