ಪುಟ:ಕಥಾಸಂಗ್ರಹ ಸಂಪುಟ ೨.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 119 ವಾಯಿತು. ಲಂಕಾಪಟ್ಟಣವನ್ನು, ಸೇರಬೇಕಾದರೆ ಇನ್ನೂ ನಲವತ್ತು ಯೋಜನಗಳ ವರೆಗೂ ಸೇತು ನಿರ್ಮಾಣ ಕಾರ್ಯವು ನಡೆಯಬೇಕಾಗಿದೆ. ಆಗ ದಯಾಳುವಾದ ಶ್ರೀರಾಮನುಕಪಿವೀರರೆಲ್ಲರೂ ಬಹಳವಾಗಿ ಶ್ರಮ ಪಟ್ಟು ಕಂಗೆಟ್ಟಿದ್ದಾರೆ ಎಂದು ಸುಗ್ರೀವ ವಿಭೀಷಣ ಜಾಂಬವಂತರೊಡನೆ ಯೋಚನೆ ಮಾಡುತ್ಯ ಸಮೀಪದಲ್ಲಿ ತನ್ನ ಕಾಲನ್ನೊ ತ್ತುತ್ತಿರುವ ನಿಜದಾಸನೂ ಅಸಹಾಯ ಶೂರನೂ ಆಗಿರುವ ಹನುಮಂತನ ಮುಖವನ್ನು ನೋಡಲು ಆತನು ಜಗ್ಗನೆದ್ದು ಕಡಲೆ ಮೇರುಪರ್ವತವಿದ್ದೆಡೆಗೆ ಹಾರಿ ಅದರ ಸಮಾಸದಲ್ಲಿ ನಿಂತು ಆ ಗಿರಿಯನ್ನು ಬುಡದಿಂದ ತುದಿಯ ವರೆಗೂ ಚೆನ್ನಾಗಿ ನೋಡಿ-ಇದು ಲಕ್ಷ ಯೋಜನಗಳ ಉದ್ದವೂ ಲಕ್ಷ ಯೋಜನಗಳ ಅಗಲವೂ ಉಳ್ಳದ್ದಾಗಿರುವುದು. ಲವಣಾಂಬುಧಿಯೂ ಕೂಡ ಲಕ್ಷ ಯೋಜನಗಳ ಅಗಲವೂ ಲಕ್ಷಯೋಜನಗಳ ಉದ್ದವೂ ಇರುವುದರಿಂದ ಈ ಒಂದು ಗಿರಿಯನ್ನು ಕಿತ್ತು ತೆಗೆದುಕೊಂಡು ಹೋಗಿ ಅದರಲ್ಲಿ ಹಾಕಿಬಿಟ್ಟರೆ ಆ ಉಪ್ಪುನೀರ್ಗ ಡಲೇ ಹೂತು ನಿರ್ನಾಮವಾಗಿ ಭೂಮಿಯಾಗುವುದು ಎಂದೆಣಿಸಿ ಆ ಗಿರಿಯ ತೋರ ಉದ್ದಗಳಿಗೆ ಸರಿಯಾಗಿ ತನ್ನ ಶರೀರವನ್ನು ಬಳಸಿ ತನ್ನ ಮಹಾ ದೀರ್ಘವಾದ ಬಾಲ ವನ್ನು ಆ ಪರ್ವತಕ್ಕೆ ಮರು ಸುತ್ತು ಸುತ್ತಿ ಕೀಳಲು ಆಗ ಕೆಳಗಣ ಸಪ್ತ ಲೋಕ ಗಳೂ ಉಲ್ಲೋಲಕಲ್ಲೋಲವಾಗಿ ಸತ್ಯ ಲೋಕದಲ್ಲಿ ಬ್ರಹ್ಮನು ತನ್ನ ಸಿಂಹಾಸನದಿಂದ ಕೆಳಗೆ ಬಿದ್ದುರುಳಿ ಶೀಘ್ರದಿಂದೆದ್ದು -ಇದೇನು ಪರಮಾಶ್ಚರ್ಯವು ! ಅಕಾಲದಲ್ಲಿ ಸಕಲ ಲೋಕಗಳಿಗೂ ಅವಸಾನಕಾಲವು ಸಂಪ್ರಾಪ್ತವಾಗಿರುವುದಲ್ಲಾ ಎಂದು ಯೋಚಿಸಿ ಕಡೆಗೆ ತನ್ನ ಜ್ಞಾನದೃಷ್ಟಿ ಯಿ೦ದ-ಇದು ಧರ್ಮಸಂಸ್ಥಾಪನಾರ್ಥವಾಗಿ ನರಲೋಕದಲ್ಲಿ ಮನುಜಲೀಲೆಯಿಂದ ನಟಿಸುತ್ತಿರುವ ಮಹಾ ವಿಷ್ಣುವಿನ ಮಹಿಮಾತಿಶ ಯವು. ಹಾಗಲ್ಲದಿದ್ದರೆ ಗಿಡಮರಗಳ ಮೇಲಾಡುವ ಕೋಡಗಗಳಿಗೆ ಇಷ್ಟು ಕಲಿತ ನವು ಎತ್ತಣಿಂದ ಒರುವದು ಎಂದು ಶೀಘ್ರವಾಗಿ ಅಲ್ಲಿಂದ ಹೊರಟು ಆಂಜನೇಯನ ಬಳಿಗೆ ಬಂದು-ಇದೇನಿದೇನುದ್ದಂಡತನವು ? ವಾನರ ವೀರರ ಕಟಕದಲ್ಲಿ ನೀನು ಹುಚ್ಚನೋ ? ಮೂರ್ಖನೋ ? ಅಥವಾ ರಾಮನಿಗೆ ಹಗೆಯೋ ? ಪ್ರಿಯನೋ ? ಆಹಾ, ವಿಪರೀತ ಕಾರ್ಯವನ್ನು ಕೈಗೊಂಡಿರುವೆಯಲಾ! ನಿನ್ನ ಪರಾಕ್ರಮಾತಿಶ ಯಕ್ಕೆ ಫಲವಾವುದು ? ಅದನ್ನು ಹೇಳು. ನಾವು ಕೇಳುವೆವು ಎನ್ನಲು ಹನುಮಂತನು ಸಾರದೆಯಾಣ್ಮನನ್ನು ಕುರಿತು ಅದನ್ನು ಹೇಳಿ, ನಾನು ಮಾಡುವುದೇನು ? ಕೇಳಿ ನೀವು ಮಾಡುವುದೇನು ? ನಮಳಿಗದ ವಿಚಾರವು ನಿಮಗೇಕೆ ? ನನ್ನನ್ನು ಮಾತಾ ಡಿಸುವುದರಿಂದ ನಿಮಗಾಗುವ ಪ್ರಯೋಜನವಾವುದು ? ನೀವು ನನಗದನ್ನು ಮೊದಲು ಹೇಳಿರಿ ಎನ್ನುತ್ತ ಬೊಮ್ಮನನ್ನು ಗಣಿಸದೆ ಆ ಮಹೀಧರವನ್ನು ಬರಸೆಳೆದು ಕೀಳುವು ದರಲ್ಲಿ ಉದ್ಯುಕ್ತನಾದನು. ತಿರುಗಿ ತಾವರೆಯಣುಗನು– ಎಲಾ, ನೀನು ಹುಡುಗ ನಾಗಿದ್ದೀಯೆ ? ನಿನಗೆ ಸ್ವಲ್ಪವಾದರೂ ಬುದ್ದಿಯಿಲ್ಲವಲ್ಲಾ ! ಈ ಗಿರಿಯನ್ನು ಕಿತ್ತು ಹಾಕುವುದರಿಂದ ಸುರನರೋರಗಾದಿ ಜಗಜೀವಿಗಳ ಪ್ರಾಣಲತಾಸಂಚಯವು ಮಲೋತ್ಸಾಟಿತವಾಗದಿರುವುದೇ ? ಈ ಮಹಾ ಗಿರಿಯು ವಿವಿಧವಾದ ಲೋಕಾವ