ಪುಟ:ಕಥಾ ಸಂಗ್ರಹ - ಭಾಗ ೨.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

166 ಕಥಾಸಂಗ್ರಹ-೪ ನೆಯ ಭಾಗ ವಂದಿಸಿ ಮಹಾಚಲಸದೃಶ ಧೈರ್ಯಸಂಪನ್ನನಾಗಿ ಕೋದಂಡದಲ್ಲಿ ಬ್ರಹ್ಮಾಸ್ತ್ರವನ್ನು ಹೂಡಿ ಪ್ರಯೋಗಿಸಲು ; ಅದು ಮಹಾ ವೇಗದಿಂದ ಹೊರಟು ಎದುರಿಗೆ ಬರುತ್ತಿರುವ ಇಂದ್ರಜಾಣ ಪರಂಪರೆಯನ್ನು ಮೊದಲು ಕಡಿದು ಬೀಳಿಸಿ ಮುಂದೆ ಹೋಗಿ ಇಂದ್ರಜಿತ್ತನ ಶಿರಸ್ಸನ್ನು ಕಡಿದು ಆಕಾಶಕ್ಕೆ ಹಾರಿಸಿತು. ಆಗ ಪಾಕಶಾಸನನು ತಾನೇ ಸುರದುಂದುಭಿಯನ್ನು ಯಥೇಚ್ಛವಾಗಿ ಬಾರಿಸಿದನು. ಅನಂತರದಲ್ಲಿ ಇಂದ್ರ ಜಿನ ಶಿರಸ್ಸು ದಶಕಂಠನ ಭುಜಕೀರ್ತಿಯು ಭೂಮಿಗೆ ಬೀಳುವಂತೆ ಬಿದ್ದಿತು. ಇನ್ನೇನು ಹೇಳತಕ್ಕುದು ? ನಿಶಾಚರ ರಾಜ್ಯಲಕ್ಷ್ಮಿಯು ಆಪತ್ರವತಿಯಾದಳು. ರಾವಣನ ಧೈರ್ಯಲಕ್ಷ್ಮಿಯ ಕಣ್ಣುಗಳು ಹೋದುವು. ನಕ್ಕಂಚರ ಸಾರ್ವಭೌಮನ ವೀರಲಕ್ಷ್ಮಿಯ ತಲೆಯು ಬೋಳಿಸಲ್ಪಟ್ಟಿತು. ರಾಕ್ಷಸರ ಗರ್ವಾದಿಯು ಕುಸಿದು ಬಿದ್ದಿತು. ದುರ್ವೃತ್ತಿಯು ಮೂರ್ಛಹೋಯಿತು, ಸತ್ಕರ್ಮವು ಮೂರ್ಛ ತಿಳಿದೆದ್ದು ಕುಳಿತಿತು, ಧರ್ಮಾಭಿಮಾನ ದೇವತೆಯ ಹೃದಯದಲ್ಲಿ ವಿಕಾಸವುಂಟಾಯಿತು, ಪರಹಿಂ ಸೆಯ ತಲೆಯು ಕಳಚಿತು. ರಾವಣನ ಸಿರಿಯು ಮಗಿಲ್ಲ ದಾನನವಾಯಿತು. ರಾವ ಣನ ವಾಮಭೂಭುಜಗಳು ಹಾರಿದುವು. ನಿಶಾಚರ ಚಕ್ರವರ್ತಿಯ ಕೀರ್ತಿ ಕಾಂತೆಯ ಮುಂದಲೆಯು ವಿರೋಧಿಗಳ ಕೈಗೆ ಸಿಕ್ಕಿತು. ಅಪಜಯವು ಲಂಕಾದುರ್ಗ ದ್ವಾರ ಪ್ರವೇಶವನ್ನು ಮಾಡಿತು. ಹಾ ! ಹಾ ! ಅಯ್ಯೋ ! ಪರಭೀಕರವಾದ ಲಂಕಾ ರಾಜ ಧಾನಿಯೇ, ನಿನ್ನ ಅಂತಸ್ವಾರವು ಬರಿದಾಯಿತೇ ? ಎಂದು ನಿಶಾಚರ ಬ' ದಲ್ಲಿ ದುಃಖ ಧ್ವನಿಯ ಗದ್ದಲವೆದ್ದಿತು. ವಿಭೀಷಣನು ಶೀಘ್ರವಾಗಿ ಹೋಗಿ ಎರಡು ಕೈಗಳಿಂದಲೂ ಆ ತಲೆಯನ್ನೆತ್ತಿಕೊಂಡು ಅಪ್ಪಿ ಮುಂಡಾಡಿ ದುಃಖಿಸುತ್ತ--ಹಾ ! ಮಕ್ಕಳ ಮಾಣಿ ಕ್ಯವೇ ? ಅಯ್ಯೋ ರಾಕ್ಷಸ ಕುಲಕಂದಾ ! ದಶಗಳನ ಕಂದಾ ! ಮಡಿದುಹೋ ದಿಯಾ ? ಪಾಪಿಯಾದ ನಿನ್ನ ತಂದೆಯ ಪಾಪಕೃತ್ಯವು ನಿನಗೆ ಈ ಸ್ಥಿತಿಯನ್ನು ಕೊಟ್ಟಿ ತಲ್ಲದೆ ಲೋಕತ್ರಯದಲ್ಲೂ ನಿನ್ನನ್ನು ಜಯಿಸುವ ವೀರರುಂಟೇ ? ಇಂಥ ಕುಲದೀಪ ಕನಾದ ಪುತ್ರನನ್ನು ಕಳೆದುಕೊಂಡು ಬಾಳುವ ನಮ್ಮ ದುಸ್ಥಿತಿಗಿಂತಲೂ ಹೇಯವಾ ದುದು ಯಾವುದು೦ಟು ? ಪತ್ರ ಮಿತ್ರ ಭಾತೃವಧೆಗಳನ್ನು ಕಣ್ಣಾರೆ ಕಂಡೆನೇ ? ಹಾ ! ಮಗನೇ, ಹಗೆರಾಯ ಗಂಡನೇ, ಅರಿಗಳ ಶಿರಸ್ಸುಗಳನ್ನು ತರಿದೊಟ್ಟುವೆನೆಂದು ನನ್ನನ್ನು ಬೈಯ್ದಟ್ಟಿದಿಯಲ್ಲಾ? ನೀನಾದರೂ ಬಾಳಿದಿಯಾ ? ಹಾ ! ರಾಕ್ಷಸರಾಜ್ಯಾಂಬುಧಿ ಪೂರ್ಣಚಂದ್ರನೇ, ಶೂರನಾದ ನೀನು ಬಾಲ್ಯದಲ್ಲೇ ಇಂದ್ರನನ್ನು ಜಯಿಸಿದಿ, ಯಮ ನನ್ನು ಬಡಿದಿ, ಮರುತ್ತು ಬೇರಾದ್ಯರನ್ನು ಹೊಡೆದು ಮರ್ಛಗೊಳಿಸಿದಿ, ಎಲೈ ನನ್ನ ಸಿಡಿ ರಿಯೇ, ನನ್ನ ಜಿಂಕೆಯ ಎಳೆಮರಿಯೇ, ಎಲೈ ನನ್ನ ಮುಗುಳ್ಳಗೆಯ ಮುದ್ದು ಮೊಗದ ರನ್ನದ ಬೊಂಬೆಯೇ, ಅರಿಶರಕ್ಕೆ ಶಿರಸ್ಸನ್ನಿತ್ತು ಸತ್ತು ಎತ್ತ ಹೋದಿ ? ಎಲೈ ಪುತ್ರ ಚಿಂತಾರತ್ನ ವೇ, ಶ್ರೀರಾಮನನ್ನು ಹೊಗಳುತ್ತಿರುವ ನನ್ನನ್ನು ಬೈಯ್ಯು ಹೊಡೆ ಯದೆ ಏಕೆ ಸುಮ್ಮನಿರುವಿ ? ವೀರಾಗ್ರಗಣ್ಯನಾದ ನಿನಗಿದು ಭೂಷಣವೇ? ಶಿವಶಿವಾ! ಮಹಾದೇವಾ ! ಇಂಥ ಘೋರಕರ್ಮವನ್ನು ಕಂಡೆನೇ ? ಎಂದು ದುಃಖವೆಂಬ ಕಡಲಿ ನಲ್ಲಿ ಬಿದ್ದು ಕಡೆಗಾಣದೆ ತೇಲಿ ಮುಳುಗಿ ಮೂರ್ಛಹೋದನು. ಆಗ ಲಕ್ಷ್ಮಣ ಟಿ