ಪುಟ:ಕಥಾಸಂಗ್ರಹ ಸಂಪುಟ ೨.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

54 ಕಥಾಸಂಗ್ರಹ-೪ ನೆಯ ಭಾಗ ವುದನ್ನು ನೋಡಿ ನಾನು ಹೇಗೆ ಸಹಿಸಲಿ ? ಬೆಂಕಿಯಲ್ಲಿ ಸುಟ್ಟ ಎಳೆಬಾಳೆಯಂತೆ ಅತ್ಯುಷ್ಣವಾದ ಸೂರ್ಯನ ಬಿಸಿಲಿನಿಂದ ಕಂದಿದ ನಿನ್ನ ಸುಕುಮಾರಾಂಗವನ್ನು ನೋಡಿ ಸಹಿಸಿಕೊಂಡು ನಾನು ಬದುಕುವುದು ಹೇಗೆ ? ಅದು ಕಾರಣ ನೀನು ಇಲ್ಲೇ ಇರ ಬೇಕೆನ್ನಲು ಆಗ ಸೀತೆಯು-ಎಲೈ ಪ್ರಿಯನೇ! ಹೆಂಡತಿಯನ್ನು ಕಾಪಾಡಲಾರೆನಲ್ಲಾ ಎಂದು ಸಾಧಾರಣ ಜನರಂತೆ ವ್ಯಸನಪಡುತ್ತಿರುವುದರಿಂದ ನನ್ನ ತಂದೆಯಾದ ಜನ ಕನು ನಿನ್ನನ್ನು ಮಹಾವೀರನೆಂದು ತಿಳಿದು ಅನ್ಯಾಯವಾಗಿ ನಿನಗೆ ನನ್ನನ್ನು ಮದುವೆ ಮಾಡಿಕೊಟ್ಟವನಾಗಿರಬಹುದೇ ? ಅಥವಾ ನಾನು ಮಡಳೆಂದು ತಿಳಿದು ನಿನ್ನ ಮನೋಗತಾಭಿಪ್ರಾಯವನ್ನು ಹೊರಪಡಿಸದೆ ಬಾಯಿಯಲ್ಲಿ ಮಾತ್ರ ಹೀಗೆ ಮಾತಾ ಡುತ್ತಿರುವೆಯೋ ? ಒಳ್ಳೆಯದು, ಇದನ್ನೆಲ್ಲಾ ನಾನು ಬಲ್ಲೆನು, ನಿನ್ನ ಶಕ್ತಿ ಪರಾಕ್ರಮ ಗಳು ಲೋಕೋತ್ತರವಾದುವುಗಳೆಂಬುದನ್ನು ತಿಳಿಯದವರೊಡನೆ ನೀನು ಇಂಥ ಕಪಟ ವಚನಗಳನ್ನಾಡಬೇಕೇ ಹೊರತು ಸರ್ವಪ್ರಕಾರದಿಂದಲೂ ನಂಬಿದವಳಾದ ನನ್ನ ಡನೆ ಈ ರೀತಿಯಾಗಿ ಮಾತಾಡುವುದು ಉಚಿತವಲ್ಲವು. ಮಹಾತ್ಮನಾದ ನಿನ್ನೊಡನೆ ಇರುವ ನನಗೆ ದುಷ್ಟ ಮೃಗ ರಾಕ್ಷಸರ ಭೀತಿಯಂದರೇನು ? ಇಹಪರಗತಿದಾಯಕನಾದ ನಿನ್ನೊಡನೆ ಕಾಡಿನಲ್ಲಿದ್ದು ಕೊಂಡು ಗಡ್ಡೆಗೆಣಸುಗಳನ್ನು ತಿಂದು ಜೀವಿಸುತ್ತಿರುವುದೇ ನನಗೆ ಸ್ವರ್ಗಸೌಖ್ಯವು, ನಿನ್ನನ್ನು ಬಿಟ್ಟಿರುವುದಾದರೆ ಅದು ಸ್ವರ್ಗವಾದರೂ ನನಗೆ ಮಸಣವು. ನಾನು