ಪುಟ:ಕಥಾಸಂಗ್ರಹ ಸಂಪುಟ ೨.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ ೪ ನೆಯ ಭಾಗ ರಾಮಾಯಣಾದಿ ಗ್ರಂಥಗಳಿಂದ ಸಂಗ್ರಹಿಸಿದ ಕಥೆಗಳು 1. RAVANA'S CONQUEST OF THE UNIVERSE. ೧. ರಾವಣನ ದಿಗ್ವಿಜಯವು. ಒಂದಾನೊಂದು ಕಾಲದಲ್ಲಿ ಸನಕ ಸನಂದನ ಸನತ್ಕುಮಾರನೇ ಮೊದಲಾದ ಮಹ ರ್ಮಿಗಳು ಲಕಿಪತಿಯಾದ ನಾರಾಯಣನನ್ನು ಸೇವಿಸುವುದಕ್ಕಾಗಿ ವೈಕು೦ಠಲೋ ಕವನ್ನೆ ಆಯ್ಕೆ ಆ ಮಹಾತ್ಮನ ಸನ್ನಿಧಿಯನ್ನು ಕುರಿತು ಹೋಗುತ್ತಿರಲು ಆರಮನೆಯ ದ್ವಾರಪಾಲಕರಾದ ಜಯವಿಜಯರು--ನಮ್ಮೊಡೆಯನ ಅಪ್ಪಣೆಯಿಲ್ಲದೆ ಒಳಗೆ ಪ್ರವೇ ಶಿಸಕೂಡದೆಂದು ತಡೆದುದರಿಂದ ಆ ಋಷಿಗಳು ಬಹು ಕುಪಿತರಾಗಿ-- ಅಹಂಕಾರಿಗ ಳಾದ ಎಲೈ ದೌವಾರಿಕರೇ ! ನೀವು ಭೂಲೋಕದಲ್ಲಿ ರಾಕ್ಷಸರಾಗಿ ಹುಟ್ಟಿರಿ ಎಂದು ಶಾಪವನ್ನೀಯಲು ಆ ಮೇಲೆ ಆ ಜಯವಿಜಯರು ಭಯಭ್ರಾಂತರಾಗಿ ಆ ಯೋಗಿಗ ಳನ್ನು ಒಳಗೆ ಬಿಟ್ಟರು. ಆಗ ಅವರು ಒಳಪೊಕ್ಕು ಮಹಾವಿಷ್ಣುವನ್ನು ಸೇವಿಸಿ ಅಲ್ಲಿಂದ ಹೊರಟು ತಮ್ಮ ನಿವಾಸಸ್ಥಾನವಾದ ಸತ್ಯಲೋಕವನ್ನು ಕುರಿತು ತೆರಳಿದರು. ತರು ವಾಯ ಜಯವಿಜಯರು ಚಿಂತಾಕ್ರಾಂತರಾಗಿ ವಿಷ್ಣುವಿನ ಬಳಿಗೆ ಹೋಗಿ ದೈನ್ಯದಿಂದ ಕೂಡಿದವರಾಗಿ ತಮಗೆ ಬಂದೊದಗಿದ ಮುನಿಶಾಪವೃತ್ತಾಂತವನ್ನು ಹೇಳಿಕೊಂಡು ಬಹಳವಾಗಿ ದುಃಖಿಸಲು ವಿಷ್ಣುವು ಸ್ವಲ್ಪ ಕಾಲ ಯೋಚಿಸಿ ಅವನ್ನು ಕುರಿತು-ಎಲೈ ಜಯ ವಿಜಯರಿರಾ ! ಆ ಮುನೀಂದ್ರರ ಶಾಪವು ಅನುಭವದಿಂದಲ್ಲದೆ ಅನ್ಯಥಾ ಕ್ಷಯ