ಪುಟ:Abhaya.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೋದಳು. ಹೆಂಡೆಯಿಂದ ನೀರು ತೆಗೆದು ಬಾಯಿ ತೊಳೆದಳು,ತುಟ ತೊಳೆದಳು,"ಥು! ಎಂಜಲು! ಎಂಜಲು!" ಎಂದಳು.

ಆದರೆ ಸೆರಗಿನಿಂದ ಮುಖಿ ಒರೆಸಿಕೊಳ್ಳುತಿದ್ದಾಗ ಏನೋ ಒಂದು

ವಿಧವಾಯಿತು ತುಂಗಮ್ಮನಿಗೆ. ಅದೇ ಆಗ ಪುಟ್ಟದಾಗಿ ರೂಪುಗೊಳ್ಳುತಿದ್ದ ಎದೆ, ವೇಗದ ಉಸಿರಾಟಕ್ಕೆ ಸರಿಯಾಗಿ ಏರಿ ಇಳಿಯುತಿತ್ತು.

ಆತನನ್ನು ದ್ವೇಷಿಸಲು ಆಗಲೆ ತೀಮರ್ತನಿಸಿದ್ದಳಾಕೆ. ಅದರೆ

ಒಂದೆರಡೆ ನಿಮಿಷದೊಳಗೇ ಅ ತೀಮಾರ್ತಾನ ಕುಸಿದುಬಿತ್ತು.ಮನೆಯೊಳಗೆ ಒಂದುಕ್ಷಣ ಗೋಡೆಗೊರಗಿ ಕಣ್ಣು ಮುಚ್ಚಿ ನಿಂತಳು ತುಂಗಮ್ಮ.... ಸಂತೋಷ ವಡಬೇಕ ದುಖವಡಬೇಕ ಎಂಬುದೇ ತಿಳಿಯದೆ ಹೋಯಿತು ಆಕೆಗೆ....ಅಕೆಯ ಮಃಖ ಮೈ ಉರಿಯುತಿದುವು.ಹೆಚ್ಚು ಹೊತ್ತು ಅಲ್ಲಿಯೆ ನಿಂತಿರುವುದು ಸಾಧ್ಯವಿರಲಿಲ್ಲ.ಹೊರಗೆ ಅಕ್ಕ ತನ್ನ ಹಾದಿನೋಡುತಿದ್ದಳಲ್ಲವೆ? ತಂದೆ ಯಾವ ಕ್ಷಣವಾದರೂ ಬಂದು ಕರೆಯಬಹುದಲ್ಲವೆ?

ತುಂಗಮ್ಮ ಚಪ್ಪರದತ್ತ ಬಂದಳು ಆದರೆ ಎಲ್ಲರೂ ತನ್ನನ್ನೇನೋಡು

ತ್ತಿದ್ದಂತೆ ಆಕೆಗೆ ಭಾಸವಾಯಿತು. ಅದರೆ ನಿಜವಾಗಿ ಮೈಸುರಿನ ಅತನನ್ನು ಹೊರತು, ಬೇರೆಯಾರೂ ತುಂಗಮ್ಮನನ್ನು ದಿಟ್ಟಸುತ್ತಿರಲಿಲ್ಲ. ತುಂಗಮ್ಮ ತಲೆ ಎತ್ತಲೇ ಇಲ್ಲಿ. ಆತನೆಲ್ಲಾದರೂ ತನ್ನ ಕಣ್ಣಗೆ ಬೀಳಬಹುದೆಂದು ಅಕೆಗೆ ಭಯವಾಯಿತು.

ಅಕ್ಕ ಕೇಳಿದಳು:

"ಎಲ್ಹೋಗಿದ್ಯೇ ಇಷ್ಟೊತ್ತು?"

"ಹೊಂ?"

"ಏನ್ಮಾಡ್ತಿದ್ದೆ ಒಳಗೆ?"

"ಬಚ್ಚಲು ಮನೆಗೆ ಹೋಗಿದ್ದೆ ಅಕ್ಕಾ."

ಸತ್ಯ ಮತ್ತು ಸುಳ್ಳು-ಎರಡೂ. ಆದರೆ ಏನೆಂದು ಹೇಳಬೇಕು

ಅಕ್ಕನಿಗೆ? ತುಂಗಮ್ಮನಿಗೆ ಗೊತ್ತಿತ್ತು.ಅಕ್ಕನನ್ನು ಯಾರು ಆವರೆಗೆ ಮುದ್ದಿಟ್ಟರದಿಲ್ಲಿ.ಆ ದಿನವಷ್ಟೇ ಮದುವೆ....ಆದರೆ ತನ್ನನ್ನು ಮಾತ್ರ ಆತ....

ಒಣಗಿದ್ದ ತುಟಗಳನ್ನು ತನ್ನ ನಾಲಿಗೆಯ ಎಂಜಲಿನಿಂದ ಸವರಿ

ಕೊಂಡಳು ತುಂಗಮ್ಮ.