ಪುಟ:Abhaya.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಅಮ್ಮಾ!"

ಆ ಹುಡುಗಿ ತಿರುಗಿನೋಡಲಿಲ್ಲ.

"ಅಮ್ಮಾ!"

ತನ್ನನ್ನೆ ಕರೆದರೆಂಬ ಸಂದೇಹದಿಂದ ತಿರುಗಿ ನೋಡಿದ ಹುಡುಗಿ

ಕೇಳಿದಳು.

"ನನ್ನ ಕೂಗಿದಿರಾ?"

"ಹೂಂ....ಒಂದುಪಕಾರ ಮಾಡ್ತೀರಾ?"

"ಏನು,ಹೇಳಿ"

ನಿರಾಕರಣೆಯ ಉತ್ತರ ಬರದಿರಲಿ ದೇವರೇ ಎಂದು ಹಂಬಲಿಸುತ್ತ

ತುಂಗಮ್ಮ ಕೇಳಿದಳು

"ಅಭಯಧಾಮ ಎಲ್ಲಿದೆ ಸ್ವಲ್ಪ ತೋರಿಸ್ತೀರಾ?"

"ಏನಂದಿರಿ?"

"ಅಭಯಧಾಮ---"

"ಓ!"

ಸೂಕ್ಷ್ಮಮತಿಯಾದ ಹುಡುಗಿ, ತಿಳಿದುಕೊಂಡಳಲ್ಲವೆ? ಆಕೆ ನಕ್ಕ

ಹಾಗಾಯಿತೆ? ಪರಿಹಾಸ್ಯ ಮಾಡಿದಳೆ ತನ್ನನ್ನು?

ಆ ಕತ್ತಲಲ್ಲಿ ಅದೊಂದೂ ತುಂಗಮ್ಮನಿಗೆ ಕಾಣಿಸುತ್ತಿರಲಿಲ್ಲ. ಕ್ಷಣ

ಕಾಲ ತಡೆದು ನಿಂತ ಆ ಹುಡುಗಿ ತನ್ನನ್ನು, ಪಾದದಿಂದ ತಲೆಗೂದಲ ತನಕ ಎರಡು ಸಾರಿ ನೋಡಿದುದಂತೂ ನಿಜ. ತನ್ನ ಬಸಿರೂ ಒಳಗಾಗಿರಬೇಕು, ಆಕೆಯ ದೃಷ್ಟಿಗೆ

"ನನ್ಜತೇಲೆ ಬನ್ನಿ. ನಮ್ಮನೆಗೆ ಹೋಗೋ ಹಾದೀಲೇ ಇದೆ.

ತೋರಿಸ್ತೀನಿ...."

ತುಂಗಮ್ಮನ ಕಣ್ಣುಗಳು ತುಂಬಿ ಬಂದು, ಕತ್ತಿನ ನರಗಳು ಬಿಗಿದು

ಕೊಂಡುವು ಯಾವುದರ ದ್ಯೋತಕ ಆ ಕಂಬನಿ? ಅದು ದುಃಖಾಶ್ರುವೆ?ಆನಂದ ಬಾಷ್ಟವೆ? ಕೃತಜ್ಞತೆಯ ಕಣ್ಣೀರೆ?

ಯಾವ ಯೋಚನೆಯನ್ನೂ ಮಾಡದೆ ತುಂಗಮ್ಮ ಎಳೆಯ ಮಗುವಿನ

ಹಾಗೆ ಆ ಹುಡುಗಿಯನ್ನು ಹಿಂಬಾಲಿಸಿದಳು.