ಪುಟ:ಕಥಾಸಂಗ್ರಹ ಸಂಪುಟ ೨.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೪ ನೆಯ ಭಾಗ ನಾವೆಲ್ಲರೂ ತಿರಿಗಿ ಸುಗ್ರೀವರಾಮರ ಸನ್ನಿಧಿಗೆ ಹೋಗಿ ನಮ್ಮ ಹೆಂಡಿರುಮಕ್ಕಳು ಗಳ ಮೋರೆಗಳನ್ನು ನೋಡುವೆವು. ಅಲ್ಲದೆ ನಮ್ಮೊ ಡೆಯನಾದ ಸುಗ್ರೀವನು ಕೃತಕ ತ್ಯನಾಗುವನು. ರಾಮನು ದುರ್ಮಾರ್ಗಪ್ರವರ್ತಕನಾದ ರಾವಣನನ್ನು ಕೊಂದು ಸೀತೆಯನ್ನು ಹೊಂದಿ ಸಂತೋಷಿಸುವನು. ಈ ಭಾಗದಲ್ಲಿ ನೀನು ಉದಾಸೀನಮಾಡಿ ದರೆ ರಾಮಲಕ್ಷ್ಮಣರೂ ಸುಗ್ರೀವನೂ ನಾವೂ ಪ್ರಾಣಗಳನ್ನು ಬಿಡುವುದು ನಿಶ್ಚಯ. ಅದು ಕಾರಣ ನೀನು ಧೈರ್ಯದಿಂದ ಈ ಕೆಲಸವನ್ನು ನಿರ್ವಹಿಸಬೇಕೆಂದು ಬೇಡಿಕೆ ಳ್ಳಲು ,ಆಗ ಹನುಮಂತನು ಉತ್ಸಾಹಸಂಪನ್ನನಾಗಿ ಅ೦ಗದ ಜಾಂಬವಂತ ಇವರೇ ಮೊದಲಾದವರೆಲ್ಲರನ್ನೂ ಸಮಾಧಾನಪಡಿಸಿ ಕಪಿಸೇನೆಗಳೊಡನೆ ಕೂಡಿ ಸಮುದ್ರದ ದಡದಲ್ಲಿರುವ ಮಹೇಂದ್ರ ಪರ್ವತದ ಮೇಲಕ್ಕೆ ಹತ್ತಿ ಅಲ್ಲಿಂದ ಆಕಾಶಮಾರ್ಗಕ್ಕೆ ನೆಗೆದು ಬರುತ್ತಿರುವ ಕಾಲದಲ್ಲಿ ಮೈನಾಕವೆಂಬ ಪರ್ವತವು ಸಮುದ್ರಮಧ್ಯದಿಂದ ಹೊರಟು ಬಂದು ಆಂಜನೇಯನನ್ನು ನಾನಾ ಪ್ರಕಾರವಾಗಿ ಉಪಚರಿಸಲು ಅವನು ಅದಕ್ಕೆ ಸಂತೋಷಪಟ್ಟು ನಾನು ಸೀತೆಯನ್ನು ಕಂಡು ಆ ವರ್ತಮಾನವನ್ನು ಶ್ರೀರಾ ಮನಿಗೆ ಹೇಳುವ ವರೆಗೂ ಅನ್ನೋದಕಗಳನ್ನು ಸ್ವೀಕರಿಸುವುದಿಲ್ಲ ವೆಂದು ಶಪಥಮಾಡಿ ದೇನೆ. ಆದುದರಿಂದ ನನ್ನ ಕಾರ್ಯವು ಶೀಘ್ರದಲ್ಲಿ ಕೈಗೂಡುವ ಹಾಗೆ ಅನುಗ್ರಹಿಸ ಬೇಕೆಂದು ಹೇಳಿ ಹೊರಟು ಅಲ್ಲಿಂದ ಮುಂದೆ ಹೋಗುತ್ತ ತನ್ನ ಶೌರ್ಯವನ್ನು ಪರೀ ಕಿ ಸಬೇಕೆಂದು ಇಂದ್ರನು ಕಳುಹಿಸಿದ ಸುರಸೆಯೆಂಬವಳನ್ನು ಉಪಾಯದಿಂದ ಜಯಿಸಿ ಮುಂದೆ ಹೋಗುತ್ತಿರಲು ತನ್ನನ್ನು ಕೊಂದುಹಾಕುವೆನೆಂದು ಆರ್ಭಟಿಸಿಕೊಂಡು ಬಂದ ಸಿಂಹಿಕೆಯೆಂಬ ರಾಕ್ಷಸಿಯನ್ನು ಎರಡು ಭಾಗವಾಗಿ ಸೀಳಿ ಒಂದು ಭಾಗವನ್ನು ಲಂಕಾಪಟ್ಟಣಕ್ಕೂ ಇನ್ನೊಂದನ್ನು ಜಾಂಬವಂತಾದಿಗಳಿರುವ ಸ್ಥಳಕೂ ಬಿಸುಟು ಅತಿ ವೇಗದಿಂದ ಹಾರಿ ಮುಂದಕ್ಕೆ ಬಂದು ಲ೦ಕಾಪಟ್ಟಣದ ಬಳಿಯಲ್ಲಿರುವ ಲಂಬನಾಮ ಕಪರ್ವತದ ಮೇಲೆ ಇಳಿದು ಲಂಕಾನಗರದ ಸೊಬಗನ್ನು ನೋಡಿ ತಲೆದೂಗಿದನು. - ಆ ನಗರದ ಸುತ್ತಲೂ ವಿರಾಜಿಸುತ್ತಿರುವ ಉದ್ಯಾನವನವು ನಾನಾವಿಧ ಪಲ್ಲವ ಪುಷ್ಪ ಫಲಭರಿತಗಳಾದ ಮರುಗ ಮಲ್ಲಿಗೆ ಜಾಜಿ ಸಂಪಿಗೆ ಸುರಗಿ ವಕುಳ ಸೇವಂತಿಗೆ ಪಾಟಲಿ ಕರವೀರ ಮತ್ತು ಕದಳಿ ನಾಳಿಕೇರ ಜಂಬು ಪನಸ ಚತ ನಿಂಬೆ ದಾಡಿಮ ದ್ರಾಕ್ಷಿ ಮಾದಲ ಅಂಜೂರ ಖರ್ಜೂರ ಲವಂಗ ಈ ಮೊದಲಾದ ಲತಾ ಗಳಿಂದ ಕೂಡಿ ಶುಕಪಿಕಶಾರಿಕಾದಿ ಪಕ್ಷಿಗಳಿಂದ ಒಪ್ಪುತ್ತಿರುವುದಾಗಿಯೂ ಕಮಲ ನೀಲೋತ್ಪಲ ಸೌಗಂಧಿಕಾರಿಗಳಿಂದಲೂ ನಿರ್ಮಲೋದಕಗಳಿಂದಲೂ ಮರಕತಶಿಲೆಗಳ ಸೋಪಾನಗಳಿಂದಲೂ ಹಂಸಕಾರಂಡ ಚಕ್ರವಾಕ ಕೌ೦ಚಾದಿ ಜಲಪಕ್ಷಿಜಾತಿಗಳಿಂ ದಲೂ ಕೂಡಿ ಶೋಭಾಯಮಾನಗಳಾದ ಸರಸ್ಸುಗಳಿಂದ ರಾಜಿಸುತ್ತಿರುವುದಾಗಿಯೂ ಶೈತ್ಯಸೌರಭ್ಯ ಮಾಂದ್ಯಯುಕ್ತವಾಗಿ ಬೀಸುತ್ತಿರುವ ವಾಯುವಿನಿಂದಲೂ ಮಕರಂದ ರಸಪಾನವನ್ನು ಮಾಡಿ ಮದಿಸಿರುವ ಭ್ರಮರಗಳ ಝೇಂಕಾರಗಳಿಂದಲೂ ಕೂಡಿ ಮನೋಹರವುಳ್ಳುದಾಗಿಯೂ ಹುಲ್ಲೆ ಎರಳೆ ಕಸ್ತೂರಿ ಚಮರಿ ಇವೇ ಮೊದಲಾದ ಮೃಗಗಳಿಂದಲೂ ವಿಚಿತ್ರ ರತ್ನ ನಿರ್ಮಿತಗಳಾದ ಕ್ರೀಡಾಪರ್ವತಗಳಿಂದಲೂ ಕೂಡಿ