ಪುಟ:ರಾಣಾ ರಾಜಾಸಿಂಹ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ ಕಾಣಾ ರಾಜಸಿಂಹ [ಪ್ರಕರಣ • • • • • •

  • * * * * * * *vvvvvv

ನೆಯ ಪ್ರತಾಪನ ಮುಖವು ಪ್ರಫುಲ್ಲಿತವಾಯಿತು “ ನೀವು ನನ್ನ ಯುದ್ಧ ಕೌಶಲ್ಯವನ್ನು ನೋಡುವ ಸುಯೋಗವು ಒದಗಿದರೆ ನಾನು ಧನ್ಯನು ? « ಆದರೆ ಏನು ? ಪ್ರತಾಪರಾಯರೇ ನಿಮ್ಮ ಸಂಗಡ ಬಂದು ಯುದ್ಧ ಮಾಡಬೇಕೆಂಬ ಉತ್ಸಾಹವು ನನಗೆ ಅತಿಶಯವಾಗಿರುವದು. ?” -“ ನನ್ನ ಮೇಲಿನ ಈ ಪ್ರೇಮವನ್ನು ಕಂಡು, ನಾನು ಧನ್ಯ ನಾ ದೆನು. ? - ನನ್ನ ಪ್ರೇಮವು ನಿಮ್ಮ ಮೇಲಿರುವಂತೆ ನಿಮ್ಮ ಪ್ರೇಮವು ನನ್ನ ಮೇಲಿದೆಯೆ ? ?? “ ನನ್ನ ಪ್ರಾಣಕ್ಕಿಂತಲೂ ಅಧಿಕವಾಗಿ ಪ್ರೀತಿಸುತ್ತಿರುವೆನು.” ಕ್ಷಣಹೊತ್ತು ಇಬ್ಬರೂ ಸ್ತಬ್ಧರಾದರು, ಆಕಾಲದ ಇಬ್ಬರ ಮುಖಮುದ್ರೆಯು ನೋಡುವಂತಿತ್ತು” ಮಹಾರಾಣಿಯ ಮುಖದ ಮೇಲಿನ ಆ ರಕ್ತವರ್ಣವನ್ನೂ ಪ್ರತಾಪನ ಪ್ರಫುಲ್ಲಿತ ವದನವನ್ನು ನೋಡಿ ದರೆ, ಅವರಿಬ್ಬರ ಅಂತಃಕರಣದ ಸ್ಥಿತಿಯು ದೃಷ್ಟಿಗೋಚರವಾಗು ತಿತ್ತು. ಪ್ರತಾಪನು ಎದ್ದು ಮುಂದಕ್ಕೆ ಸರಿದುಬಂದು ರಾಣಿಯ ಕೈಯ್ಯನ್ನು ತನ್ನ ಕೈಯ್ಯಲ್ಲಿ ತಕ್ಕೊಂಡನು ಹಾಗು ಮೊಳಕಾಲು ನೆಲಕ್ಕೆ ಊರಿ ಗಂಭೀರಸ್ವರದಿಂದ ( ಈ ದಾಸನ ಕೋರಿಕೆಯನ್ನು ಪುರೈಸಿರಿ. ಕ್ಷಣಹೊತ್ತು ನನ್ನ ಕಡೆಗೆ ನೋಡಿ, ನಾನು ನಿನ್ನವಳಿರುತ್ತೇನೆಂದು ಹೇಳಿರಿ, ೨ ಮಹಾರಾಣಿಯು ಹಾಸ್ಯಯುಕ್ತಸ್ವರದಿಂದ-ಪ್ರತಾಪರಾಯರೇ, ನಾನು ನಿಮ್ಮವಳು ” ಕೂಡಲೆ ಪ್ರತಾಪನು ಎದ್ದನು. ಆ ಪ್ರಣಯಿಗ ಇಬ್ಬರೂ ಗಟ್ಟಿಯಾಗಿ ಅಪ್ಪಿಕೊಂಡರು, ಪ್ರತಾಪನ ಮುಖವು ಮಹಾ ರಾಣಿಯ ಮುಖದ ಸಮೀಪಕ್ಕೆ ಹೋಯಿತು, ಚುಂಬನದ ಪ್ರತಿಧ್ವನಿಯು ಸುತ್ತಲೂ ವ್ಯಾಪಿಸಿಕೊಂಡಿತು.