ನಿನ್ನೊಡನೆ ಇರುವುದಾದರೆ ಯಾವ ರಾಜಭೋಗಗಳನ್ನೂ ನೆನ ಸೆನು. ಇಷ್ಟ ರಮೇಲೂ ನೀನು ನನ್ನನ್ನು ಬಿಟ್ಟು ವನಕ್ಕೆ ಹೋದರೆ ನಾನು ಈ ಕ್ಷಣದ ಲ್ಲಿಯೇ ನಿನ್ನ ಮುಂದೆಯೇ ವಿಷವನ್ನು ಕುಡಿದು ಪ್ರಾಣಬಿಡುವೆನು ಎಂದು ಹೇಳಿ ರಾಮನನ್ನು ತಬ್ಬಿಕೊಂಡು ಧಾರಾರೂಪವಾಗಿ ಕಣ್ಣೀರನ್ನು ಸುರಿಸುತ್ತಿರಲು ರಾಮನು ಆಕೆಯ ದುಃಖವನ್ನು ನೋಡಿ ಸಮ್ಮತಿಸಿದವನಾಗಿ ನಿನ್ನ ವಸ್ತ್ರಾಭರಣಗಳನ್ನೆಲ್ಲಾ ಮುತ್ತೈದೆಯರಿಗೆ ದಾನಮಾಡಿ ಶೀಘ್ರವಾಗಿ ಹೊರಡುವುದಕ್ಕೆ ಸಿದ್ಧಳಾಗೆಂದು ಹೇಳಿ ದನು. " ಆಗ ಲಕ್ಷ್ಮಣನು ಅಣ್ಣನಾದ ರಾಮನ ಕಾಲುಗಳಮೇಲೆ ಬಿದ್ದು ದುಃಖಿ ಸುತ್ತ-ಎಲೆ ಅಣ್ಣನೇ ! ನಾನು ನಿನಗೆ ಹೊರಗಣ ಪ್ರಾಣವ. ಅದು ಕಾರಣ ನೀನು ನನ್ನನ್ನೂ ಸಂಗಡವೇ ಕರೆದು ಕೊಂಡು ಹೋಗು. ನೀನೂ ನನ್ನ ಅತ್ತಿಗೆಯ ಕಾಡಿನಲ್ಲಿ ಸ್ವಲ್ಪವಾದರೂ ಕಷ್ಟಪಡದಂತೆ ಶುಶೂಷೆಯನ್ನು ಮಾಡುತ್ತ ಮಧುರವಾದ ಕಂದಮ ಅಫಲಾದಿಗಳನ್ನು ನಿರ್ಮಲವಾದ ಶೀತಲೋದಕವನ್ನು ತಂದು ಕೊಡುತ್ತ ನಿಮಗೆ ಕ್ಷು ತಷೆಗಳ ಬಾಧೆಯುಂಟಾಗದಂತೆ ಮಾಡುವೆನು, ಮತ್ತು ರಾತ್ರಿವೇಳೆಯಲ್ಲಿ ಬಹು ಮೃದುವಾದ ಚಿಗುರುಗಳಿಂದ ಹಾಸಿಗೆಯನ್ನು ಮಾಡಿಕೊಟ್ಟು ನಿದ್ರಿಸುತ್ತಿರುವವರಾದ ನಿಮಗೆ ಕರೆ ಮೃಗಗಳಿಂದಲೂ ದುಷ್ಟ ರಾಕ್ಷಸರಿಂದಲೂ ಹಿಂಸೆಯುಂಟಾಗದ ಹಾಗೆ ಧನುರ್ಬಾಣಗಳನ್ನು ಧರಿಸಿಕೊಂಡು ಕಾದಿರುವೆನು ಎಂದು ಬಹು ಪ್ರಕಾರವಾಗಿ ಹೇಳಿಕೊಳ್ಳುತ್ತಿರುವ ತಮ್ಮನನ್ನು ಬರಬೇಡವೆಂದು ಎಷ್ಟು ವಿಧವಾಗಿ ಒಡಂಬಡಿಸಿ ದಾಕ್ಕೂ ಒಪ್ಪದಿರಲು ಆಗ ರಾಮನು ಲಕ್ಷ್ಮಣನನ್ನು ಸೀತೆಯನ್ನೂ ತನ್ನ ಸಂಗಡವೇ