ಪುಟ:ರಾಣಾ ರಾಜಾಸಿಂಹ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮] ಪಂಜರದೊಳಗಿನ ಸಿಂಹ ೧೫೩ wwwm svvvvvvvvwwwswomaxx wwwsws ಹತ್ತಿದವು ಆನೆಗಳು ಭಯಂಕರವಾಗಿ ಒದರುತ್ತ ಓಡಹತ್ತಿದವು. ಅವುಗಳ ಕಾಲಲ್ಲಿ ಸಿಕ್ಕು ಎಷ್ಟೋ ಜನರು ನುಗ್ದಾದರು ಪರ್ವತದ ಮೇಲೆ ರಜಪೂತರು ಇರುವೆಗಳ ಸಾಲುಗಳಂತೆ ಕಾಣುತ್ತಿದ್ದರು. ಅವರು ಸರಿಯಾಗಿ ನಿಂತು ಕೆಳ: ಗಾಯತಾಗದ ಜನರನ್ನು ಗುಂಡುಗಳಿಂದ ಹೊಡೆಯತೊಡಗಿದರು ಅದರಿಂದ ಔರಂಗಜೇಬನ ಜನರಲ್ಲಿ ಒಬ್ಬನ ಆ ಕಟ್ಟಿಗೆಯ ಗೋಡೆಯ ಹತ್ತರ ಹೋಗಲೊಲ್ಲನು ಈ ಸ್ಥಿತಿಯನ್ನು ಕಂಡು ಬಾದಶಹನ ವೃತ್ತಿಯು ಭಿನ್ನ ವಾಯಿತು. ಪುನಃ ಮತ್ತೊಮ್ಮೆ ಪ್ರಯತ್ನ ಮಾಡುವುದಕ್ಕೆ ಅಪ್ಪಣೆಯನ್ನು ಕೊಟ್ಟನು, ಅದೂ ಮೊದಲಿನಂತೆ ನಿರುಪಯೋಗವಾಯಿತು. ಮರಗಳ ಗೋಡೆಯನ್ನು ತೆಗೆಯುವದು ನಿಷ್ಪಲವಾಗುವದೆಂದು ಔರಂಗಜೇಬನು ಸೇನೆಯವರಿಗೆ ಹಿಂದುರಗ ಹೇಳಿದನು ಬಂದ ದಾರಿ ಯಿಂದ ಹಿಂದಿರುಗ ಹೋಗಬೇಕೆಂದು ಯತ್ನಿ ಸಿದನು, ಆದರೆ ಅದರಿo ದಲೂ ಪ್ರಯೋಜನವಾಗಲಿಲ್ಲ. ಯಾಕಂದರೆ ಬಂಡಿಯ ಹಿಂದಿನ ಮಗ್ಗಲೂ ದೊಡ್ಡ ದೊಡ್ಡ ಮರಗಳಿಂದ ತುಂಬಿ ಹೋಗಿತ್ತು ಆ ಮಗ್ಗ ಲಿಗೂ ಪವ- ತದ ಮೇಲೆ ರಜಪೂತರು ಸಾಲುಗೊಂಡಿದ್ದರು ನಾವು ಈ ಖಿಂಡಿಯಿಂದ ಹೊರಬೀಳದಿದ್ದರೆ ಅನ್ನ ನೀರುಗಳಿಲ್ಲದೆ ಇಲ್ಲಿಯೆ ಒದ್ದಾಡಿ ಸಾಯುವ ಹೊತ್ತು ಬರುವದೆಂದು ಔರಂಗಜೇಬನು ವಿಚಾರದಲ್ಲಿ ಬಿದ್ದನು. ಆದ್ದರಿಂದ ಪುನಃ ಪ್ರಯತ್ನ ಮಾಡುವದಕ್ಕೆ ಹುಕುಮು ಮಾಡಿದನು. ಈಗ ಮಾತ್ರ ಸ್ವಲ್ಪ ಪರಿಣಾಮವಾಯಿತು. ಯಾಕೆಂದರೆ ಇಷ್ಟರಲ್ಲಿ ಮಾರ್ಗವನ್ನು ದುರಸ್ತು ಮಾಡುವ ಜನರೂ ಅಲ್ಲಿಗೆ ಬಂದಿದ್ದರು. ಅವರಸಹಾಯದಿಂದ ಸ್ವಲ್ಪ ಗಿಡಗಳನ್ನು ತೆಗೆದು ಹಾಕಿದರು ರಜಪೂತರು ಪುನಃ ಅಲ್ಲಿನ ವರ್ಷಾವವನ್ನು ಸುರುವು ಮಾಡಿ ದರು. ಕೂಡಲೆ ಆ ಪ್ರಯತ್ನವೂ ವ್ಯರ್ಥವಾಯಿತು. ಜನರು ಹಿಂದಿ ರುಗಿದರು.