ಪುಟ:ಕಥಾಸಂಗ್ರಹ ಸಂಪುಟ ೨.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಗ್ರೀವಸಖ್ಯದ ಕಥೆ ಶ್ರಮಗಳನ್ನು ಪರಿಹರಿಸುತ್ತಿದ್ದ ವೃಕ್ಷಗಳ ಎಲೆಗಳನ್ನೆಲ್ಲಾ ಉದುರಿಸಿ ಅವುಗಳನ್ನೂ ಪೂರ್ಣಶೂನ್ಯಗಳನ್ನಾಗಿ ಮಾಡುತ್ತ ಲೋಕಕಂಟಕನಾಗಿದ್ದ ಹಿಮಂತರ್ತುವೆಂಬ ಅರಸನನ್ನು ಜಯಿಸಿ ಓಡಿಸಿ ಈ ವನರಾಜ್ಯದಲ್ಲಿ ಪಟ್ಟಾಭಿಷಿಕ್ತನಾದನೋ ಎಂಬ ಹಾಗೆ ಈ ಕಾಲವು ಕಲ್ಯಾಣದಾಯಕವಾಗಿರುವುದು. ಇದೋ ಇಲ್ಲಿ ನೋಡು. ಮಲ್ಲಿಕಾಕುಸುಮಗಳಲ್ಲಿ ಮಕರಂದಪಾನವನ್ನು ಮಾಡಿ ಮದಿಸಿದ ಶೃಂಗಗಳು ಮಾಡುತ್ತಿರುವ ಝಂಕಾರಧ್ವನಿಯು ಲೋಕತ್ರಯ ಜಯೋದ್ಯತನಾದ ಮಾರಮಹಾ ವೀರನ ಜೈತ್ರಯಾತ್ರಾಸೂಚಕವಾದ ಮಹಾಶಂಖಧ್ಯಾನದಂತಿರುವುದು. ತಮಗೆ ರೆಕ್ಕೆ ಪುಕ್ಕಗಳು ಬೆಳೆದು ಹಾರುವ ಶಕ್ತಿಯುಂಟಾಗುವ ಪರ್ಯ೦ತರವೂ ಕಾಗೆಗಳೊ ಡನೆ ಸದ್ದು ಮಾಡದೆ ಇದ್ದು ಈಗ ಉಲ್ಲಾಸದಿಂದ ಪಂಚಮಸ್ವರವನ್ನು ಮಾಡು ತಿರುವ ಕೋಗಿಲೆಗಳು ಸಮಯ ಬರುವವರೆಗೂ ಗುಟ್ಟಾಗಿದ್ದು ಆ ಮೇಲೆ ತಮ್ಮನ್ನು ತೋರ್ಪಡಿಸಿಕೊಳ್ಳುವ ಕಾರ್ಯಸಾಧಕರಾದ ನಿಯೋಗಿ ಪುರುಷರನ್ನು ಹೋಲುತ್ತಿರು ವುವು. ಮಾವಿನ ಮರಗಳೆಂಬ ಮೇಘಗಳು ಎಳೆದಳಿರೆಂಬ ಮಿಂಚುಗಳಿಂದಲೂ ಪಿಕ ಧ್ವನಿಯೆಂಬ ಗುಡುಗಿನಿಂದಲೂ ಕೂಡಿ ಹೂವುಗಳೆಂಬ ಆನೆಕಲ್ಲುಗಳನ್ನು ಸುರಿಸುತ್ತ ಮಕರಂದರಸವೆಂಬ ವೃಷ್ಟಿಯನ್ನು ಕರೆಯುತ್ತಿರುವುವು. ಎಡೆಯಿಲ್ಲದಂತೆ ತುಂಬಿರುವ ಪುಷ್ಪಗಳಿಂದ ಕೂಡಿದ ಅಶೋಕವೃಕ್ಷಗಳು ಮನ್ಮಥನ ವಿಜಯಪ್ರಯಾಣದಲ್ಲಿ ಹೊಡೆದ ಕೆಂಪುಬಟ್ಟೆಯ ಗುಡಾರಗಳೊ ಎಂಬ ಹಾಗೆ ಪ್ರಕಾಶಿಸುತ್ತಿವೆ. ಪರಿಪಕ್ವವಾದ ಫಲ ಗಳಿಂದ ಒಪ್ಪುತ್ತಿರುವ ನೇಗಿಲು ಮರಗಳಲ್ಲಿ ಬಂದು ಕೂತಿರುವ ಗಿಣಿಗಳ ಕೊಕ್ಕುಗ ಇನ್ನು ಮುತ್ತುಗದ ಹೂವುಗಳೆಂದು ಭ್ರಮಿಸಿ ಆರಡಿಗಳು ಬಂದು ಅವುಗಳ ಮೇಲೆ ಬೀಳುತ್ತಿರಲು ಗಿಣಿಗಳು ನೇರಿಲು ಹಣ್ಣುಗಳೆಂದು ಭ್ರಾಂತಿಪಟ್ಟು ತಮ್ಮ ಕೊಕ್ಕುಗ ಳಿಂದ ಅವುಗಳನ್ನು ಕುಟುಕುತ್ತಿರುವುವು. ಬಾಯಿ೦ದ ಹೇಳದೆ ಕಾರ್ಯದಲ್ಲಿ ಉಪ ಕಾರವನ್ನು ಮಾಡಿ ತೋರಿಸುವ ಸತ್ಪುರುಷರಂತೆ ವಿಶೇಷವಾಗಿ ಹೂವುಗಳನ್ನು ತೋರ್ಪ ಡಿಸದೆ ಮಾಗಿ ಬಿರಿದು ಸುಗಂಧವನ್ನು ಬೀರುತ್ತಿರುವ ಬೃಹತ್ಸಲಗಳನ್ನು ಬುಡದಿಂದ ತುದಿಯ ವರೆಗೂ ಧರಿಸಿಕೊಂಡಿರುವ ಹಲಸಿನ ಮರಗಳು ವಿರಾಜಿಸುತ್ತಿರುವುವು. ಹೊಂಬಾಳೆಗಳಿಂದಲೂ ಹರಳುಗಳಿ೦ದಲೂ ಕುರುಬೆಗಳಿಂದಲೂ ಎಳೆನೀರುಗಳಿಂದಲೂ ಮೋತೆಗಾಯಗಳಿಂದಲೂ ತಳಲುಗಳಿಂದಲೂ ಕೂಡಿ ಮನೋಹರವಾಗಿರುವ ಕೆಂದೆಂ ಗಿನ ಮರಗಳು ಸ್ವರ್ಗಲೋಕದ ನಂದನೋದ್ಯಾನದಲ್ಲಿರುವ ಕಲ್ಪವೃಕ್ಷಗಳಿಗೆ ತಮ್ಮ ಲೋಕೋತ್ತರವಾದ ಫಲರೂಪ ಸೌಭಾಗ್ಯವನ್ನು ತೋರಿಸಿ ಅವುಗಳನ್ನು ನಾಚಿಸಬೇ ಕೆಂದು ಹೊರಟಿರುವುವೋ ಎಂಬಂತೆ ಅತ್ಯುನ್ನತವಾಗಿ ಬೆಳೆದಿರುವುವು. ಸರಸ್ಸುಗಳು ತಾವರೆ ಕನ್ನೈದಿಲೆ ಕಲಾರ ಈ ಮೊದಲಾದ ಹೂವುಗಳ ಮಕರಂದರಸಗಳಿಂದ ಬೆರೆ ದುದರಿಂದ ಸುಗಂಧ ಜಲಗಳಿಂದ ಕೂಡಿದವುಗಳಾಗಿ ವಸಂತರಾಜನು ತನ್ನ ಅಂತಃ ಪುರಸ್ತ್ರೀಯರೊಡನೆ ಜಲಕ್ರೀಡೆಯಾಡುವ ಸ್ಥಳಗಳೋ ಎಂಬಂತಿರುವುವು. ಮಾನಸ ಸರಸ್ಸನ್ನು ಬಿಟ್ಟು ಕಮಲಸಮೃದ್ಧಿ ಯಿಂದ ಮೆರೆಯುತ್ತಿರುವ ಇಲ್ಲಿನ ಪದ್ಮಾಕರಗಳಿಗೆ ಬಂದು ಆನಂದಿಸುತ್ತಿರುವ ಹಂಸಪಕ್ಷಿಗಳು ಬಡವರಾದ ಅರಸುಗಳನ್ನು ಬಿಟ್ಟು ವಿಶ್ವ y