ಪುಟ:ಪ್ರಬಂಧಮಂಜರಿ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಪ್ರಬಂಧಮಂಜರಿ ಎರಡನೆಯ ಭಾಗ ಚನಾಶಕ್ತಿ ಕುಂದುವುದು, ಕೆಲವರಸತೃಭಾವವೂ ಪರೀಕ್ಷೆಗಳಿಂದ ಕೆಡಬಹುದು, ಹುಡುಗರು ಪರೀಕ್ಷೆಗಳಲ್ಲಿ ಜತೆಯವರನ್ನು ಮೀರಿಸಬೇಕೆಂದುಹುರುಡಿನ ಮೇಲೆ ಓದುವುದರಿಂದ ತಮಗೆದೊರೆತಒಳ್ಳೆಯ ಪುಸ್ತಕಗಳನ್ನೂ ತೇರ್ಗಡೆಗೆ ಬೇಕಾದ ಇತರ ಸಾಧನಗಳನ್ನೂ ಜತೆಯವರಿಗೆ ಹೇಳದೆತಾವೇ ಬಳಸಿಕೊಂಡು ಸ್ವಾರ್ಥಪರರಾಗುವುದುಂಟು. ಪರೀಕ್ಷೆಗಳಲ್ಲಿ ಗೆಲ್ಲುವ ದುರಾಶೆಹೆಚ್ಚಿ, ಕೆಲವರು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಗಳನ್ನು ಬಗೆವಾಗ ಕಳ್ಳದಾರಿಗಳನ್ನವಲಂಬಿಸಿ ತಪ್ಪಿತವನ್ನು ಮಾಡಿ ಶಿಕ್ಷೆಗೆಗುರಿಯಾಗುವರು. ಇಂಥಕೆಟ್ಟ ಕೆಲಸಗಳನ್ನು ಹುಡು ಗರುಮಾಡದಂತೆಉಪಾಧ್ಯಾಯರೂ ತಾಯ್ತಂದೆಗಳೂ ನೋಡಿಕೊಳ್ಳಬೇಕು. ಸರ್ಕರದ ದೊಡ್ಡ ಹುದ್ದೆಗಳಿಗೆ ಅರ್ಹರನ್ನು ಆರಿಸಿಕೊಳ್ಳುವುದಕ್ಕಾಗಿಯ ಪರೀಕ್ಷೆಗಳನ್ನಿ ಡುವುದುಂಟು. ಆದರೆ ಪರೀಕ್ಷಾಗ್ರಂಥಗಳನ್ನು ಗಟ್ಟಿಮಾಡಿ ತೇರ್ಗಡೆಯಾದವರು ಸರ್ಕಾರದ ಕೆಲಸಗಳನ್ನು ಚೆನ್ನಾಗಿಮಾಡುವುದರಲ್ಲಿ ಸಮರ್ಥರಾಗಿರುವರೆಂಬುದು ಹೇಗೆ?'ಎಂದು ಕೇಳಬಹುದು. ಪರೀಕೈಗಳಲ್ಲಿ ಒಳ್ಳೆಯ ಬಯವನ್ನು ಹೊಂದಿದವರಲ್ಲಿ ಕೆಲವರು ಸರ್ಕಾರದ ಕೆಲಸ ಗಳನ್ನು ಮಾಡಲು ಸಮರ್ಥರಲ್ಲದೆ ಹೋಗಬಹುದು. ಎಲ್ಲರೂ ಹೀಗಾಗಲಾರರು. ಪ್ರಾಯಶಃ ತೇರ್ಗಡೆಯಾದವರಲ್ಲಿ ಮುಕ್ಕಾಲೂ ಮೂರು ವೀಸಪಾಟು ಜನರು ತೇರ್ಗಡೆಯಾಗದಿರುವರಿಗಿಂತ ಗಟ್ಟಿಗರಾಗಿರುತ್ತಾರೆನ್ನು ವುದರಲ್ಲಿ ಸಂಶಯವಿಲ್ಲ. ನಾನಾಭಾಷೆಗಳಲ್ಲಿರುವ ಗ್ರಂಥಗಳನ್ನೂ ಶಾಸ್ತ್ರಗಳನ್ನೂ ಓದಿ ತಿಳಿದುಕೊಂಡಿರುವವರು ಸಾಮಾನ್ಯವಾಗಿ ಬೇರೆಯಾವ ಕೆಲಸವನ್ನು ಕೊಟ್ಟ ರೂ ಚೆನ್ನಾಗಿಯೇ ಮಾಡುವರು. ಕಠಿನವಾದ ಪರೀಕ್ಷಾಗ್ರಂಥಗಳನ್ನು ಮನ *ಟ್ಟು ಓದಿ ಜ್ಞಾನವನ್ನು ಸಂಪಾದಿಸುವುದು. ಸರ್ಕಾರದ ಹುದ್ದೆಗೆಬೇಕಾದ ಬುದಿ ಚಾತುರ್ಯವನೂ, ಬೇಸರಪಡದೆ ಕೆಲಸಮಾಡುವ ಸ್ವಭಾವವನೂ, ತಾಳ್ಮೆಯನ್ನೂ ತೋರಿಸುತ್ತದೆ. ಆದುದರಿಂದ ಪರೀಕ್ಷೆಗಳಲ್ಲಿ ಗಟ್ಟಿಗರೇ ಸಾಮಾನ್ಯವಾಗಿ ಮುಂದಕ್ಕೆ ಬರುವರು. ಕೆಲಸಗಳಿಗೆ ಜನರನ್ನು ಆರಿಸುವುದಕ್ಕೆ ಬೇರೆ ಉತ್ತಮವಾದುಪಾಯವಾವುದೂ ಇನ್ನೂ ತೋರಿಲ್ಲ; ತೋರುವವರೆಗೂ ಪರೀಕ್ಷೆಗಳನ್ನೇ ಇಟ್ಟು ಕೊಳ್ಳಬೇಕಾಗಿದೆ. 42. ರಜಾ ದಿನಗಳು. ವಿರಾಮವಿಲ್ಲದೆಯಾವಾಗಲೂದುಡಿಯುತ್ತಿರುವುದು ಎಲ್ಲರಿಗೂ ಅಸಾಧ್ಯ.